ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಢವಳಾರಕ್ಕೆ ಬಸ್ ಸೌಕರ್ಯ: ಆಗ್ರಹ

Last Updated 5 ಸೆಪ್ಟೆಂಬರ್ 2017, 5:11 IST
ಅಕ್ಷರ ಗಾತ್ರ

ಸಿಂದಗಿ: ತಾಲ್ಲೂಕಿನ ಢವಳಾರ ಗ್ರಾಮಕ್ಕೆ ಸಾರಿಗೆ ಸಂಸ್ಥೆಯ ಬಸ್ ಸೌಲಭ್ಯ ಒದಗಿಸಿ ಕೊಡಬೇಕು ಎಂದು ಆಗ್ರಹಿಸಿ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ನಗರದ ಬಸ್ ಡಿಪೊಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಸಂಘಟನೆ ತಾಲ್ಲೂಕು ಅಧ್ಯಕ್ಷ ಪರಶುರಾಮ ಕೋಟಾರಗಸ್ತಿ, ಮಾತ ನಾಡಿ, ಢವಳಾರ ಗ್ರಾಮದಿಂದ ಸಿಂದಗಿ ನಗರಕ್ಕೆ ವಿದ್ಯಾಭ್ಯಾಸಕ್ಕಾಗಿ ಬರುವ ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ಇಲ್ಲದೇ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. 4 ಕಿ.ಮಿ ದೂರದ ಗೋಲಗೇರಿ ವರೆಗೆ ಕಾಲ್ನಡಿಗೆಯಿಂದ ಬಂದು ಅಲ್ಲಿಂದ ಬಸ್ ಹತ್ತಬೇಕಾದ ದುಃಸ್ಥಿತಿ ಇದೆ.

ಹೀಗಾಗಿ ಕೂಡಲೇ ಸಿಂದಗಿಯಿಂದ ಢವಳಾರ ಗ್ರಾಮಕ್ಕೆ ಮಧ್ಯಾಹ್ನ ಮತ್ತು ರಾತ್ರಿ ವಸತಿ ಬಸ್ ಸಂಚಾರ ಪ್ರಾರಂಭಿಸುವಂತೆ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಸಂಘಟನೆ ವತಿಯಿಂದ ಉಗ್ರ ಪ್ರತಿಭಟನೆ ಮುಂದುವರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ದೇವರಹಿಪ್ಪರಗಿ ಘಟಕ ಅಧ್ಯಕ್ಷ ಚನ್ನಪ್ಪಗೌಡ ಬಿರಾದಾರ, ಯುವ ಘಟಕ ತಾಲ್ಲೂಕು ಅಧ್ಯಕ್ಷ ಮಲ್ಲೂ ನಾಟೀಕಾರ, ಗೋಲಗೇರಿ ವಲಯ ಅಧ್ಯಕ್ಷ ಭೀಮಣ್ಣ ಯಳಮೇಲಿ ಮಾತನಾಡಿದರು. ಪ್ರತಿಭಟನಾಕಾರರು ಡಿಪೋ ಸಹಾಯಕ ಸಂಚಾರ ಸೂಪರಿಂಟೆಂಡೆಂಟ್ ಎಂ.ಆರ್.ಲಮಾಣಿ ಅವರಿಗೆ ಮನವಿ ಸಲ್ಲಿಸಿದರು.

ಸಂಘಟನೆ ಯುವ ಘಟಕ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ ಜಿಂಗಾಣಿ, ಶಿವಶಂಕರ ದೇವೂರ, ಶರಣಗೌಡ ಬಿರಾದಾರ, ಶ್ರೀಶೈಲ ಅಲ್ಲಾಪುರ, ಹಣಮಗೌಡ ಪೋಲಿಸ್ ಪಾಟೀಲ, ಈರಣ್ಣ ಚನಗೊಂಡ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT