ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ನಿಲುಗಡೆಗೆ ಸ್ಥಳ ಹುಡುಕುತ್ತಾ..

Last Updated 4 ಸೆಪ್ಟೆಂಬರ್ 2017, 5:33 IST
ಅಕ್ಷರ ಗಾತ್ರ

ಗದಗ: ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ಅದಕ್ಕೆ ತಕ್ಕಂತೆ ರಸ್ತೆ ಮತ್ತು ನಿಲುಗಡೆ ಸೌಲಭ್ಯ ಅಭಿವೃದ್ಧಿಗೊಳ್ಳದಿರುವುದು ಸಂಚಾರ ದಟ್ಟಣೆ ಹೆಚ್ಚುವಂತೆ ಮಾಡಿದೆ. ನಗರದ ವ್ಯಾಪ್ತಿಗೆ ಬರುವ ಮುಖ್ಯ ರಸ್ತೆಗಳು ಈಗಿನ ಜನಸಂಖ್ಯೆಗೆ ಹೋಲಿಸಿ ದರೆ ತೀರಾ ಚಿಕ್ಕದಿದ್ದು, ಹಬ್ಬ, ಜಾತ್ರೆ, ವಿಶೇಷ ದಿನಗಳಲ್ಲಿ ವಾಹನಗಳಿಂದ ಕಿಕ್ಕಿ ರಿದು ತುಂಬಿರುತ್ತವೆ. ನಗರದಲ್ಲಿ ಎಲ್ಲೂ ಸಾರ್ವಜನಿಕ ವಾಹನ ನಿಲುಗಡೆ ಪ್ರದೇಶ ಇಲ್ಲದಿರುವುದು ಸಮಸ್ಯೆಗೆ ಕಾರಣ.

‘ತೋಂಟದಾರ್ಯು ಮಠದ ಎದುರಿ ನಿಂದ ಟಾಂಗಾಕೂಟದವರೆಗೆ ರಸ್ತೆಯ ಎಡ ಮತ್ತು ಬಲ ಭಾಗದಲ್ಲಿ ಸರತಿಯಂತೆ ವಾರದಲ್ಲಿ ಮೂರು ದಿನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಆದರೂ ವಾಹನ ಸವಾರರು ಇದನ್ನು ಪಾಲಿಸುತ್ತಿಲ್ಲ. ಬೇರೆಡೆ ನಿಲುಗಡೆ ಕಲ್ಪಿಸಬೇಕಾದರೆ ಜಾಗದ್ದೇ ಸಮಸ್ಯೆ. ನಗರದಲ್ಲಿ  ನಿಲುಗಡೆಗೆ ಸ್ಥಳ ಇಲ್ಲ ವಾದ್ದರಿಂದ ಸ್ಟೇಷನ್ ರಸ್ತೆ, ಹುಯಿಲ ಗೋಳ ನಾರಾಯಣರಾವ್ ವೃತ್ತ, ಮಾರು ಕಟ್ಟೆ, ಜವಳಿ ಬಜಾರ ಮುಂತಾದ ಕಡೆ ಸದಾ ಸಂಚಾರ ದಟ್ಟಣೆ ಇರುತ್ತದೆ’ ಎನ್ನು ತ್ತಾರೆ ಸಾರಿಗೆ ಅಧಿಕಾರಿಗಳು.

ನಗರದ ಮಹೇಂದ್ರಕರ್ ಸರ್ಕಲ್, ಹುಯಿಲಗೋಳ ನಾರಾಯಣರಾವ್ ವೃತ್ತ, ಬಸವೇಶ್ವರ ವೃತ್ತ, ತರಕಾರಿ ಮಾರುಕಟ್ಟೆ, ಮಹಾತ್ಮ ಗಾಂಧಿ ವೃತ್ತ, ಹಳೇ ಜಿಲ್ಲಾಸ್ಪತ್ರೆ, ರೋಟರಿ ಸರ್ಕಲ್ ಮಾರ್ಗಗಳಲ್ಲಿ ವಾಹನ ದಟ್ಟಣೆಯಿಂದ ಪ್ರತಿನಿತ್ಯ ಸಾರ್ವಜನಿಕರು ತೊಂದರೆ ಅನುಭವಿಸುವುದು ಸಾಮಾನ್ಯವಾಗಿದೆ. ಪ್ರತಿ ನಿತ್ಯ ಒಂದಿಲ್ಲೊಂದು ಸಣ್ಣ ಪುಟ್ಟ ಅಪಘಾತಗಳು ಇಲ್ಲಿ ಸಾಮಾನ್ಯ. ಪ್ರತ್ಯೇಕ ಪಾರ್ಕಿಂಗ್‌ ಸ್ಥಳ ಇಲ್ಲದಿರುವು ದರಿಂದ ಸಂಜೆಯಾಗುತ್ತಿದ್ದಂತೆ ಎಲ್ಲಿ ಬೇಕೆಂದರಲ್ಲಿ ವಾಹನ ನಿಂತು ಈ  ಪ್ರದೇ ಶಗಳು ಕಿಷ್ಕಿಂದೆಯಂತಾಗುತ್ತವೆ. ಪಾದ ಚಾರಿ ಮಾರ್ಗವೂ ಸೇರಿದಂತೆ ಅರ್ಧ ರಸ್ತೆಯನ್ನೇ ವಾಹನ ನಿಲುಗಡೆಗೆ ಬಳಸಿ ಕೊಳ್ಳಲಾಗುತ್ತದೆ.

‘ನಗರದಲ್ಲಿ ಸದ್ಯ ಇರುವ ವಾಹನ ಗಳ ಸಂಖ್ಯೆಗೆ ಹೋಲಿಸಿದರೆ ರಸ್ತೆಯ ಸಾಮರ್ಥ್ಯ ತುಂಬಾ ಕಡಿಮೆ ಇದೆ. ಹೀಗಾಗಿ, ಮುಂದಿನ 25 ವರ್ಷಗಳ ಮುನ್ನೋಟವನ್ನು ಗಮನದಲ್ಲಿ ಇಟ್ಟು ಕೊಂಡು,  ಹೆಚ್ಚುತ್ತಿರುವ ಜನಸಂಖ್ಯೆಗೆ ತಕ್ಕಂತೆ ನಗರಸಭೆ ನಗರದ ಮೂಲ ಸೌಕರ್ಯ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧ ಪಡಿಸಬೇಕು. ಮುಖ್ಯವಾಗಿ ವಾಹನ ನಿಲು ಗಡೆಗೆ ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಎಸ್‌.ಪಿ.ಸಂಶಿಮಠ ಅವರು.

‘ಸ್ಟೇಷನ್‌ ರಸ್ತೆಯಲ್ಲಿ ಎಸ್‌ಬಿಎಂ ಪಕ್ಕದಲ್ಲಿರುವ  ಜವಳ ನಾಲಾ ಮೇಲೆ (ದೊಡ್ಡ ಚರಂಡಿ) ಸ್ಲ್ಯಾಬ್‌ ಹಾಕಿ, ಅದರ ಮೇಲೆ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸುವಂತೆ ನಗರಸಭೆಗೆ ಈಗಾಗಲೇ ಮನವಿ ಸಲ್ಲಿಸಿದ್ದೇವೆ. ಜಿಲ್ಲಾಡಳಿತ, ನಗರಸಭೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಈಗ ನಿಲುಗಡೆ ಸಮಸ್ಯೆಗೆ ಪರಿಹಾರ ಹುಡುಕಬೇಕು’ ಎನ್ನುತ್ತಾರೆ ಅವರು.

‘ಬೃಹತ್‌ ಅಂಗಡಿ, ಮಳಿಗೆ  ಸೇರಿದ ವಾಣಿಜ್ಯ ಉದ್ದೇಶದ ಕಟ್ಟಡಗಳ ಕೆಳಗೆ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸ ಬೇಕು. ಆದರೆ, ನಗರದ ಯಾವುದೇ ಕಡೆ ಇಂತಹ ವ್ಯವಸ್ಥೆ ಇಲ್ಲ. ವಾಣಿಜ್ಯ ಕಟ್ಟಡ ಗಳ ಮಾಲೀಕರು  ನಿಲುಗಡೆಗಾಗಿ ಮೀಸ ಲಿಟ್ಟ ಸ್ಥಳವನ್ನು ಗೋದಾಮಾಗಿ ಪರಿ ವರ್ತಿಸಿ ಬಾಡಿಗೆಗೆ ಕೊಟ್ಟಿದ್ದಾರೆ, ಪಾರ್ಕಿಂಗ್‌ ಪರಿಕಲ್ಪನೆಯೇ ನಗರದಲ್ಲಿ ಇಲ್ಲ. ಜನರಿಗೆ ಅನುಕೂಲವಾಗುವಂತೆ ನಗರದ ಒಂದೆರಡು  ಸ್ಥಳದಲ್ಲಿ ನಗರ ಸಭೆಯೇ ವಾಹನ ನಿಲುಗಡೆಗೆ ಸ್ಥಳ ಗುರು ತಿಸಿ ಸೌಲಭ್ಯ ಕಲ್ಪಿಸಬೇಕು’ ಎಂದು ಆಗ್ರಹಿ ಸುತ್ತಾರೆ ವಿವೇಕಾನಂದ ಬಡಾವಣೆಯ ನಿವಾಸಿ ಸಿ.ವಿ.ಹಿರೇಮಠ.

* * 

ಸಾರ್ವಜನಿಕ ನಿಲುಗಡೆಗೆ ಅವಕಾಶ ಕಲ್ಪಿಸಲು ನಗರದ 3 ಕಡೆ ಈಗಾಗಲೇ ಸ್ಥಳ ಗುರುತಿಸಲಾಗಿದೆ. ಜಿಲ್ಲಾಡಳಿತ, ನಗರಸಭೆ ಮತ್ತು ಪೊಲೀಸ್‌ ಇಲಾಖೆ ಜಂಟಿಯಾಗಿ ಈ ಸಮಸ್ಯೆ ಬಗೆಹರಿಸಲಿದೆ
ಕೆ.ಸಂತೋಷಬಾಬು
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT