ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾಧ್ಯಕ್ಷರಿಗೆ ಕಾರ್ಯಕರ್ತರ ಮುತ್ತಿಗೆ

Last Updated 4 ಸೆಪ್ಟೆಂಬರ್ 2017, 6:02 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ:  ಹೂವಿನ ಹಡಗಲಿ ತಾಲ್ಲೂಕಿನ ಬಿಜೆಪಿ ಅಧ್ಯಕ್ಷ ವಿಜಯಕುಮಾರ್ ಅವರನ್ನು ಬದ ಲಾಯಿಸಿದ ಹಿನ್ನೆಲೆಯಲ್ಲಿ ಬಿಜೆಪಿಯ ನೂರಾರು ಕಾರ್ಯಕರ್ತರು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಚನ್ನಬಸವನ ಗೌಡರಿಗೆ ಮುತ್ತಿಗೆ ಹಾಕಿದ ಘಟನೆ  ಇಲ್ಲಿನ ಪಂಚಮಸಾಲಿ ಸಮುದಾಯ ಭವನದ ಬಳಿ ಭಾನುವಾರ ಸಂಜೆ ನಡೆಯಿತು.

ಹೂವಿನ ಹಡಗಲಿಯಿಂದ 50ಕ್ಕೂ ಹೆಚ್ಚು ಟ್ರ್ಯಾಕ್ಸ್‌ಗಳಲ್ಲಿ ಬಂದಿದ್ದ ಕಾರ್ಯ ಕರ್ತರು ಜಿಲ್ಲಾಧ್ಯಕ್ಷರ ವಿರುದ್ಧ ಘೋಷಣೆಗಳನ್ನು ಕೂಗಿದರು. ಏಕಾಏಕಿ ಬದಲಿ ಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು, ಈ ಕುರಿತಂತೆ ಸಮಜಾಯಿಷಿ ನೀಡಲು ಹೋದ ಜಿಲ್ಲಾ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು.

ಬಿಜೆಪಿ ಮುಖಂಡ ಪತ್ರೇಶ್ ಮಾತನಾಡಿ, ಪಕ್ಷದ ಕೆಲವರು ವಿರೋಧ ಪಕ್ಷದೊಂದಿಗೆ ಕೈ ಜೋಡಿಸಿ ಪಕ್ಷಕ್ಕೆ ಹಿನ್ನೆಡೆ ಮಾಡುವುದಕ್ಕಾಗಿ ಅಧ್ಯಕ್ಷರನ್ನು ಬದಲಾಯಿಸಿದ್ದಾರೆ. ಅಧ್ಯಕ್ಷರಿಗೆ ಯಾವುದೇ ನೋಟಿಸ್‌ ನೀಡದೆ ಬದಲಾಯಿಸಿದ ಕ್ರಮ ಖಂಡನೀಯ. ವಿಜಯಕುಮಾರ್‌ ಅವರನ್ನು ಮತ್ತೇ ನೇಮಕ ಮಾಡದಿದ್ದರೆ ಪಕ್ಷದ ಎಲ್ಲ ಘಟಕಗಳ ಪದಾಧಿಕಾರಿಗಳು ಸಾಮೂ ಹಿಕವಾಗಿ ರಾಜೀನಾಮೆ ನೀಡುವುದಾಗಿ ಎಚ್ಚರಿಸಿದರು.

ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಬೀರಬ್ಬಿ ಬಸವರಾಜ ಮಾತನಾಡಿ, ವಿಜಯಕುಮಾರ್ ಅವರನ್ನು ಬದಲಾವಣೆ ಮಾಡಿರುವುದರಿಂದ ಕ್ಷೇತ್ರದಲ್ಲಿ ಪಕ್ಷಕ್ಕೆ ಭಾರೀ ಹಿನ್ನೆಡೆ ಆಗಲಿದೆ. ಈ ಮೂಲಕ ಕಾರ್ಯಕರ್ತರಲ್ಲಿ ತೀವ್ರ ಗೊಂದಲ ಉಂಟು ಮಾಡಿದ್ದಾರೆ. ಕೂಡಲೇ ಅವರನ್ನು ಪುನಾ ಆಯ್ಕೆ ಮಾಡುವಂತೆ ಆಗ್ರಹಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಪ್ರತಿಕ್ರಿಯಿಸಿ, ಬಿಜೆಪಿ ಶಿಸ್ತಿನ ಪಕ್ಷ, ಯಾವುದೇ ಅವಘಡಕ್ಕೆ ಆಸ್ಪದ ಮಾಡಿಕೊಳ್ಳಬಾರದು ಎಂದು ವಿನಂತಿಸಿಕೊಂಡರು. ಅಧ್ಯಕ್ಷರ ಬದಲಾವಣೆ ರಾಜ್ಯ ಘಟಕದ ತೀರ್ಮಾನ ವಾಗಿದೆ, ತಮ್ಮದೇನು ಪಾತ್ರ ಇಲ್ಲ ಸಮುಜಾಯಿಷಿ ನೀಡಿದರು. ಈ ಕುರಿತಂತೆ ಹೂವಿನ ಹಡಗಲಿಯ ಐದು ಜನ ಮುಖಂಡರೊಂದಿಗೆ ಚರ್ಚಿಸುವು ದಾಗಿ ತಿಳಿಸಿದರು. ಸ್ಥಳದಲ್ಲಿ ನೂರಾರು ಕಾರ್ಯಕರ್ತರಿದ್ದರಿಂದ ಮಾತಿನ ಚಕಮಕಿ ನಡೆಯಿತು, ಕೆಲ ಕಾಲ ಗೊಂದಲ ಉಂಟಾಯಿತು.

ಮಾತುಕತೆ ನಡೆಸಲು ಸಾಧ್ಯವಾಗದಿದ್ದಾಗ, ಗೌಡರು ಅಲ್ಲಿಂದ ತೆರಳುವುದಕ್ಕೆ ವಾಹನದ ಬಳಿ ಹೋದರು. ಆಗ ಪರಸ್ಪರ ತಳ್ಳಾಟ ನಡೆಯಿತು, ವಾಹನದಲ್ಲಿ ಕುಳಿತು ಕೊಳ್ಳಲು ಅವರು ಹರಸಾಹಸ ಪಟ್ಟರು. ವಾಹನ ಮುಂದೆ ಹೋಗದಂತೆ ಕಾರ್ಯ ಕರ್ತರು ತಡೆದು ನಿಲ್ಲಿಸಿದರು. ಆಗ ಸ್ಥಳಕ್ಕೆ ಪೊಲೀಸರು ದೌಡಯಿಸಿದರಾದರೂ ನೂಕಾಟ ನಡೆದೇ ಇತ್ತು. ಕೆಲವು ಕಾರ್ಯಕರ್ತರ ಮಧ್ಯೆ ಮಾರಾಮಾರಿ ನಡೆಯಿತು. ಮರಿಯಮ್ಮನಹಳ್ಳಿಯ ಮುಖಂಡ ಬಂಗಾರು ಹನುಮಂತು ಅಧ್ಯಕ್ಷರ ಪರವಾಗಿ ಜನರನ್ನು ಚದುರಿಸಲು ಕೆಲವರನ್ನು ಹಿಡಿದು ಜಗ್ಗಾಡಿದರು. ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.   

ಹೂವಿನ ಹಡಗಲಿಯ ಮುಖಂಡರಾದ ದೂದ್ಯನಾಯ್ಕ, ಹೊಳಗುಂದಿ ಪ್ರಕಾಶ್, ಬನ್ನಿಕಲ್ಲು ಉಮೇಶ್‌, ಕಲ್ಲನಗೌಡ, ಎಚ್‌.ಉಚ್ಚೆಂಗೆಪ್ಪ, ವೆಂಕಟೇಶ್‌, ಬಾವಿ ಪ್ರಕಾಶ್‌, ಜಗದೀಶ್ ಗೌಡ, ಪ್ರಶಾಂತ್‌, ಸನ್ಮತಿ ಜೈನ್‌ ಸೇರಿದಂತೆ 20ಕ್ಕೂ ಹೆಚ್ಚು ಮಹಿಳೆಯರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT