ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದಾಯಿಗಾಗಿ ರಾಜ್ಯವ್ಯಾಪಿ ಹೋರಾಟ

784ನೇ ದಿನಕ್ಕೆ ಕಾಲಿಟ್ಟ ಧರಣಿ: ಕರ್ನಾಟಕ ಪರಿವರ್ತನಾ ವೇದಿಕೆಯಿಂದ ಸರ್ಕಾರಕ್ಕೆ ಎಚ್ಚರಿಕೆ
Last Updated 7 ಸೆಪ್ಟೆಂಬರ್ 2017, 6:41 IST
ಅಕ್ಷರ ಗಾತ್ರ

ನರಗುಂದ: ಮಹದಾಯಿಗೆ ಈ ಭಾಗದ ರೈತರು ಕಳೆದ ಎರಡು ವರ್ಷಗಳಿಂದ ನಿರಂತರ  ಹೋರಾಟ ನಡೆಸುತ್ತಿದ್ದಾರೆ. ಆದರೆ ಇದರ ಬಗ್ಗೆ ಯಾರು ಚಕಾರ ಎತ್ತುತ್ತಿಲ್ಲ. ಈಗಾಗಲೇ ಅನೇಕ ಕನ್ನಡ ಪರ ಸಂಘಟನೆಗಳು ಇದಕ್ಕೆ ನಿರಂತರ ಬೆಂಬಲ ನೀಡಿವೆ.

ಈಗ ನಾವು ಸಹಿತ ಮಹದಾಯಿಗೆ ರಾಜ್ಯವ್ಯಾಪಿ ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದು ಜೈ ಹೋ ಕರ್ನಾಟಕ ಪರಿವರ್ತನಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಇರ್ಫಾನ್‌ ಡಂಬಳ ಎಚ್ಚರಿಸಿದರು. ನಡೆಯುತ್ತಿರುವ ಮಹದಾಯಿ ಧರಣಿಯ 784ನೇ ದಿನ ಬುಧವಾರ ಮಾತನಾಡಿದರು.

ರೈತರ ಸಂಕಷ್ಟ ಅರಿಯದ ಸರ್ಕಾರ ಗಳಿಗೆ ರೈತರು ಪಾಠ ಕಲಿಸಲು ಸಿದ್ಧರಾಗ ಬೇಕಿದೆ. ಒಗ್ಗಟ್ಟಿನ ಹೋರಾಟವು ಅವಶ್ಯ ವಾಗಿದೆ. ಇದರ ಬಗ್ಗೆ ಎಚ್ಚೆತ್ತುಕೊಳ್ಳದೇ ಹೋದರೆ ನಮ್ಮನ್ನು ರಾಜಕಾರಣಿಗಳು ದಾಳವಾಗಿ ಬಳಸಿಕೊಳ್ಳುವುದು ನಿಶ್ಚಿತ.  ಆದ್ದರಿಂದ ಈ ಸಂದರ್ಭದಲ್ಲಿ ಯೋಜನೆ ಅನುಷ್ಠಾನ ಬಗ್ಗೆ ನಿರಂತರ ಪ್ರಯತ್ನ ಮಾಡಬೇಕು. ಸಂಸದರು, ಶಾಸಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ.

ಬಹಳ ಸಂದರ್ಭದಲ್ಲಿ ವಿವಿಧ ರೂಪದ ಹೋರಾಟ ನಡೆದಿದೆ. ಆದರೂ ಪ್ರಧಾನಿ ಗಳು ಇದರ ಬಗ್ಗೆ ಮಾತನಾಡುತ್ತಿಲ್ಲ. ಇದನ್ನು ಬಹಳ ಲಘುವಾಗಿ ಪರಿಗಣಿಸಿದ್ದು ಸಲ್ಲದು. ಆದ್ದರಿಂದ ಪ್ರಧಾನಿಗಳು ಹಾಗೂ ಮೂರು ರಾಜ್ಯದ ಮುಖ್ಯ ಮಂತ್ರಿಗಳು ಒಂದೆಡೆ ಸೇರಿ ಇದರ ಬಗ್ಗೆ  ಚಿಂತನೆ ನಡೆಸಬೇಕು. ಬದುಕಿನ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಆಗ್ರಹಿಸಿದರು.

ರಾಜ್ಯ ಘಟಕದ ಉಪಾಧ್ಯಕ್ಷ ಕುಮಾರ ಕುರಗೋಡ ಮಾತನಾಡಿ ಕನ್ನ ಡದ ನೆಲ,ಜಲ ಹಾಗೂ ಭಾಷೆ ಉಳಿವಿ ಗಾಗಿ ಹೋರಾಟ ನಡೆಸಲಾಗುತ್ತಿದೆ. ಜಲ ವಿವಾದದ ಬಗ್ಗೆ ಬರಿ ಭರವಸೆಗಳಾಗಿವೆ ಹೊರತು ಅವು ಕಾರ್ಯ ರೂಪಕ್ಕೆ ಬಂದಿಲ್ಲ. ಆದ್ದರಿಂದ ಇನ್ನು ಭರವಸೆ ಆಗಲು ರೈತರು ಬಿಡಬಾರದು. ನಾವು ಸದಾ ನಿಮ್ಮ ಬೆಂಬಲಿಕ್ಕಿದ್ದೇವೆ ಎಂದರು.

ಧರಣಿಯಲ್ಲಿ ಕೋಶಾಧ್ಯಕ್ಷ ಜಾವೇದ ಬಬರ್ಚಿ, ರಮೇಶ ಬಿಳೆಎಲಿ, ಅಬ್ದುಲ್‌ ಖಾದರ್‌ ಬಳ್ಳಾರಿ, ಪ್ರಕಾಶ ನಾಯ್ಕರ, ಶಂಕರ ಗುರುಬಸಣ್ಣವರ, ಮುಸ್ತಕೆಮ್‌ ಶಿರಹಟ್ಟಿ, ನಜೀರ ಜಿದ್ದಿಮನಿ, ರಾಮ ಧನ್‌ ಚರಣ, ಸಂಗಮೇಶ ಬೀಳಗಿ, ಇಮ್ರಾನ್‌ ಲಾಲಕೋಟಿ, ಮಹದಾಯಿ ಹೋರಾಟ ಸಮಿತಿಯ ರಮೇಶ ನಾಯ್ಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT