ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ್‍ಯಾಲಿಗೆ ಅಡ್ಡಿ ವಿರೋಧಿಸಿ ಪ್ರತಿಭಟನೆ

Last Updated 6 ಸೆಪ್ಟೆಂಬರ್ 2017, 5:28 IST
ಅಕ್ಷರ ಗಾತ್ರ

ಬಾಗಲಕೋಟೆ: ಬೈಕ್ ಮೂಲಕ ಮಂಗ ಳೂರು ಚಲೋ ರ್‍ಯಾಲಿಗೆ ಅವಕಾಶ ನೀಡದೇ ಪಕ್ಷದ ಮುಖಂಡರನ್ನು   ಬಂಧಿಸಿದ ಕ್ರಮ ವಿರೋಧಿಸಿ ಬಿಜೆಪಿ ನಗರ ಘಟಕದಿಂದ ಮಂಗಳವಾರ ಇಲ್ಲಿನ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಲಾಯಿತು.

ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆಗೆ ಕಾರಣವಾದ ಕೆಎಫ್‌ಡಿ ಮತ್ತು ಪಿಎಫ್‌ಐ ಸಂಘಟನೆಗಳಿಗೆ ನಿಷೇಧ ವಿಧಿಸುವಂತೆ ಹಾಗೂ ಸಚಿವ ರಮಾನಾಥ ರೈ ರಾಜೀನಾಮೆಗೆ ಒತ್ತಾಯಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರು ಹಾಗೂ ಮುಖಂಡರ ಮೇಲೆ ಪೊಲೀಸರ ಮೂಲಕ ಸರ್ಕಾರ ದಬ್ಬಾಳಿಕೆ ನಡೆಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟನೆ ಮಾಡುವ ಹಕ್ಕಿದೆ. ಇದನ್ನು ಹತ್ತಿಕ್ಕುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಹೇರಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಕಾರ್ಯಕರ್ತರನ್ನು ಬಿಡುಗಡೆಗೊಳಿಸಬೇಕು. ಮಂಗಳೂರು ಚಲೋ ಬೈಕ್‌ ರ್‍ಯಾಲಿಗೆ ಅವಕಾಶ ಕಲ್ಪಿಸ ಬೇಕು’ ಎಂದರು. ನಗರಸಭೆ ಅಧ್ಯಕ್ಷ ದ್ಯಾವಪ್ಪ ರಾಕುಂಪಿ, ರಾಜು ನಾಯ್ಕರ್, ಬಸು ಅವರಾದಿ, ಪಾಲಾ ಕ್ಷಯ್ಯ ಕಟ್ಟಿಮಠ, ಮಹಾಂತೇಶ ಮುರಡಿ, ರಾಜು ಗವಳಿ, ಶ್ರೀಶೈಲ ಅಂಗಡಿ ಇದ್ದರು.

ಕಾರ್ಯಕರ್ತರ ಪ್ರತಿಭಟನೆ
ಬಾದಾಮಿ: ‘ಹುಬ್ಬಳ್ಳಿಯಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಯುವ ಮೋರ್ಚಾ ಕಾರ್ಯಕರ್ತರು ಮಂಗಳವಾರ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಮೂಲಕ ಪ್ರತಿಭಟನೆ ನಡೆಸಿದರು.

ಪಿಕಾರ್ಡ್ ಬ್ಯಾಂಕ್‌ ಎದುರಿನ ರಸ್ತೆ ಮತ್ತು ಪುಲಿಕೇಶಿ ವೃತ್ತದಲ್ಲಿ ಎರಡು ಗಂಟೆ ಕಾಲ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು.  ತಾಲ್ಲೂಕು ಘಟಕದ ಬಿಜೆಪಿ ಅಧ್ಯಕ್ಷ ಎಸ್‌.ಟಿ.ಪಾಟೀಲ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮುತ್ತಣ್ಣ ಉಳ್ಳಾಗಡ್ಡಿ, ಬಸವರಾಜ ಯಂಕಂಚಿ, ಎನ್‌.ಎಸ್‌.ಬೊಮ್ಮನಗೌಡರ, ಉಮೇಶ ಕಾರಜೋಳ, ಚಂದ್ರಕಾಂತ ಯತ್ನಟ್ಟಿ, ವಿಜಯಕುಮಾರ ಬೇಟಗಾರ, ಮಲ್ಲಯ್ಯ ಮುಪ್ಪಿನವರ, ಬೇಲೂರಪ್ಪ ವಡ್ಡರ  ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT