ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಡಗುಂದಿ: ಪ್ರತಿಭಟನೆ, ಮಾನವ ಸರಪಳಿ

Last Updated 7 ಸೆಪ್ಟೆಂಬರ್ 2017, 6:05 IST
ಅಕ್ಷರ ಗಾತ್ರ

ನಿಡಗುಂದಿ: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಖಂಡಿಸಿ ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿ ಕಾರ್ಯನಿರತ ಪತ್ರಕರ್ತರ ಸಂಘ ನಿಡಗುಂದಿ ಘಟಕ ಹಾಗೂ ನಾನಾ ಸಂಘಟನೆಗಳ ಆಶ್ರಯದಲ್ಲಿ ಪಟ್ಟಣದಲ್ಲಿ ಪ್ರತಿಭಟಿಸಲಾಯಿತು.

ಪಟ್ಟಣದ ಬಸ್ ನಿಲ್ದಾಣ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಪ್ಪು ಪಟ್ಟಿ ಧರಸಿ ಮಾನವ ಸರಪಳಿ ನಡೆಸಿ ಕೆಲ ಕಾಲ ರಸ್ತೆ ನಡೆಸಿದರು. ನಂತರ ಕಾಲೇಜ್ ರಸ್ತೆ ಮೂಲಕ ಮೌನ ಪ್ರತಿಭಟನೆ ಮೆರವಣಿಗೆ ನಡೆಸಿ ವಿಶೇಷ ತಹಶೀಲ್ದಾರ್ ಎಂ.ಬಿ. ನಾಗಠಾಣ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಜಿ.ಸಿ.ಮುತ್ತಲದಿನ್ನಿ, ರೈತ ಮುಖಂಡ ಬಸವರಾಜ ಕುಂಬಾರ ಮಾತನಾಡಿ, ಗೌರಿ ಲಂಕೇಶರನ್ನು ಹತ್ಯೆ ಮಾಡಿದ್ದು ಖಂಡನೀಯ. ರಾಜ್ಯದಲ್ಲಿ ಸಾಮಾಜಿಕ ವಾಗಿ ಹೋರಾಟ ಮಾಡುವವರು, ವೈಚಾರಿಕ ವಿಚಾರಗಳನ್ನು ಮಂಡಿಸುವ ಪತ್ರಕರ್ತರಿಗೆ ರಕ್ಷಣೆ ಇಲ್ಲವಾಗಿದೆ ಎಂದರು.

ಪಟ್ಟಣ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಸಂಗಮೇಶ ಕೆಂಭಾವಿ, ಪತ್ರಕರ್ತ ಮುತ್ತು ಕುಪ್ಪಸ್ತ, ಡಿ.ಬಿ. ಕುಪ್ಪಸ್ತ, ಕರವೇ ಅಧ್ಯಕ್ಷ ಪ್ರಹ್ಲಾದ ಪತ್ತಾರ, ರೈತ ಸಂಘದ ನಿಡಗುಂದಿ ತಾಲ್ಲೂಕು ಘಟಕದ ಅಧ್ಯಕ್ಷ ತಿರುಪತಿ ಬಂಡಿವಡ್ಡರ ಮಾತನಾಡಿದರು.

ಪಟ್ಟಣ ಪಂಚಾಯ್ತಿ ಅಧ್ಯಕ್ಷ ಸಂಗಮೇಶ ಬಳಿಗಾರ, ಶೇಖರ ರೂಡಗಿ, ಹಿರಿಯ ಪತ್ರಕರ್ತ ಶಂಕರ ಜಲ್ಲಿ, ಮುಖಂಡರಾದ ಸಂಗಣ್ಣ ಕೋತಿನ, ನಜೀರ ಗುಳೇದ, ಶಂಕ್ರಪ್ಪ ದಂಡಿನ, ವೇಂಕಟೇಶ ವಡ್ಡರ, ಶ್ರೀನಾಥ ಬೈರವಾಡಗಿ, ಮಂಜುನಾಥ ಹಿರೇಮಠ, ರಾಮಸ್ವಾಮಿ ವಡ್ಡರ, ಸಂತೋಷ ದೊಡಮನಿ,  ಸಿಂಧೂರ ಬೈರವಾಡಗಿ,  ಬಾಬು ಮುರಾಳ, ಗಂಗಾಧರ ಹಿರೇಮಠ, ಮುಕುಂದ ಗೌಳಿ, ಚಂದ್ರಶೇಖರ ಬಳ್ಳಾರಿ, ಮಲ್ಲಿಕಾರ್ಜುನಯ್ಯ ತೋರಗಲ್ಲಮಠ, ಬಸವರಾಜ ದಂಡಿನ, ಉಳ್ಳಿ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT