ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರ, 4–9–1967

Last Updated 3 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಲೋಕಪಾಲರ ನೇಮಕ: ಪಾರ್ಲಿಮೆಂಟಿನ ಮುಂದಿನ ಅಧಿವೇಶನದಲ್ಲಿ ಮಸೂದೆ
ಬೆಂಗಳೂರು, ಸೆ. 3–
ಲೋಕಪಾಲ ಮತ್ತು ಲೋಕ ಆಯುಕ್ತರ ನೇಮಕದ ಬಗೆಗೆ ಭಾರತದ ಆಡಳಿತ ಸುಧಾರಣಾ ಆಯೋಗವು ಸಲ್ಲಿಸಿರುವ ಶಿಫಾರಸುಗಳ ರೀತ್ಯ ಕೇಂದ್ರ ಸರಕಾರ ಮುಂದಿನ ಪಾರ್ಲಿಮೆಂಟ್ ಅಧಿವೇಶನದಲ್ಲಿ ಮಸೂದೆಯೊಂದನ್ನು ತರಲಿದೆ.

ಭಾರತದ ರಾಜಕೀಯ ರಂಗದಲ್ಲೇ ಐತಿಹಾಸಿಕ ಕ್ರಮವಾಗಲಿರುವ ಈ ಹುದ್ದೆಗಳ ನೇಮಕದಿಂದ ಸಾರ್ವಜನಿಕ ರಂಗದಲ್ಲಿ ಮಂತ್ರಿಗಳ ಮತ್ತು ಇಲಾಖಾ ಕಾರ್ಯದರ್ಶಿಗಳ ಬಗೆಗೆ ಬರುವ ಸಾರ್ವಜನಿಕ ದೂರನ್ನು ಪರಿಶೀಲಿಸಿ, ತಪ್ಪಿದ್ದಲ್ಲಿ ಕ್ರಮ ಕೈಗೊಳ್ಳುವ ಅಥವಾ ನಿರ್ದೋಷಿಗಳಾಗಿದ್ದಲ್ಲಿ ಅಂತಹವರನ್ನು ದೋಷಮುಕ್ತರನ್ನಾಗಿ ಮಾಡುವ ಅವಕಾಶ ದೊರಕುವುದೆಂದು ಆಯೋಗದ ಅಧ್ಯಕ್ಷ ಶ್ರೀ ಕೆ. ಹನುಮಂತಯ್ಯನವರು ಇಂದು ವರದಿಗಾರರಿಗೆ ತಿಳಿಸಿದರು.

ಕಾಶ್ಮೀರ ಪಂಡಿತರ ಚಳವಳಿ ಮುಕ್ತಾಯ
ಶ್ರೀನಗರ, ಸೆ. 3–
ಕೇಂದ್ರದ ಗೃಹಸಚಿವ ಶ್ರೀ ವೈ.ಬಿ. ಚವಾಣ್ ಅವರು ಮಧ್ಯೆಪ್ರವೇಶಿಸಿದ ಫಲವಾಗಿ ಕಾಶ್ಮೀರ ಪಂಡಿತರು ನಡೆಸುತ್ತಿದ್ದ ಚಳವಳಿಯನ್ನು ಇಂದು ನಿಲ್ಲಿಸಲಾಗಿದೆ.

22 ದಿನಗಳ ಕಾಲ ನಡೆದ ಈ ಚಳವಳಿಯಲ್ಲಿ ಮೂವರು ಮೃತಪಟ್ಟು ಕೆಲವು ನೂರು ಮಂದಿ ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT