ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ಯೆ ಹೇಡಿಗಳ ಹೇಯ ಕೃತ್ಯ: ಟೀಕೆ

Last Updated 7 ಸೆಪ್ಟೆಂಬರ್ 2017, 8:46 IST
ಅಕ್ಷರ ಗಾತ್ರ

ಕೆರೂರ: ‘ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಜಾಸತ್ತೆ ಮೌಲ್ಯಗಳಿಗೆ ಮಾರಕವಾಗಿದೆ’ ಎಂದು ಪತ್ರಕರ್ತರ ಬಳಗ ಅಭಿಪ್ರಾಯ ಪಟ್ಟಿತು.
‘ಹತ್ಯೆ ಹೇಡಿಗಳ ಹೇಯ ಕೃತ್ಯ. ಸಮಾಜದ ಹಿತಾಸಕ್ತಿಗೆ ಬದ್ಧವಾಗಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಭದ್ರತೆಯೇ ಇಲ್ಲದಂತಾಗಿದೆ’ ಎಂದು ಕಂದಾಯ ನಿರೀಕ್ಷಕರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಪ್ರಮುಖರಾದ ಅಶೋಕ ಜಿಗಳೂರ, ಕುಮಾರ ಹಿರೇಮಠ, ಪ್ರಭು ಲಕ್ಷೆಟ್ಟಿ, ಭೀಮಸೇನ ದೇಸಾಯಿ, ಶ್ರೀಧರ ಚಂದರಗಿ, ರಮೇಶ ಕೊಣ್ಣೂರ , ರಾಘವೇಂದ್ರ ಕಲಾದಗಿ, ಆರ್. ಎಸ್. ನಿಡೋಣಿ, ಅಬೂಬಕರ್ ಯಡ ಹಳ್ಳಿ ಉಪಸ್ಥಿತರಿದ್ದರು.

ಗ್ರಾಮಸ್ಥರ ಮನವಿ
ಸಾವಳಗಿ:
  ಸಾವಳಗಿ ಗ್ರಾಮಸ್ಥರು ಉಪ ತಹಶೀಲ್ದಾರ್ ವೈ.ಎಚ್.ದ್ರಾಕ್ಷಿ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಜಾಗೃತ ದಳದ ಸದಸ್ಯ ದುಂಡಪ್ಪ ಲಮಾಣಿ, ‘ರಾಜ್ಯದಲ್ಲಿ ನ್ಯಾಯಕ್ಕಾಗಿ ಹೋರಾಟ ಮಾಡುವವರಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ.  ಶೀಘ್ರವೇ ಬಂಧಿಸದೆ ಹೋದರೆ ಹೋರಾಟ ಮಾಡುವುದಾಗಿ’ ತಿಳಿಸಿದರು.  ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ, ಮುಖಂಡರಾದ ರಾಮಣ್ಣಾ ಬಂಡಿ ವಡ್ಡರ, ಅಮೀತ ಸೂರ ಗೊಂಡ, ಜನಕರಾಜ ನಾಂದ್ರೇಕರ ಇದ್ದರು.

ಮುಖಂಡರ ಸ್ಮರಣೆ
ಅಮೀನಗಡ:
 ‘ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡನೀಯ’ ಎಂದು ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಹೇಳಿದ್ದಾರೆ.

ಸಿರಿಗನ್ನಡ ಕಲೆ, ಸಾಹಿತ್ಯ, ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ನರಸಿಂಹಮೂರ್ತಿ, ಉಪಾಧ್ಯಕ್ಷ ಯೋಗೀಶ ಲಮಾಣಿ,  ಮಹಾದೇವ ಬಸರಕೋಡ, ಗುರುನಾಥ ಚಳ್ಳಮರದ, ಗುರುರಾಜ ರಜಪೂತ, ಫಯಾಜ್ , ಪ್ರಭುಕುಮಾರ ಹತ್ಯೆ ಖಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT