ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗಳ ಹುಟ್ಟುಹಬ್ಬ, ಅಮ್ಮನ ಸಂಭ್ರಮ!

Last Updated 6 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಕಪ್ಪು ಉಡುಪು, ಕೈಯಲ್ಲಿ ವೈನ್‌ ಗ್ಲಾಸ್‌ ಹಿಡಿದ ಸುಷ್ಮಿತಾ ಸೇನ್‌, ಪೀಚ್‌ ಬಣ್ಣದ ಉಡುಪು ತೊಟ್ಟ ಮಗಳು ಅಮ್ಮನ ತೋಳು ಹಿಡಿದು ನಗುತ್ತಿದ್ದಾಳೆ.

ಇವರಿಬ್ಬರ ಖುಷಿಗೆ ಕಾರಣ, ಹುಟ್ಟುಹಬ್ಬದ ಸಂಭ್ರಮ. ದತ್ತು ಪುತ್ರಿ ರೇನಿಗೆ ಈಗ ಹದಿನೆಂಟು ವರ್ಷ. ಈ ಸಂಭ್ರಮದ ಗಳಿಗೆಯನ್ನು ಅಮ್ಮ, ಮಕ್ಕಳು ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದಿದ್ದಾರೆ. ಇದನ್ನು ಇನ್‌ಸ್ಟಾಗ್ರಾಂನಲ್ಲಿ ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್‌ ಪೋಸ್ಟ್‌ ಮಾಡಿದ್ದಾರೆ.

ಮಗಳ ಹುಟ್ಟುಹಬ್ಬವನ್ನು ಪ್ರತಿ ವರ್ಷ ಇವರು ವಿಶೇಷವಾಗಿಯೇ ಆಚರಿಸುತ್ತಾರೆ. ಆದರೆ ಈ ಬಾರಿ ಮಗಳು ಯೌವ್ವನಕ್ಕೆ ಕಾಲಿಟ್ಟಿರುವುದು ಇವರ ಸಂತಸವನ್ನು ಮತ್ತಷ್ಟು ಹೆಚ್ಚಿಸಿದೆ.

‘ನಮ್ಮಿಬ್ಬರಿಗೂ ಹದಿನೆಂಟು. ಮಗಳಿಗೆ ಹದಿನೆಂಟು ವರ್ಷವಾದರೆ, ನನಗೆ ಹದಿನೆಂಟು ವರ್ಷದ ಅಮ್ಮನಾದ ಅನುಭವ, ಎಂತಹ ಅದ್ಭುತ ಪಯಣ. ನಿನ್ನ ಜೀವನದಲ್ಲಿ ಸಂತೋಷ, ಆರೋಗ್ಯ, ಧೈರ್ಯ ದೇವರು ಕರುಣಿಸಲಿ’ ಎಂದು ಮಗಳಿಗೆ ಶುಭಾಶಯ ಕೋರಿದ್ದಾರೆ ಸುಶ್ಮಿತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT