ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತೀಶ ಜಾರಕಿಹೊಳಿ ಬಳಗದಿಂದ ವಿವಿಧ ಕಾರ್ಯಕ್ರಮ

ಹಬೀಬ್ ಶಿಲೇದಾರ ಜನ್ಮ ದಿನ ಕಾರ್ಯಕ್ರಮ
Last Updated 7 ಸೆಪ್ಟೆಂಬರ್ 2017, 7:21 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ಸಮಾಜ ಸೇವಕ ಹಾಗೂ ಸತೀಶ ಜಾರಕಿಹೊಳಿ ಅಭಿಮಾನಿ ಬಳಗದ ಅಧ್ಯಕ್ಷ ಹಬೀಬ್‌ ಶಿಲೇದಾರ ಅವರ ಜನ್ಮ ದಿನದ ಪ್ರಯುಕ್ತ ಸ್ವಗ್ರಾಮ ಅಂಬಡಗಟ್ಟಿ ಮತ್ತು ಕಿತ್ತೂರಲ್ಲಿ ವಿವಿಧ ಕಾರ್ಯಕ್ರಮಗಳನ್ನು ಇದೇ 9 ಮತ್ತು 10ರಂದು ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಸದಸ್ಯರಾದ ಮಡಿವಾಳಯ್ಯ ಗುರುವಯ್ಯನವರ ಹಾಗೂ ಮಾರುತಿ ನಾಯಕ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಜಂಟಿಯಾಗಿ ಮಾತನಾಡಿದ ಅವರು, 9ರಂದು ಮುಂಜಾನೆ 11ಗಂಟೆಗೆ ರಾಜಗುರು ಪ್ರತಿಷ್ಠಾನದ ಆಶ್ರಯದಲ್ಲಿ ಶಿಲೇದಾರ ಎಜ್ಯುಕೇಶನ್ ಸೊಸೈಟಿ ವತಿಯಿಂದ ಸತೀಶ ಕಂಪ್ಯೂಟರ್ ಅಕಾಡೆಮಿ ತರಬೇತಿ ಕೇಂದ್ರ ಕಿತ್ತೂರಲ್ಲಿ  ವಿಧ್ಯುಕ್ತವಾಗಿ ಉದ್ಘಾಟನೆಗೊಳ್ಳಲಿದೆ ಎಂದರು.

ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ನೇತೃತ್ವದ ತಂಡ ಪ್ರತಿಭಾವಂತ ವಿದ್ಯಾರ್ಥಿ ಗಳು ಮತ್ತು ಆಸಕ್ತರಿಗೆ ಕಂಪ್ಯೂಟರ್‌ ನಲ್ಲಿ ವಿವಿಧ ತರಬೇತಿ ಗಳನ್ನು ನೀಡಲಾಗು ವುದು. ಇದಕ್ಕೆ ಕಡಿಮೆ ಶುಲ್ಕ ನಿಗದಿಪಡಿಸಲಾಗಿದೆ ಎಂದರು.

ಅಂಬಡಗಟ್ಟಿಯಲ್ಲಿ ಸುಮಾರು 120 ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ನೀಡಲು ಸಕಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. 20 ಹೊಲಿಗೆ ಯಂತ್ರಗಳ ಉದ್ಘಾಟನೆಯೂ ಇದೇ 10ರಂದು ನಡೆಯಲಿದೆ.

ಉತ್ತಮ ತರಬೇತಿ ಪಡೆದ ಮಹಿಳೆಯರನ್ನು ಶೀಘ್ರದಲ್ಲೇ ಪ್ರಾರಂಭವಾಗಲಿರುವ ಗಾರ್ಮೆಂಟ್ಸ್‌ ಕಾರ್ಖಾನೆಯಲ್ಲಿ ಅವರಿಗೆ ಉದ್ಯೋಗ ನೀಡಲಾಗುವುದು.

ಇಂದಿನ ತಂತ್ರಜ್ಞಾನ ಯುಗದಲ್ಲಿ ಗ್ರಾಮಾಂತರ ಮತ್ತು ಪಟ್ಟಣ ಪ್ರದೇಶದ ಯುವಕರಿಗೆ ಅಗತ್ಯ ತರಬೇತಿ ನೀಡಿ ಆ ಮೂಲಕ ಸ್ವಉದ್ಯೋಗ ಸೃಷ್ಟಿಸುವುದು. ಮಹಿಳೆಯ ರನ್ನು ಸ್ವಾವಲಂಬಿಗಳನ್ನಾಗಿ ಮಾಡು ವುದು ಇದರ ಹಿಂದಿನ ಉದ್ದೇಶವಾಗಿದೆ ಎಂದು ಅವರು ವಿವರಿಸಿದರು.

ಗ್ರಾಮೀಣ ಭಾಗದ ಯುವಕರಿಗೆ ಮತ್ತು ಮಹಿಳೆಯರಿಗೆ ಅವರು ಕೈಗೊಳ್ಳುವ ಉದ್ಯೋಗದಲ್ಲಿ ಕೌಶಲ ತರಬೇತಿ ಅಗತ್ಯವೂ ಇದ್ದು, ಇದನ್ನು ತಜ್ಞರಿಂದ ಅವರಿಗೆ ಪಾಠ ಮಾಡಿಸ ಲಾಗುವುದು. ಶಿಲೇದಾರ ಅವರ ಹುಟ್ಟು ಹಬ್ಬ ನೆಪವಾಗಿಟ್ಟುಕೊಂಡು ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ ಎಂದು ಹೇಳಿದರು.

ಇದೇ 9ರಂದು ಬೆಳಿಗ್ಗೆ 11ಕ್ಕೆ ಕಿತ್ತೂರಲ್ಲಿ ನಡೆಯುವ ಕಂಪ್ಯೂಟರ್‌ ತರಬೇತಿ ಕೇಂದ್ರಕ್ಕೆ ಮಡಿವಾಳ ರಾಜ ಯೋಗೀಂದ್ರ ಸ್ವಾಮೀಜಿ ಚಾಲನೆ ನೀಡುವರು ಎಂದರು.

10ರಂದು ಬೆಳಿಗ್ಗೆ 11ಕ್ಕೆ ಅಂಬಡ ಗಟ್ಟಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮಕ್ಕೆ ಎಐಸಿಸಿ ಕಾರ್ಯದರ್ಶಿ, ಶಾಸಕ ಸತೀಶ ಜಾರಕಿಹೊಳಿ ಚಾಲನೆ ನೀಡುವರು. ಕಲ್ಮಠದ ಮಡಿವಾಳ ರಾಜ ಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿಯ ಪಂಚಾಕ್ಷರಿ ಸ್ವಾಮೀಜಿ, ದೇಗುಲಹಳ್ಳಿಯ ವಿರೇಶ್ವರ ಸ್ವಾಮೀಜಿ ಮತ್ತು ಇಸ್ಲಾಂ ಸಮಾಜದ ಗುರು ಜನಾಬ್ ಇಕ್ಬಾಲ್ ಅಹಮ್ಮದ್ ಸಿದ್ದಿಕಿ ಅವರು ಸಾನಿಧ್ಯ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ರಾಜ್ಯ ಬಾಲಭವನದ ಅಧ್ಯಕ್ಷೆ ಡಾ. ಅಂಜಲಿತಾಯಿ ನಿಂಬಾಳ್ಕರ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀರಕುಮಾರ ಪಾಟೀಲ, ಮಹಾಂತೇಶ ಕೌಜಲಗಿ, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಅರುಣ ಕಟಾಂಬಳೆ, ಸದಸ್ಯರಾದ ರೋಹಿಣಿ ಪಾಟೀಲ, ರಾಧಾಶ್ಯಾಮ ಕಾದ್ರೊಳ್ಳಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಅಂಕಲಗಿ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಾಬಾಸಾಹೇಬ ಪಾಟೀಲ, ರಾಣಿ ಶುಗರ್‍ಸ್ ಅಧ್ಯಕ್ಷ ಮೋಹನ ಸಂಬರಗಿ, ವ್ಯವಸ್ಥಾಪಕ ನಿರ್ದೇಶಕ ಶಿವ ಕುಲಕರ್ಣಿ, ಪಟ್ಟಣ ಪಂಚಾಯ್ತಿ ಅಧ್ಯಕ್ಷರಾದ ಮಹಮ್ಮದ್ ಹನೀಫ್ ಸುತಗಟ್ಟಿ, ಮುಗುಟಸಾಬ್‌ ಜಮಾದಾರ ಇತರರು ಭಾಗವಹಿಸುವರು ಎಂದರು.

ವಿಜಯಕುಮಾರ ಶಿಂಧೆ, ವಿಜಯ ಕುಮಾರ ಪಟ್ಟೇದ, ಜಿ.ಬಿ. ಪತ್ತಾರ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT