ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯದಂಗಡಿ ತೆರೆಯಲು ಅನುಮತಿ ನೀಡಬೇಡಿ

Last Updated 5 ಸೆಪ್ಟೆಂಬರ್ 2017, 9:39 IST
ಅಕ್ಷರ ಗಾತ್ರ

ರಾಮನಗರ: ನಗರದ ಮಾಗಡಿ ಮುಖ್ಯರಸ್ತೆ ಜಿಗೇನಹಳ್ಳಿಯ ಕುಮಾರ ಸ್ವಾಮಿ ಬಡಾವಣೆಯ ಶ್ರೀ ಆದಿಚುಂಚನಗಿರಿ ವೃತ್ತದಲ್ಲಿ ಹೊಸದಾಗಿ ಮದ್ಯಪಾನದ ಅಂಗಡಿ ತೆರೆಯಲು ಅನುಮತಿ ನೀಡಬಾರದು ಎಂದು ಇಲ್ಲಿನ ಸ್ಥಳೀಯ ನಿವಾಸಿಗಳು ಜಿಲ್ಲಾಧಿಕಾರಿ ಕಚೇರಿಯ ಸಹಾಯಕ ಶ್ರೀನಿವಾಸ್ ಅವರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು.

ಈ ಬಡಾವಣೆಗಳಲ್ಲಿ ಸುಮಾರು 200 ಕ್ಕೂ ಹೆಚ್ಚು ಮನೆಗಳಿದ್ದು, ನೂರಾರು ವಿದ್ಯಾರ್ಥಿಗಳು ಪ್ರತಿ ನಿತ್ಯಶಾಲೆಗೆ ಇದೇ ಮಾರ್ಗದಲ್ಲಿ ತೆರೆಳಬೇಕು. ಮದ್ಯದಂಗಡಿಯನ್ನು ತೆರೆದರೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಬೇಸರ ವ್ಯಕ್ತಪಡಿಸಿದರು. ಜನಸಂದಣಿ ಹೆಚ್ಚಿರುವ ಈ ಪ್ರದೇಶಗಳಲ್ಲಿ ಮದ್ಯಂದಗಡಿ ತೆರೆಯಲು ಪರವಾನಗಿ ನೀಡಬಾರದು.

ಮಕ್ಕಳ ಭವಿಷ್ಯದ ಹಿತದೃಷ್ಟಿ ಬಗ್ಗೆ ಅಬಕಾರಿ ಇಲಾಖೆ ಗಮನ ನೀಡಬೇಕಿದೆ. ಈ ಬಗ್ಗೆ ಹೆಚ್ಚಿನ ಗಮನಹರಿಸಿ, ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಬಾರದು ಎಂದು ಮನವಿ ಮಾಡಿದರು. ಪವಿತ್ರ ರಾಷ್ಟ್ರೀಯ ವಿದ್ಯಾಲಯದ ಕಾರ್ಯದರ್ಶಿ ಎಸ್.ಪ್ರದೀಪ್, ಜ್ಯೋತಿ, ಗಾಯಿತ್ರಿ, ರಾಮಣ್ಣ, ರತ್ನಮ್ಮ, ಮಂಜುಳಾ, ಆರ್. ಮಾನಸ, ಪುಷ್ಪಾ, ಮೊನಿಷಾ, ಪ್ರೇಮಾ, ಶ್ವೇತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT