ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೇಷ್ಯಾ ಅಡಿಕೆ ಬಂತು

Last Updated 6 ಸೆಪ್ಟೆಂಬರ್ 2017, 5:25 IST
ಅಕ್ಷರ ಗಾತ್ರ

ಶಿರಸಿ: ಮಾರುಕಟ್ಟೆಯಲ್ಲಿ ಅಡಿಕೆ ದರ ಕುಸಿತವಾದಾಗಲೆಲ್ಲ ನೆನಪಾಗುವ ಮಲೇಷ್ಯಾ ಅಡಿಕೆ ಮಲೆನಾಡಿಗೆ ಕಾಲಿಟ್ಟಿದೆ. ಹೆಗ್ಗರಣಿ ಸಮೀಪ ತಾರೇಸರದ ಗಣಪತಿ ಹೆಗಡೆ ಅವರ ತೋಟದಲ್ಲಿ ಮಲೇಷ್ಯಾದ ಅಡಿಕೆ ಮರ ಕೆಂಪು ಅಡಿಕೆ ಗೊನೆ ಬಿಟ್ಟಿದೆ.

ಮೂರೂವರೆ ವರ್ಷಗಳ ಹಿಂದೆ ಸಂಬಂಧಿಕರ ಮನೆಯಿಂದ ಗಿಡ ತಂದು ನಾಟಿ ಮಾಡಿರುವ ಅವರ ಮನೆಯ ಹಿತ್ತಲಿನಲ್ಲಿ 10 ಮರಗಳು ಫಲ ಬಿಟ್ಟಿವೆ. ‘ಈ ಮರಗಳಿಗೆ ಹೆಚ್ಚು ಆರೈಕೆ ಬೇಡ. ಬೋರ್ಡೊ ದ್ರಾವಣ ಸಿಂಪರಣೆ ಮಾಡದಿದ್ದರೂ ಕೊಳೆರೋಗ ಬರುವುದಿಲ್ಲ. ಕಳೆದ ವರ್ಷ ಇದೇ ಮರದಲ್ಲಿ ಬೆಳೆದಿದ್ದ 25 ಕೆ.ಜಿ ಅಡಿಕೆಯನ್ನು ಕ್ವಿಂಟಲ್‌ಗೆ ₹ 14ಸಾವಿರ ದರದಲ್ಲಿ ಸ್ಥಳೀಯವಾಗಿ ಮಾರಾಟ ಮಾಡಿದ್ದೇನೆ’ ಎನ್ನುತ್ತಾರೆ ಗಣಪತಿ ಹೆಗಡೆ.

‘ಮರದ ಬುಡದಲ್ಲಿ ಬಾಳೆ ಹಿಳ್ಳಿನಂತೆ ಸುತ್ತ ಮರಿಗಳು ಒಡೆಯುತ್ತವೆ. ಅವುಗಳಲ್ಲಿಯೂ ಗೊನೆ ಬರುತ್ತದೆ. ಮರಿ ಗಿಡಗಳನ್ನು ನಾಟಿ ಮಾಡಿದರೆ ಅಷ್ಟಾಗಿ ಬದುಕುವುದಿಲ್ಲ. ಹಣ್ಣನ್ನು ಕೊಯ್ದು ಬೀಜ ಹಾಕಿ ಸಸಿ ಮಾಡಬೇಕು. ಸರಾಸರಿ ಮೂರು ಗೊನೆಗಳು ಬಿಡುತ್ತವೆ. ಗೊನೆ ತುಂಬ ಕಾಯಿ ಬಂದರೂ ಸಣ್ಣ ಗಾತ್ರವಾಗಿದ್ದರಿಂದ ತೂಕ ಕಡಿಮೆ.

ಸಿಪ್ಪೆ ಕೆಂಪಾಗಿದ್ದರೂ ಒಳಗಿನ ಅಡಿಕೆ ನಮ್ಮಲ್ಲಿನ ಚಾಲಿಯಂತೆ ಕಾಣುತ್ತದೆ. ರುಚಿಯಲ್ಲಿ ಆಪಿ ಅಡಿಕೆಯಂತೆ ಇರುತ್ತದೆ. ಗಾತ್ರದಲ್ಲಿ ಮಾತ್ರ ನಮ್ಮಲ್ಲಿನ ಒಂದು ಅಡಿಕೆ ಅಲ್ಲಿನ 2–3 ಅಡಿಕೆಗೆ ಸಮ’ ಎನ್ನುತ್ತಾರೆ ಗಣಪತಿ ಹೆಗಡೆ ಅವರ ಸಂಬಂಧಿ ಸತ್ಯನಾರಾಯಣ ಹೆಗಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT