ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿ ಲಂಕೇಶ್‌ ಹತ್ಯೆಗೆ ಎಲ್ಲೆಡೆ ಆಕ್ರೋಶ

Last Updated 7 ಸೆಪ್ಟೆಂಬರ್ 2017, 6:05 IST
ಅಕ್ಷರ ಗಾತ್ರ

ವಿಜಯಪುರ: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬುಧವಾರ ಪ್ರಗತಿಪರ ಚಿಂತಕಿ, ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಖಂಡಿಸಿ ರಸ್ತೆ ತಡೆ, ಧರಣಿ, ಸರಣಿ ಪ್ರತಿಭಟನೆ ನಡೆದವು.

ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಹತ್ಯೆ ಖಂಡಿಸಿ, ದುಷ್ಕರ್ಮಿಗಳನ್ನು ಬಂಧಿಸು ವಂತೆ ಒತ್ತಾಯಿಸಿ ಬೀದಿಗಿಳಿದು ಪ್ರತಿಭಟಿಸಿದರು.

ಎಐಡಿವೈಓ ಸಂಘಟನೆ ವಿಚಾರವಾದಿ ಗೌರಿ ಹತ್ಯೆ ಖಂಡಿಸಿ ಎಐಡಿವೈಓ, ಎಐಎಂಎಸ್ಎಸ್, ಎಐಡಿಎಸ್ಓ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಸಂಘಟನೆ ಮುಖಂಡ ಸಿದ್ದಲಿಂಗ ಬಾಗೇವಾಡಿ ಮಾತನಾಡಿ ‘ಕೂಡಲೇ ಕೇಂದ್ರ, ರಾಜ್ಯ ಸರ್ಕಾರಗಳು ಎಚ್ಚೆತ್ತು ಕೊಂಡು ಹತ್ಯೆಗೆ ಕಾರಣವಾದವರನ್ನು ಬಂಧಿಸಬೇಕು’ ಎಂದು ಒತ್ತಾಯಿಸಿದರು. ಬಾಳು ಜೇವೂರ, ಸುನೀಲ ಸಿದ್ರಾಮಶೆಟ್ಟಿ, ಗೀತಾ ಎಚ್, ಜ್ಯೋತಿ ರೋಣಿಹಾಳ, ಮಹೇಶ ಕೆಂಪವಾಡ, ಏಕಲಾತ ಬಿಲ್ಲಾಳರ ಪಾಲ್ಗೊಂಡಿದ್ದರು.

ಪ್ರಗತಿಪರ ಚಿಂತಕರು: ವಿವಿಧ ಪ್ರಗತಿಪರ ಚಿಂತಕರು ಬುಧವಾರ ನಗರದ ಡಾ.ಬಿ.ಆರ್‌.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಅಡಿವೆಪ್ಪ ಸಾಲಗಲ್ಲ, ರಫೀಕ ಟಪಾಲ, ಎಸ್.ಎಂ.ಪಾಟೀಲ ಗಣಿಹಾರ, ಆನಂದ ಔದಿ, ನಾಗರಾಜ ಲಂಬು, ಪೀಟರ್ ಅಲೆಕ್ಸಾಂಡರ್, ಜಿ.ಜಿ.ಗಾಂಧಿ, ಎಚ್.ಎಸ್.ಕಬಾಡೆ ಉಪಸ್ಥಿತರಿದ್ದರು.

ಆರೋಪಿಗಳ ಬಂಧನಕ್ಕೆ ಪಿಎಫ್‌ಐ ಒತ್ತಾಯ: ಗೌರಿ ಹತ್ಯೆಗೈದ ಆರೋಪಿ ಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕಾರ್ಯ ಕರ್ತರು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಸಂಘ ಪರಿವಾರದ ಜನವಿರೋಧಿ ನೀತಿಗಳು, ಮತಾಂಧತೆ ವಿರುದ್ಧ ಮಾತ ನಾಡುವ ವಿಚಾರವಾದಿಗಳ ಮೇಲಿನ ದಾಳಿ ತೀವ್ರವಾಗಿದೆ. ತಕ್ಷಣ ಇದಕ್ಕೆ ಕಡಿವಾಣ ಹಾಕಬೇಕು. ಗೌರಿ ಹಂತಕರನ್ನು ಬಂಧಿಸಬೇಕು’ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಫಕ್ರುದ್ದೀನ್ ಕಲಾದಗಿ, ಶಫೀಕ ಮುಲ್ಲಾ, ಶಫೀಕ ಕನ್ನೂರ, ರಿಯಾಜ ಹುಂಡೇಕಾರ, ಅಶ್ಪಾಕ ಜಮಂಖಂಡಿ, ಇಸಾಕ ಸೈಯ್ಯದ್ ಉಪಸ್ಥಿತರಿದ್ದರು.

ದೊಡ್ಡ ಆಘಾತ: ಚಿಂತಕಿ ಗೌರಿ ಹತ್ಯೆ ಪ್ರಜ್ಞಾವಂತ ಸಮೂಹಕ್ಕೆ, ಪತ್ರಿಕೋದ್ಯಮಕ್ಕೆ ದೊಡ್ಡ ಆಘಾತ ನೀಡಿದೆ ಎಂದು ಚಿಂತನ ಸಾಂಸ್ಕೃತಿಕ ಬಳಗದ ಪದಾಧಿಕಾರಿಗಳು ತಿಳಿಸಿದ್ದಾರೆ.

ವಿಚಾರವಾದಿಗಳು, ಚಿಂತಕರ ಮೇಲೆ ಈ ರೀತಿಯ ಘಟನೆಗಳು ಮರು ಕಳಿಸುತ್ತಲೇ ಇವೆ.  ವಿಚಾರವಾದಿಗಳ ಜೀವ ಬಲಿ ಪಡೆದುಕೊಳ್ಳುತ್ತಿರುವ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಕಡಿವಾಣ ಹಾಕಬೇಕಿದೆ ಎಂದು ಚಿಂತನ ಸಾಂಸ್ಕೃತಿಕ ಬಳಗದ ಪದಾಧಿಕಾರಿ ಗಳಾದ ಡಾ.ಮಹಾಂತೇಶ ಬಿರಾದಾರ, ವಿಡಿಎ ಮಾಜಿ ಅಧ್ಯಕ್ಷ ಚಂದ್ರಕಾಂತ ಶೆಟ್ಟಿ, ಸೋಮನಾಥ ಕಳ್ಳಿಮನಿ, ಪ್ರಶಾಂತ ದೇಸಾಯಿ, ಸುರೇಶ ಗೊಣಸಗಿ ಒತ್ತಾಯಿಸಿದ್ದಾರೆ.

ಕಾರ್ಯನಿರತ ಪತ್ರಕರ್ತರ ಸಂಘ: ಗೌರಿ ಬರ್ಬರ ಹತ್ಯೆ ಖಂಡಿಸಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು, ಪತ್ರಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ರಫೀಕ ಭಂಡಾರಿ ನೇತೃತ್ವದಲ್ಲಿ ಪತ್ರಕರ್ತರು ಕಪ್ಪುಪಟ್ಟಿ ಕಟ್ಟಿಕೊಂಡು, ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೌನ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಪತ್ರಕರ್ತರಾದ ಅನಿಲ ಹೊಸಮನಿ, ವಾಸುದೇವ ಹೆರಕಲ್ಲ, ಬಾಬುರಾವ ಕುಲಕರ್ಣಿ, ರಾಜು ಕೊಂಡಗೂಳಿ, ಸೀತಾರಾಮ ಕುಲಕರ್ಣಿ, ವಿನಾಯಕ ಸೊಂಡೂರ, ಸಚೇಂದ್ರ ಲಂಬು, ದೇವೇಂದ್ರ ಹೆಳವರ, ರಾಹುಲ ಮಾನಕರ, ಮಹೇಶ ಶೆಟಗಾರ, ಫಿರೋಜ್ ರೋಜನದಾರ, ನಿಂಬಣ್ಣ ಕಾಂಬಳೆ, ಸುಶಿಲೇಂದ್ರ ನಾಯಕ, ರಾಹುಲ ಆಪ್ಟೆ, ಪವನ ಕುಲಕರ್ಣಿ, ಸುನೀಲ ಗೋಡೆನವರ, ಮಲಕಪ್ಪ ಹೂಗಾರ, ಶಂಕರ, ಮೂಲಿಮನಿ, ಬಿ.ವೈ.ಸಾರವಾಡ, ಆರ್.ವಿ.ಗುನ್ನಾಪುರ, ರವಿ ವಲ್ಯಾಪುರ, ಇರ್ಫಾನ್ ಶೇಖ, ಸುನೀಲ ಭಜಂತ್ರಿ, ಅಲ್ಲಾಬಕ್ಷ ನಿಡಗುಂದಿ, ಎನ್.ಎನ್.ನಾವಿ. ಸಿ.ವಿ.ಸಜ್ಜನ, ಗುರುರಾಜ ಗದ್ದನಕೇರಿ, ವಿಠ್ಠಲ ಲಂಗೋಟಿ ಉಪಸ್ಥಿತರಿದ್ದರು.

ಕರ್ನಾಟಕ ರಕ್ಷಣಾ ವೇದಿಕೆ:  ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಿದ್ದ ಒಬ್ಬ ಹೋರಾಟಗಾರ್ತಿಯನ್ನು ನಾಡು ಕಳೆದುಕೊಂಡಿದೆ. ಈ ಕೊಲೆಯ ಹಿಂದೆ ಸೈದ್ಧಾಂತಿಕ ದ್ವೇಷ ಇರಬಹುದು. ತಕ್ಷಣವೇ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕುಂಬಾರ ಮಾತನಾಡಿದರು. ಮಹಾದೇವ ರಾವಜಿ, ದಸ್ತಗೀರ ಸಾಲೋಟಗಿ, ಭರತ್‌ ಕೋಳಿ, ಫಯಾಜ ಕಲಾದಗಿ, ಸಾಯಬಣ್ಣ ಮಡಿವಾಳರ, ಮನೋಹರ ತಾಜವ, ಫೀದಾ ಕಲಾದಗಿ, ಎಚ್.ಎಸ್.ಕಬಾಡೆ, ಅನೀಸ್ ಮಣಿಯಾರ, ಅಕ್ರಂ ಮಾಶ್ಯಾಳಕರ, ದತ್ತಾತ್ರೇಯ ಪೂಜಾರಿ, ಖಾಜಾಬಾಯಿ ಬೇಪಾರಿ, ದಸ್ತಗಿರ ಮುಲ್ಲಾ, ಫಾ.ಜೇರಾಲ್ಡ್ ಡಿಸೋಜಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ಕರ್ನಾಟಕ ಜನ ಬೆಂಬಲ ವೇದಿಕೆ: ಗೌರಿ ಹತ್ಯೆಗೆ ಕಾರಣರಾದ ಆರೋಪಿಗಳನ್ನು ಬಂಧಿಸಲು ಒತ್ತಾಯಿಸಿ, ಕರ್ನಾಟಕ ಜನ ಬೆಂಬಲ ವೇದಿಕೆ ಕಾರ್ಯಕರ್ತರು ನಗರದ ಬಸವೇಶ್ವರ ವೃತ್ತದಲ್ಲಿ ಕತ್ತೆಗಳ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿದರು.

ಮಲ್ಲಿಕಾರ್ಜುನ ಕುಂಬಾರ, ಪ್ರಕಾಶ ಕೋಳಿ, ಮೈಬೂಬ ಮುಲ್ಲಾ, ದೀಪಕ ಅಳಗುಂಡಿ, ಶರೀಫ ಸಾಹೇಬ, ಜಗದೀಶ ಲಚ್ಯಾಣ, ಬಸವರಾಜ ಹಿರೇಮಠ, ವೀರೇಶ ಹವಾಲ್ದಾರ ಮಠ, ಪಿಂಟು ಚವ್ಹಾಣ, ಹರೀಶ ಇಂಡಿ, ಕವಿತಾ ಹಿರೇಮಠ, ನಾಗರತ್ನ ನಾವಿ, ಮಹಾ ದೇವಿ ಮಠ, ಭಾಗ್ಯಶ್ರೀ ಬರಡೋಲ, ಭಾರತಿ ಭುಯ್ಯಾರ, ಅಂಬಿಕಾ ರಾಠೋಡ, ಹೇಮಾ ಮಠ ಇದ್ದರು.

ಉಗ್ರ ಶಿಕ್ಷೆಗೆ ಆಗ್ರಹ: ಗೌರಿ ಹತ್ಯೆಗೈದ ದುಷ್ಕರ್ಮಿಗಳನ್ನು ಶೀಘ್ರ ಪತ್ತೆ ಹಚ್ಚಿ, ಉಗ್ರ ಶಿಕ್ಷೆ ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಅನ್ಯಾಯದ ವಿರುದ್ಧ ಧ್ವನಿಯಾಗಿದ್ದ ಹೆಣ್ಣು ಮಗಳ ಮೇಲೆ ಅನಾಗರಿಕ ರೀತಿಯಲ್ಲಿ ಗುಂಡಿನ ಸುರಿಮಳೆಗೈದಿ ರುವುದನ್ನು ಯಾವ ಮನಸ್ಸು ಒಪ್ಪುವುದಿಲ್ಲ. ಈ ರೀತಿಯ ದುಷ್ಕೃತ್ಯ ಎಸಗಿದ ರಾಕ್ಷಸರೂಪಿ ಹಂತಕರನ್ನು ಕೂಡಲೇ ಪತ್ತೆ ಹಚ್ಚಿ ಕಠಿಣ ಶಿಕ್ಷೆಗೊಳ ಪಡಿಸಬೇಕು ಎಂದು ಪದಾಧಿಕಾರಿ ಗಳಾದ ಅಭಿಷೇಕ ಚಕ್ರವರ್ತಿ, ಸುನೀಲ ಕುಮಾರ ಉಕ್ಕಲಿ, ವೈ.ಎಚ್. ವಿಜಯಕರ, ಶಿವಪುತ್ರಪ್ಪ ತಳಭಂಡಾರಿ, ಮಲ್ಲಿಕಾರ್ಜುನ ಚಲವಾದಿ ಒತ್ತಾಯಿಸಿದ್ದಾರೆ.

ಲೀಡ್ ಇಂಡಿಯಾ ಪಬ್ಲಿಶರ್ಸ್ ಅಸೋಸಿಯೇಶನ್: ಗೌರಿ ಲಂಕೇಶ್‌ ಹತ್ಯೆ ಖಂಡಿಸಿ ಕರ್ನಾಟಕ ಲೀಡ್ ಇಂಡಿಯಾ ಪಬ್ಲಿಶರ್ಸ್ ಅಸೋಸಿಯೇಶನ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಅಸೋಸಿಯೇಶನ್ ಅಧ್ಯಕ್ಷ ಮೆಹಬೂಬ ಮಾಲಬಾವಡಿ, ಶಂಕರ ಕೂಡಗಿ, ಲೋಹಿತ ಪಾತ್ರೋಟ, ಈರಣ್ಣ ಹಡಪದ, ಸಿದ್ದು ಸಿಂಧೆ, ಸಿದ್ದು ಕಲ್ಲೂರ, ಸಂಜೀವ ಕರಾಬಿ, ಉಮೇಶ ಆಕಾಶಿ, ನಿಹಾದ ಅಹ್ಮದ ಗೋಡಿಹಾಳ, ಗಜಾನನ ಉಂಬಾಸೆ, ಸಣ್ಣಪ್ಪ ಜುಮ ನಾಳ, ಎಂ.ಸಿ.ಬಿರಾದಾರ, ಎಸ್.ಎಂ. ಚವ್ಹಾಣ, ಬಿ.ಜಿ.ಲಮಾಣಿ, ವಿ.ಸಿ.ಕಾಳೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT