ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಾಭಿಕೊತ್ತನೂರು ಕೆರೆ ಭರ್ತಿ

Last Updated 4 ಸೆಪ್ಟೆಂಬರ್ 2017, 8:52 IST
ಅಕ್ಷರ ಗಾತ್ರ

ಕೋಲಾರ: ಬರಪೀಡಿತ ಬಯಲು ಸೀಮೆಯ ಕೆರೆಗಳ ಪುನಶ್ಚೇತನಕ್ಕೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಂಸ್ಥೆಯವರ ‘ನಮ್ಮೂರು ನಮ್ಮಕೆರೆ’ ಕಾರ್ಯಕ್ರಮಕ್ಕೆ ಯಶಸ್ಸು ಸಿಕ್ಕಿದೆ.ಎರಡು ದಿನದಿಂದ ಬಿದ್ದ ಮಳೆಯಿಂದ ಅರಾಭಿಕೊತ್ತನೂರು ಗ್ರಾಮದ ಬೆಟ್ಟದ ತಪ್ಪಲಲ್ಲಿನ ಕೆರೆ ತುಂಬಿದೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಅರಾಭಿಕೊತ್ತನೂರು ಸೇರಿದಂತೆ ತಾಲ್ಲೂಕಿಗೆ ಒಂದರಂತೆ ಜಿಲ್ಲೆಯ ಐದು ಕೆರೆಗಳ ಪುನಶ್ಚೇತನಕ್ಕೆ ತಲಾ ₹ 5 ಲಕ್ಷ ವೆಚ್ಚದಲ್ಲಿ ಹೂಳೆತ್ತುವ ಕಾರ್ಯ ಮಾಡಲಾಗಿತ್ತು.

ಯೋಜನೆ ನಿರ್ದೇಶಕರಾಗಿದ್ದ ವಿಜಯಕುಮಾರ್ ನಾಗನಾಳ, ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಏಪ್ರಿಲ್‌ನಲ್ಲಿ ಆರಂಭಿಸಿದ್ದ ನಮ್ಮೂರು ನಮ್ಮಕೆರೆ ಕಾರ್ಯಕ್ರಮದಡಿಯಲ್ಲಿ  ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ರಾಮಸ್ವಾಮಿ ಕೆರೆ, ಮಾಲೂರು ತಾಲ್ಲೂಕಿನ ಟೇಕಲ್ ಈಶ್ವರನ ಕೆರೆ, ಮುಳಬಾಗಿಲು ತಾಲ್ಲೂಕಿನ ಬಂಡಾರ್ಲಹಳ್ಳಿಕೆರೆ, ಬಂಗಾರಪೇಟೆ ತಾಲ್ಲೂಕಿನ ಅಂಕತಟ್ಟಿಹಳ್ಳಿಯ ಅಂಕತಟ್ಟಿ ಕೆರೆ ಹಾಗೂ ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರಿನ ಹಿರೇಕೆರೆ ಆಯ್ಕೆ ಮಾಡಿಕೊಂಡಿದ್ದರು.

ಕೆರೆಗಳಲ್ಲಿ ಹೂಳೆತ್ತುವುದು, ಏರಿ, ರಸ್ತೆ ನಿರ್ಮಾಣ ಮತ್ತು ಗಿಡ ನಾಟಿ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಚಾಲನೆ ನೀಡಲಾಗಿತ್ತು. ‘ನಮ್ಮ ಪೂರ್ವಜರು ಕಟ್ಟಿದ ಕೆರೆಗಳು ಹೂಳು ತುಂಬಿ ನೀರು ಸಂಗ್ರಹ ಸಾಮರ್ಥ್ಯ ಕಳೆದುಕೊಂಡಿದ್ದವು. ಪುನಚ್ಚೇತನಕ್ಕೆ ಕೈಗೊಂಡ ಧರ್ಮಸ್ಥಳ ಸಂಸ್ಥೆಯವರು ಕಾರ್ಯ ಪ್ರಶಂಸನೀಯ ಎಂದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT