ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನ ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದು

Last Updated 6 ಸೆಪ್ಟೆಂಬರ್ 2017, 6:39 IST
ಅಕ್ಷರ ಗಾತ್ರ

ತಿ.ನರಸೀಪುರ: ವಿದ್ಯಾರ್ಥಿಗಳ ಜ್ಞಾನ ಮತ್ತು ವ್ಯಕ್ತಿತ್ವ ಹೆಚ್ಚಿಸುವಲ್ಲಿ ಶಿಕ್ಷಕರು ಮಹತ್ತರ ಪಾತ್ರ ವಹಿಸುತ್ತಾರೆ. ಅವರ ಮಾರ್ಗದರ್ಶನವಿಲ್ಲದೇ ವಿದ್ಯಾರ್ಥಿ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ನಿವೃತ್ತ ವೈದ್ಯಾಧಿಕಾರಿ ಡಾ.ಕರುಹಟ್ಟಿ ನಂಜಯ್ಯ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕರೋಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾವು ಯಾವುದೇ ಹುದ್ದೆ ಅಲಂಕರಿಸಿದರೂ ಕೂಡ ಅದರ ಹಿಂದೆ ಶಿಕ್ಷಕರ ಜ್ಞಾನಧಾರೆಯ ಫಲವಿದೆ. ನಾವು ಜೀವನದಲ್ಲಿ ಏನೇ ಸಾಧನೆ ಅಥವಾ ಹುದ್ದೆಗೆ ಹೋದರು ಅವರು ಕೊಟ್ಟ ಜ್ಞಾನ ಮತ್ತು ಮಾರ್ಗದರ್ಶನಕ್ಕೆ ಕೃತಜ್ಞತೆಯ ಭಾವವಿರಬೇಕು ಎಂದರು.

ಶಾಲೆಗೆ ಬರುವ ವಿದ್ಯಾರ್ಥಿಗಳು ಗೈರು ಹಾಜರಾಗದೇ ನಿರಂತರವಾಗಿ ಶಾಲೆಗೆ ಆಗಮಿಸಿ ಸವಲತ್ತುಗಳನ್ನು ಬಳಸಿಕೊಂಡು ಹೆಚ್ಚು ಅಧ್ಯಯ ನಶೀಲರಾಗಿ ಹೆಚ್ಚು ಸಾಧನೆಯ ಮೂಲಕ ಶಾಲೆಗೆ ಹಾಗೂ ಗ್ರಾಮಕ್ಕೆ ಒಳ್ಳೆಯ ಹೆಸರು ತರುಬೇಕು ಎಂದು ಕಿವಿಮಾತು ಹೇಳಿದರು.

ನಾನು ಕಲಿತ ಈ ಶಾಲೆಗೆ ಒಂದು ವಿಜ್ಞಾನ ಪ್ರಯೋಗಾಲಯ ನಿರ್ಮಿಸಿಕೊಡುತ್ತಿದ್ದು, ಅದರ ಕಾಮಗಾರಿ ಎರಡು ತಿಂಗಳಲ್ಲಿ ಪೂರ್ಣ ಗೊಳ್ಳಲಿದೆ. ಈ ಭಾಗದ ವಿದ್ಯಾರ್ಥಿಗಳಿಗೆ ವಿಜ್ಞಾನ ಕುರಿತು ಹೆಚ್ಚು ಆಸಕ್ತಿ ಮೂಡಿಸಲು ಈ ಪ್ರಯೋಗಾಲಯ ಹೆಚ್ಚು ಸಹಕಾರಿಯಾಗಬೇಕೆಂಬುದು ನನ್ನ ಆಶಯವಾಗಿದೆ. ಸಾಧ್ಯವಾದರೆ ಇದೊಂದು ವಿಜ್ಞಾನ ಸಂಗ್ರಹಾಲಯದ ರೀತಿಯಲ್ಲಿ ಬಳಕೆಯಾಗಬೇಕು ಎಂದು ಅವರು ಹೇಳಿದರು.

ಬಿಎಸ್ಎನ್ಎಲ್ ನಿವೃತ್ತ ಅಧಿಕಾರಿ ರಾಜಶೇಖರ್ ಮಾತನಾಡಿ, ನಾವು ಕಲಿತ ಶಾಲೆಗೆ ಏನಾದರೂ ಕೊಡುಗೆ ನೀಡಿದರೆ ಅದು ಮತ್ತಷ್ಟು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಅವಕಾಶವಾಗುತ್ತದೆ ಎಂದರುಇದೇ ವೇಳೆ ಶಾಲೆಯ ಶಿಕ್ಷಕರನ್ನು ವೈದ್ಯಾಧಿಕಾರಿ ಡಾ.ನಂಜಯ್ಯ ಶಾಲು ಹೊದಿಸಿ ಸನ್ಮಾನಿಸಿದರು.

ಶಿಕ್ಷಕಿ ರಾಜೇಶ್ವರಿ ಅವರು ಡಾ.ರಾಧಾಕೃಷ್ಣನ್ ಅವರ ವೇಷಧರಿಸಿ ಗಮನಸೆಳೆದರು. ಮುಖ್ಯ ಶಿಕ್ಷಕರಾದ ರಂಗಸ್ವಾಮಿ, ದೈಹಿಕ ಶಿಕ್ಷಣ ಶಿಕ್ಷಕ ಬೆಟ್ಟಯ್ಯ ಶಿಕ್ಷಕರಾದ ಶಿವಮೂರ್ತಿ, ಭಾಗ್ಯಮ್ಮ, ಶ್ರೀಮನು, ಬಿ. ಮಂಜು ಸೇರಿದಂತೆ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT