ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ಪೈಪೋಟಿ ಯಾವ ಪುರುಷಾರ್ಥಕ್ಕೆ?

Last Updated 6 ಸೆಪ್ಟೆಂಬರ್ 2017, 8:38 IST
ಅಕ್ಷರ ಗಾತ್ರ

ದಾವಣಗೆರೆ: ‘ಮಂಗಳೂರಿನಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ನಡೆಸುತ್ತಿರುವ ಪೈಪೋಟಿ ಯಾವ ಪುರುಷಾರ್ಥಕ್ಕೆ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಪ್ರಶ್ನಿಸಿದರು. ‘ಮಂಗಳೂರು ವಿದ್ಯಮಾನ ಕುರಿತಂತೆ ಬಿಜೆಪಿ–ಕಾಂಗ್ರೆಸ್‌ ಪಕ್ಷಗಳ ನಡುವೆ ಶೀತಲ ಸಮರ ಇದೆ. ಆದರೆ, ಅವು ಶಾಂತಿ, ಸಾಮರಸ್ಯ ಸ್ಥಾಪಿಸಲು ‍ಪ್ರಯತ್ನಿಸುತ್ತಿವೆಯೋ ಅಥವಾ ಕದಡಲು ಪೈಪೋಟಿ ನಡೆಸುತ್ತಿವೆಯೋ ಎಂಬುದು ಅರ್ಥವಾಗುತ್ತಿಲ್ಲ. ಈ ಮೂಲಕ ರಾಷ್ಟ್ರ ಮತ್ತು ರಾಜ್ಯಕ್ಕೆ ಯಾವ ಸಂದೇಶ ನೀಡಲು ಹೊರಟಿವೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ವಾಗ್ದಾಳಿ ನಡೆಸಿದರು.

‘ಇದು ಸೂಕ್ಷ್ಮ ವಿಷಯ. ವಿಧಾನಸಭೆಯಲ್ಲಿ ಕುಳಿತು ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದರೆ ಇಡೀ ರಾಜ್ಯಕ್ಕೆ ಅಪಾಯ. ಇದು ನನ್ನ ಅನುಭವದ ಮಾತು’ ಎಂದು ದೇವೇಗೌಡ ಸಲಹೆ ನೀಡಿದರು. ‘ಕಲ್ಲಡ್ಕ ಪ್ರಭಾಕರ್ ಭಟ್ ಅವರ ಶಾಲೆಗೆ ಸರ್ಕಾರ ಅನುದಾನ ಏಕೆ ನಿಲ್ಲಿಸಬೇಕಿತ್ತು’ ಎಂದು ಪ್ರಶ್ನಿಸಿದ ದೇವೇಗೌಡ, ‘ಹಾಗಾದರೆ, ಇವರು ಮದರಸಗಳಿಗೆ ಅನುದಾನವನ್ನು ತಕ್ಷಣ ನಿಲ್ಲಿಸಿ ಬಿಡ್ತಾರಾ’ ಎಂದು ಸರ್ಕಾರವನ್ನು ಕೇಳಿದರು.

‘ರಾಜ್ಯದಲ್ಲಿ ಯುವಶಕ್ತಿಯ ದುರ್ಬಳಕೆಯಾಗುತ್ತಿದೆ. ಜೆ.ಎಚ್‌.ಪಟೇಲರು ಕೊನೆಯ ದಿನಗಳಲ್ಲಿ ಈ ದೇಶಕ್ಕೆ ಬಿಜೆಪಿ ಕಾನ್ಸರ್, ಕಾಂಗ್ರೆಸ್‌ ಶಾಪ ಎಂದು ಹೇಳಿದ ಮಾತನ್ನು ಈಗಲೂ ಸ್ಮರಿಸುತ್ತೇನೆ’ ಎಂದ ಅವರು, ‘ಎರಡೂ ರಾಷ್ಟ್ರೀಯ ಪಕ್ಷಗಳು ಶೀತಲ ಸಮರ ನಿಲ್ಲಿಸದಿದ್ದರೆ ರಾಜ್ಯದ ಜನತೆ ಪಾಠ ಕಲಿಸುವುದು ಖಚಿತ’ ಎಂದರು.

ಬ್ರಿಕ್ಸ್‌ ಸಮಾವೇಶದಲ್ಲಿ ಒಗ್ಗಟ್ಟು ಪ್ರದರ್ಶಿಸಿದ್ದು ಒಳ್ಳೆಯ ಬೆಳವಣಿಗೆ. ಪಾಕ್ ಉಗ್ರ ಸಂಘಟನೆ ವಿರುದ್ಧ ಹೋರಾಟಕ್ಕೆ ಬೆಂಬಲ ಸಿಕ್ಕಿದ್ದು ಸ್ವಾಗತಾರ್ಹ. ಈಗ ವಿಶ್ವದ ಶಾಂತಿಗೆ ಭಂಗ ತರಲು ಹೊರಟಿರುವ ಉತ್ತರ ಕೊರಿಯಾ ನಡೆಯನ್ನು ಜಿ–20 ಶೃಂಗಸಭೆ ಖಂಡಿಸಬೇಕಿತ್ತು ಎಂದು ಅಭಿಪ್ರಾಯಪಟ್ಟರು.

‘ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ರಾಜ್ಯದ ಮುಖ್ಯಮಂತ್ರಿಯಾಗುತ್ತೇನೆಂಬ ನಂಬಿಕೆ ಇದೆ. ಆದ್ದರಿಂದಲೇ ಇಸ್ರೇಲ್‌ಗೆ ತೆರಳಿ ಅಲ್ಲಿನ ಕೃಷಿ ಪದ್ಧತಿ ಬಗ್ಗೆ ಅಧ್ಯಯನ ನಡೆಸಿ ಬಂದಿದ್ದಾರೆ. ಅವರಿಗೆ ಸಾಕಷ್ಟು ಕನಸುಗಳಿವೆ. ಅವುಗಳ ಸಾಕಾರಕ್ಕೆ ನನ್ನ ಮಾರ್ಗದರ್ಶನ ಅವರಿಗೆ ಸದಾ ಇರುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT