ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕ್ರೋಶ, ಸಂತಾಪ, ಪ್ರತಿಭಟನೆ, ರಸ್ತೆತಡೆ..

Last Updated 7 ಸೆಪ್ಟೆಂಬರ್ 2017, 6:31 IST
ಅಕ್ಷರ ಗಾತ್ರ

ಶಿರಹಟ್ಟಿ: ನಕ್ಸಲರನ್ನು ಮುಖ್ಯ ವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗೌರಿ ಲಂಕೇಶ್ ಹತ್ಯೆ ಮಾಡಿದ ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ಶಿರಹಟ್ಟಿ ತಾಲ್ಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳು ಬುಧವಾರ ತಹಶೀ ಲ್ದಾರ್ ಕಚೇರಿಯಲ್ಲಿ ಮನವಿ ಸಲ್ಲಿಸಿ, ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳ ಪಡಿಸಬೇಕು ಎಂದು ಆಗ್ರಹಿಸಿದರು.

ಜಿ.ಬಿ.ಹೆಸರೂರ, ರಮೇಶ ನಾಡ ಗೇರ, ಎ.ಎಚ್‌.ಖಾಜಿ, ದಿಗಂಬರ ಪೂಜಾರ, ಮಹದೇವ ಸ್ವಾಮಿ, ನಾಗ ರಾಜ ಹಣಗಿ, ಮಂಜುನಾಥ ಆರೆಪಲ್ಲಿ, ಮಲ್ಲಿಕಾರ್ಜುನ ಕಳಸಾಪುರ, ಚಂದ್ರು ಕುಸಲಾಪೂರ, ಪ್ರಕಾಶ ಮೇಟಿ, ಅಶೋಕ ಸೊರಟೂರ, ಮಾಳಿಂಗರಾಯ ಪೂಜಾರ, ಬಸವರಾಜ ಸಂಗಪ್ಪಶೆಟ್ಟರ, ಶಿವಾನಂದ ಕುಳಗೇರಿ, ಎಂ.ಐ ಶೇಖ, ನಿಂಗಪ್ಪ ಹಮ್ಮಗಿ, ಬಸವರಾಜ ವಡವಿ ಇದ್ದರು. ಶಿರಸ್ತೆದಾರ ಗಿರಿಜಾ ಪೂಜಾರ ಮನವಿ ಸ್ವೀಕರಿಸಿದರು.

ಮನವಿ ಸಲ್ಲಿಕೆ
ಮುಂಡರಗಿ:
ಗೌರಿ ಲಂಕೇಶ್ ಅವರ ಹತ್ಯೆ ಖಂಡಿಸಿ ಪಟ್ಟಣದ ನ್ಯಾಯ ಕ್ಕಾಗಿ ನಾಗರಿಕ ವೇದಿಕೆ, ತಾಲ್ಲೂಕು ಕಾರ್ಯ ನಿರತ ಪತ್ರಕರ್ತರ ಸಂಘ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಕಾರ್ಯ ಕರ್ತರು ಬುಧವಾರ ಪಟ್ಟಣದಲ್ಲಿ ಪ್ರತಿಭ ಟನೆ ನಡೆಸಿ,  ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಹೋರಾಟಗಾರ ವೈ.ಎನ್.ಗೌಡರ, ಪತ್ರಕರ್ತ ಸಿ.ಕೆ.ಗಣಪ್ಪನವರ, ರಂಗ ಕರ್ಮಿ ಬಿ.ಬಾಬು, ಕೊಟ್ರೇಶ ಅಂಗಡಿ, ಪತ್ರಕರ್ತರಾದ ಎ.ಕೆ.ಮುಲ್ಲಾನವರ, ಹು.ಬಾ.ವಡ್ಡಟ್ಟಿ,  ಮಾತನಾಡಿದರು.

ಕೊಟ್ರಗೌಡ ಪಾಟೀಲ, ರಾಜಾಭಕ್ಷಿ ಬೆಟಗೇರಿ, ಬಿ.ವಿ.ಮುದ್ದಿ, ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂತೋಷಕುಮಾರ ಮುರುಡಿ, ಸದಸ್ಯ ರಾದ ಶಿವು ಹೊಂಬಳಗಟ್ಟಿ, ಹುಚ್ಚಪ್ಪ ಅಂಕಲಿ, ಪ್ರಕಾಶ ಅತ್ತರವಾಲಾ, ದಿಲೀಪ ಕುಮಾರ ಜೋಶಿ, ಎಪಿಎಂಸಿ ಸದಸ್ಯ ರವಿ ಉಪ್ಪನಬೆಟಗೇರಿ, ಸಂತೋಷ ಹಿರೇ ಮನಿ, ಗೌತಮಚಂದ ಛೋಪ್ರಾ, ವಿ.ಎಸ್.ಘಟ್ಟಿ, ನೀಲಪ್ಪ ಚಿಕ್ಕಣ್ಣವರ, ಮಂಜುನಾಥ ಇಟಗಿ, ನಾಗೇಶ ಹುಬ್ಬಳ್ಳಿ, ಶೇಖರಾಜ ಹೊಸಮನಿ, ವಿಜಯ ಕುಮಾರ ಶಿಳ್ಳಿನ ಇದ್ದರು.

ಪ್ರತಿಕೃತಿ ದಹನ
ಗಜೇಂದ್ರಗಡ:
ಗೌರಿ ಲಂಕೇಶ್ ಹತ್ಯೆ ತಡೆ ಯದೇ ಇರುವುದು ಹಾಗೂ ಕಲಬುರ್ಗಿ ಹಂತಕರನ್ನು ಬಂಧಿಸದೇ ಇರುವುದು ರಾಜ್ಯ ಸರ್ಕಾರದ ವೈಫಲ್ಯ ಎಂದು ಆರೋಪಿಸಿ ಕರ್ನಾಟಕ ಜನಹಿತ ವೇದಿಕೆ ಮುಖಂಡರು ಬುಧವಾರ ಕಾಲಕಾಲೇ ಶ್ವರ ವೃತ್ತದಲ್ಲಿ ರಾಜ್ಯ ಸರ್ಕಾರದ ಪ್ರತಿಕೃತಿ ದಹಿಸಿದರು.

ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಎಚ್.ಎಸ್.ಸೋಂಪುರ, ಮುಖಂಡ ರಾದ ರಾಜು ಸಾಂಗ್ಲೀಕರ,  ಸಂಜಯ ಜೋಶಿ, ಇದ್ದರು.
ಪ್ರತಿಭಟನೆ

ನರೇಗಲ್:  ಗೌರಿ ಲಂಕೇಶ್ ಹತ್ಯೆ ಖಂಡಿಸಿ ನರೇಗಲ್ ಹೋಬಳಿ ಕಾರ್ಯ ನಿರತ ಪತ್ರಕರ್ತರು ಸಂಘ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯ ಕರ್ತರು ಬುಧವಾರ ಪಟ್ಟಣದಲ್ಲಿ ಪ್ರತಿ ಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಪ್ರಭುಸ್ವಾಮಿ ಅರ ವಟಗಿಮಠ, ನಿಂಗರಾಜ ಬೇವಿನಕಟ್ಟಿ, ಈಶ್ವರ ಬೆಟಗೇರಿ, ಮಲ್ಲಯ್ಯ ಗುಂಡ ಗೋಪುರಮಠ, ಮೈಲಾರಿ ಚಳ್ಳಮರದ, ನಿಂಗಪ್ಪ ಮಡಿವಾಳರ, ಉಮೇಶ ನವಲ ಗುಂದ, ಸಿಕಂದರ ಆರಿ, ಚಿರು ನಿಡ ಗುಂದಿ, ನಿಂಗಪ್ಪ ಹೊನ್ನಾಪುರ, ಹುಲ ಗಪ್ಪ ಬಂಡಿವಡ್ಡರ ಇದ್ದರು.

ಮೆರವಣಿಗೆ
ರೋಣ:
ಗೌರಿ ಲಂಕೇಶ್ ಹತ್ಯೆ ಖಂಡಿಸಿ ಮಹಿಳಾ ರೈತ ಕಾರ್ಯಕರ್ತರು, ಪತ್ರ ಕರ್ತರು, ದಲಿತ ಸಂಘರ್ಷ ಸಮಿತಿ ಕಾರ್ಯ ಕರ್ತರು ಪಟ್ಟಣದಲ್ಲಿ ಬೃಹತ್ ಪ್ರತಿ ಭಟನಾ ಮೇರವಣಿಗೆ ನಡೆಸಿ ತಹಶೀ ಲ್ದಾರ್ ಪ್ರಭು ವಾಲಿ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮಹಿಳಾ ರೈತ ಮುಖಂಡರಾದ ಶಿವಲೀಲಾ ಶಿರೂರ, ಉಮಾದೇವಿ ಹಿರೇಮಠ, ರೇಣುಕಾ ಸಾವಂತ, ಪಾರವ್ವ ಕೊತಬಾಳ, ಜಯಶ್ರೀ ಕೊತಬಾಳ, ಲೋಕನಗೌಡ ಗೌಡರ, ಎಂ.ಎಸ್. ದೇಸಾಯಿ, ಪತ್ರಕರ್ತರಾದ ವೀರಯ್ಯಾ ಸೋಮನಕಟ್ಟಿ, ಮೌನೇಶ ಹಾದಿಮನಿ, ಪಿ.ಎಸ್. ಪಾಟೀಲ, ಮಂಜು ನಾಥ ರಾಠೋಡ, ವೀರಯ್ಯಾ ವಸ್ತ್ರದ, ಪ್ರಭುಸ್ವಾಮಿ ಅರವಟಿಗಿಮಠ, ಎ.ಡಿ. ಇಟಗಿ, ಮೆಹಬೂಬ್ ಮೋತೆಖಾನ್, ಬಸವರಾಜ ಪಟ್ಟಣಶೆಟ್ಟಿ, ಯಲ್ಲಪ್ಪ ತಳ ವಾರ ವಿರೂಪಾಕ್ಷ ಕಲಬುರ್ಗಿ ಇದ್ದರು.

ನರಗುಂದ: ಹೆದ್ದಾರಿ ತಡೆ
ನರಗುಂದ:
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಪಟ್ಟಣದಲ್ಲಿ  ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ  ಸದಸ್ಯರು ಶಿವಾಜಿ ವೃತ್ತದ ಬಳಿ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಅರ್ಧ ಗಂಟೆ ಹೆದ್ದಾರಿ ತಡೆ ನಡೆಸಿದ್ದ ರಿಂದ ಸಂಚಾರ ಅಸ್ತವ್ಯಸ್ತಗೊಂಡು ಪ್ರಯಾಣಿಕರು ಪರದಾಡಿದರು. ಹನುಮಂತ ಮಜ್ಜಿಗುಡ್ಡ, ಚನ್ನು ನಂದಿ, ರಾಘವೇಂದ್ರ ಮಜ್ಜಿಗುಡ್ಡ, ಬಸವ ರಾಜ ತಾವರೆ, ವಿಠ್ಠಲ ಜಾಧವ, ಹಳಕಟ್ಟಿ ಇದ್ದರು.

ಎಸ್.ಎಫ್.ಐ  ಆಕ್ರೋಶ
ಗಜೇಂದ್ರಗಡ:
ಗೌರಿ ಲಂಕೇಶ್ ಹತ್ಯೆ ಖಂಡಿಸಿ ಎಸ್.ಎಫ್.ಐ ನಗರ ಸಮಿತಿ ವತಿಯಿಂದ ಕಾಲಕಾಲೇಶ್ವರ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಪುರಸಭೆ ಸದಸ್ಯ ಎಂ.ಎಸ್.ಹಡ ಪದ, ರೈತ ಸಂಘದ ಮುಖಂಡ ಕೂಡ್ಲೆಪ್ಪ ಗುಡಿಮನಿ, ಬಾಲು ರಾಠೋಡ, ಎಂ.ಬಿ. ಸೋಂಪುರ, ಮಾರುತಿ ಚಿಟಗಿ, ಬಾಬು ಗೋಡೇಕಾರ, ಶರಣು ಪೂಜಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT