ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಳ್ಳು, ಹುಲ್ಲಿನಿಂದ ಆವೃತವಾದ ಉದ್ಯಾನ

Last Updated 5 ಸೆಪ್ಟೆಂಬರ್ 2017, 5:54 IST
ಅಕ್ಷರ ಗಾತ್ರ

ಮುಂಡಗೋಡ: ಕಾಲಿಡಲು ಸಾಧ್ಯವಾಗ ದಷ್ಟು ಮೊಣುಕಾಲುವರೆಗೆ ಬೆಳೆದ ಹುಲ್ಲು, ಮುಳ್ಳಿನ ಗಿಡಗಳು, ಪ್ರವಾಸಿಗ ರನ್ನು ಸ್ವಾಗತಿಸುತ್ತಿರುವ ತುಕ್ಕುಹಿಡಿದ ಗೇಟ್‌ಗಳು, ಸದಾ ಬಾಗಿಲು ಬಂದ್‌ ಮಾಡಿಕೊಂಡಿರುವ ಉಪಾಹಾರ ಮಂದಿರ, ಮುಳ್ಳಿನ ಪೊದೆಯಲ್ಲಿ ಅಡಗಿ ಕೊಂಡಂತೆ ಭಾಸವಾಗುತ್ತಿರುವ ವಿಶ್ರಾಂತಿ ಆಸನಗಳು, ಕುಡಿಯುವ ನೀರಿನ ವ್ಯವಸ್ಥೆ ಯಿದೆ, ಆದರೆ ಹೋಗಲು ದಾರಿಯಿಲ್ಲ, ಶೌಚಾಲಯ ಕಟ್ಟಡವನ್ನು ಎರಡೂ ಕಡೆಯಿಂದ ಹುಲ್ಲುಗಾವಲು ತನ್ನ ಸುಪ­ರ್ದಿಗೆ ತೆಗೆದುಕೊಂಡಂತೆ ಆವರಿಸಿದೆ.

ಕಾನನ ಮಧ್ಯೆ ಪ್ರವಾಸಿಗರಿಗೆ ಅನುಕೂಲವಾಗಬೇಕಿದ್ದ ಉದ್ಯಾನವನ, ನಿರ್ವಹಣೆ ಕೊರತೆಯಿಂದ ಮುಳ್ಳು, ಹುಲ್ಲಿನ ಪ್ರದೇಶವಾಗಿ, ನೋಡಲು ಬಂದ ಪ್ರವಾಸಿಗರನ್ನು ನಿರಾಸೆಯಿಂದ ಮರಳುವಂತೆ ಮಾಡುತ್ತಿದೆ.

ತಾಲ್ಲೂಕಿನ ಸನವಳ್ಳಿ ಜಲಾಶಯದಲ್ಲಿ, ಕಳೆದ ಏಳು ವರ್ಷಗಳ ಹಿಂದೆ ಅರಣ್ಯ ಇಲಾಖೆ ಸಹಯೋಗದಲ್ಲಿ ಆರಂಭಗೊಂಡಿದ್ದ, ದೋಣಿ ವಿಹಾರ ಹಾಗೂ ಉದ್ಯಾನವನದಲ್ಲಿ ಇಂತಹ ಚಿತ್ರಣ ಸದ್ಯಕ್ಕೆ ಕಾಣುತ್ತಿದ್ದು, ಸಂಬಂಧಿಸಿದವರ ನಿರ್ಲಕ್ಷ್ಯದಿಂದ ಪಾಳು ಬಿದ್ದಂತಾಗಿದೆ. ಪ್ರವಾಸಿಗರ ಮನ ತಣಿಸಲು, ನೈಸರ್ಗಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಅನುಕೂಲ ವಾಗಲೆಂದು, ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಯೋಜನೆ ರೂಪಿಸಿ, ಕಾರ್ಯರೂಪಕ್ಕೆ ತಂದಿದ್ದ ಉದ್ಯಾನವನ, ಪ್ರವಾಸಿಗರ ಮನಸ್ಸಿನಿಂದ ದೂರ ಸರಿಯುವಂತೆ ಮಾಡುವಲ್ಲಿ ಸಂಬಂಧಿಸಿದವರು ಸಹಕಾರ ನೀಡಿದಂತಾಗಿದೆ.

‘ಕಳೆದೆರಡು ವರ್ಷಗಳಿಂದ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ, ದೋಣಿ ವಿಹಾರವನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಜಲಾಶಯ ದಡಭಾಗದ ಉದ್ಯಾನವನಕ್ಕೆ, ಪ್ರತಿ ವರ್ಷ ಖರ್ಚು ಮಾಡುವ ಹಣದಲ್ಲಿ ಸಮರ್ಪಕ ನಿರ್ವಹಣೆ ಮಾಡಿದ್ದರೇ, ದೋಣಿ ವಿಹಾರ ಇಲ್ಲದಿದ್ದರೂ ಸಹಿತ, ನೈಸರ್ಗಿಕ ಸೊಬಗನ್ನು ಸವಿಯಲು ಪ್ರವಾಸಿಗರಿಗೆ ಅನುಕೂಲವಾಗುತ್ತಿತ್ತು. ಉದ್ಯಾನ ವನದಲ್ಲಿ ಯಾವ ಕಡೆ ದಾರಿಯಿದೆ ಎಂಬುದನ್ನು ಹುಡುಕಬೇಕಾಗಿದೆ. ಅಷ್ಟರಮಟ್ಟಿಗೆ ಹುಲ್ಲು, ಮುಳ್ಳು ಬೆಳೆದಿದೆ’ ಎಂದು ಹುಬ್ಬಳ್ಳಿಯಿಂದ ಬಂದಿದ್ದ ರಾಜು ಹೊಸಮನಿ ಹೇಳಿದರು..

‘ರಾಜ್ಯ ಹೆದ್ದಾರಿ ಪಕ್ಕದಲ್ಲಿ ಇರುವ ಜಲಾಶಯ ಹಾಗೂ ಪಾರ್ಕ್‌ ಪ್ರಯಾಣಿಕರನ್ನು ಹೆಚ್ಚು ಆಕರ್ಷಿಸುತ್ತದೆ. ರಜಾದಿನಗಳಲ್ಲಿ ಇಲ್ಲಿಗೆ ಬಂದು ಒಂದೆರೆಡು ಗಂಟೆಗಳ ಕಾಲ ದೋಣಿವಿಹಾರ, ಪಾರ್ಕ್‌ನಲ್ಲಿ ಓಡಾಟ, ಮಕ್ಕಳ ಆಟದ ಮಜಾ ಸವಿಯುತ್ತಿದ್ದೆವು. ಆದರೆ  ಇಲ್ಲಿಯ ಅವ್ಯವಸ್ಥೆ ಕಂಡು ಬೇಸರವಾಗುತ್ತಿದೆ. ನಿಸರ್ಗದ ಮಧ್ಯೆ ಇರುವ ಇಂತಹ ಸುಂದರ ಸ್ಥಳದಲ್ಲಿ, ಸಂಬಂಧಿಸಿದ ಅಧಿಕಾರಿಗಳು ಕಾಳಜಿ ವಹಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕು. ಕೆಲವೆಡೆ ಕೃತಕ ಪಾರ್ಕ್‌ ಮಾಡುವ ಪರಿಸ್ಥಿತಿ ಎದುರಾಗಿರುವಾಗ, ಪ್ರಕೃತಿದತ್ತ ಉದ್ಯಾನವನ್ನು ಸಂರಕ್ಷಣೆ ಮಾಡಬೇಕಾದ ಅವಶ್ಯಕತೆಯಿದೆ’ ಎಂದರು.

‘ಕೆಲ ದಿನಗಳ ಹಿಂದೆ ಅಧಿಕಾರ ವಹಿಸಿಕೊಂಡಿದ್ದು, ಈಗಾಗಲೇ ಸನವಳ್ಳಿ ಜಲಾಶಯದ ಉದ್ಯಾನವನ್ನು ಪರಿಶೀಲಿಸಿದ್ದೇನೆ. ಕೂಡಲೇ ಅಲ್ಲಿರುವ ಅನವಶ್ಯಕ ಗಿಡಗಂಟಿ, ಹುಲ್ಲು ತೆಗೆಸಲು ಕ್ರಮ ಕೈಗೊಳ್ಳಲಾಗುವುದು. ಯಾವ ಉದ್ದೇಶಕ್ಕೆ ಯೋಜನೆ ರೂಪಿಸಲಾಗಿದೆಯೋ, ಅದಕ್ಕೆ ತಕ್ಕಂತೆ ಉದ್ಯಾನವನ್ನು ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲಾಗುವುದು. ಉದ್ಯಾನವದ ನಿರ್ವಹಣೆಗೆ ಮೊದಲ ಆದ್ಯತೆ ನೀಡಲಾಗುವುದು’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಶಶಿಧರ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT