ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯ ವಂಚಿತ ಹಾಡೇ ಗ್ರಾಮ

Last Updated 4 ಸೆಪ್ಟೆಂಬರ್ 2017, 5:58 IST
ಅಕ್ಷರ ಗಾತ್ರ

ರಟ್ಟೀಹಳ್ಳಿ: ಬುಳ್ಳಾಪುರ ಗ್ರಾಮದಿಂದ ಒಂದೂವರೆ ಕಿ.ಮೀ. ದೂರವಿರುವ ಹಾಡೇ ಗ್ರಾಮ ಮೂಲಸೌಕರ್ಯಗಳಿಂದ ಸಂಪೂರ್ಣವಾಗಿ ವಂಚಿತವಾಗಿದೆ. ಗ್ರಾಮದಲ್ಲಿ ಕಿರಿಯ ಪ್ರಾಥಮಿಕ ಶಾಲೆಯೊಂದನ್ನು ಬಿಟ್ಟರೆ ಎಲ್ಲದಕ್ಕೂ ಬುಳ್ಳಾಪುರ ಮತ್ತು ತುಮ್ಮಿನಕಟ್ಟಿ ಗ್ರಾಮಗಳನ್ನು ಅವಲಂಬಿಸಬೇಕು. ಕೇವಲ 120 ಮನೆಗಳಿರುವ ಈ ಗ್ರಾಮ ದ್ವೀಪ ಪ್ರದೇಶದಂತಿದೆ. ಒಂದು ಕಡೆ ಬುಳ್ಳಾಪುರ ರಸ್ತೆ ಮಾರ್ಗ ಬಿಟ್ಟರೆ ಉಳಿದ ಕಡೆಯೆಲ್ಲ ಬೆಟ್ಟ, ಗುಡ್ಡ ಹಾಗೂ ಹೊಲಗಳಿಂದ ಕೂಡಿದೆ.

ಗ್ರಾಮದಿಂದ ಮುಂದೆ ಯಾವುದೇ ಊರಿಗೆ ಸಂಪರ್ಕ ಇರದ ಕಾರಣ ಬಸ್ ಸಂಚಾರವಿಲ್ಲ. ಖಾಸಗಿ ವಾಹನಗಳನ್ನು ನಂಬಿ ಬದುಕಬೇಕಾಗಿದೆ. ಸುಸಜ್ಜಿತ ಗಟಾರ ವ್ಯವಸ್ಥೆ ಇಲ್ಲದಿರುವುದರಿಂದ ಗ್ರಾಮದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಜ್ವರ ಸೇರಿದಂತೆ ಕೆಲ ಕಾಯಿಲೆಗಳು ಸಾಮಾನ್ಯವಾಗಿವೆ. ಅಲ್ಲದೆ, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.

‘ಕಡೂರ ಗ್ರಾಮ ಪಂಚಾಯ್ತಿಗೆ ಒಳಪಡುವ ಈ ಗ್ರಾಮ ಸ್ವಚ್ಛತೆಯಲ್ಲಿ ಹಿಂದುಳಿದಿದೆ. ಯಾವಾಗಲಾದರೊಮ್ಮೆ ಗಟಾರ ಸ್ವಚ್ಛ ಮಾಡುವುದರಿಂದ ಈ ಸ್ಥಿತಿ ಉದ್ಭವಿಸಿದೆ’ ಎಂದು ಸಂತೋಷ ಗಟ್ಟಿಬೋರಣ್ಣನವರ ತಿಳಿಸಿದರು.

‘ಗ್ರಾಮದಲ್ಲಿ ಈಗಾಗಲೆ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ಯಂತ್ರಗಳ ಸೌಲಭ್ಯ ನೋಡಿಕೊಂಡು ಫಾಗಿಂಗ್ ಮಾಡಲಾಗುವುದು. ಗ್ರಾಮದ ಸ್ವಚ್ಛತೆಗೆ ಪಂಚಾಯ್ತಿ ಬದ್ಧವಾಗಿದೆ’ ಎಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ನಾಗರತ್ನ ಮುದ್ದಪ್ಪಳವರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ.  ಭಾನುವಾರ ಗ್ರಾಮಕ್ಕೆ ಭೇಟಿ ನೀಡಿ ಚಿಕಿತ್ಸೆ ನೀಡಲಾಗಿದೆ. ಜನರು ಭಯಪಡುವ ಅಗತ್ಯವಿಲ್ಲ’ ಎಂದು ರಟ್ಟೀಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಲೋಕೇಶಕುಮಾರ ಹೇಳಿದರು.

* * 

ಗ್ರಾಮದ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗಿದೆ. ಚರಂಡಿಗಳನ್ನು ಸ್ವಚ್ಛಗೊಳಿಸಲಾಗಿದೆ. ಯಂತ್ರಗಳ ಲಭ್ಯತೆಗೆ ಅನುಗುಣವಾಗಿ ಫಾಗಿಂಗ್ ಮಾಡಲಾಗುವುದು
ನಾಗರತ್ನ ಮುದ್ದಪ್ಪಳವರ
ಕಡೂರ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT