ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಾರತಮ್ಯ ವಿರೋಧಿಸಿದ ನಾರಾಯಣ ಗುರು’

Last Updated 7 ಸೆಪ್ಟೆಂಬರ್ 2017, 9:06 IST
ಅಕ್ಷರ ಗಾತ್ರ

ಬಳ್ಳಾರಿ: ‘ಜಾತಿ ಆಧಾರಿತ ತಾರತಮ್ಯ ನೀತಿಯನ್ನು ಜೀವನದುದ್ದಕ್ಕೂ ಪ್ರತಿಭಟಿ ಸಿದ ನಾರಾಯಣಗುರು ಅನನ್ಯ ಸಮಾಜ ಸುಧಾರಕರಾಗಿದ್ದರು’ ಎಂದು ಚಿತ್ರಕಲಾ ಶಿಕ್ಷಕ ಕೆ.ಬಿ.ಸಿದ್ದಲಿಂಗಪ್ಪ ಅಭಿಪ್ರಾಯಪಟ್ಟರು.

ನಗರದ ಜೋಳದರಾಶಿ ದೊಡ್ಡನ ಗೌಡ ರಂಗಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ ಏರ್ಪಡಿಸಿದ್ದ ನಾರಾಯಣ ಗುರು ಜಯಂತಿಯಲ್ಲಿ ವಿಶೇಷ ಉಪ ನ್ಯಾಸ ನೀಡಿದ ಅವರು, ‘ದನಿ ಇಲ್ಲದ ತಳಸಮುದಾಯಗಳಿಗೆ ಶಕ್ತಿ ತುಂಬಿದ ನಾರಾಯಣಗುರು ಅವರಿಗಾಗಿ ದೇವ ಸ್ಥಾನಗಳನ್ನು ಕಟ್ಟಿಸಿ ಸಮಾನತೆಯನ್ನು ಸಾರಿದರು. ಈಳವ ಸಮುದಾಯಕ್ಕಷ್ಟೇ ಗುರುವಾಗದೆ ಇಡೀ ಮನುಕುಲಕ್ಕೆ ಶ್ರೇಯಸ್ಸು ಬಯಸಿದ್ದರು’ ಎಂದರು.

‘ಮೊದಲ ಬಾರಿಗೆ ಶಿವದೇವಾಲಯ ವನ್ನು ನಿರ್ಮಿಸಿದ ನಾರಾಯಣಗುರು ಈಳವ ಪರಯ್ಯ ಜಾತಿಗಳಲ್ಲಿ ಆತ್ಮ ಸ್ಥೈರ್ಯವನ್ನು ತುಂಬಿದ್ದರು. ದೇವರುಗಳ ಗುತ್ತಿಗೆಯನ್ನು ಪಡೆದಂತೆ ವರ್ತಿಸುತ್ತಿದ್ದ ನಂಬೂದರಿಗಳು ಆಕ್ಷೇಪಿಸಿದಾಗ, ನಾನು ಸ್ಥಾಪಿಸಿದ್ದು ನಿಮ್ಮ ಶಿವನನ್ನಲ್ಲ, ಈಳವ ಶಿವನನ್ನು ಎಂಬ ದಿಟ್ಟ ಮತ್ತು ಕ್ರಾಂತಿಕಾರಿ ಉತ್ತರ ನೀಡಿದ್ದರು’ ಎಂದು ವಿವರಿಸಿದರು.

‘ಜಗತ್ತಿನಲ್ಲಿ ಇರುವುದು ಒಂದೇ ಮತ, ಕುಲ ಮತ್ತು ಜಾತಿ ಎಂದು ಪ್ರತಿ  ಪಾದಿಸಿದ ನಾರಾಯಣಗುರು, ಶೂದ್ರ ರಲ್ಲಿ ಇದ್ದ ಬಾಲ್ಯವಿವಾಹ, ಆಡಂಬರದ ಮದುವೆ ಪದ್ಧತಿಗಳಿಗೆ ತಡೆಯೊಡ್ಡಿದರು. ಅವರ ಸಂದೇಶಗಳನ್ನು ಎಲ್ಲೆಡೆ ಸಾರುವ ನಿರಂತರವಾಗಿ ನಡೆಯಬೇಕು’ ಎಂದರು.

ಶಾಸಕ ಅಲ್ಲಂ ವೀರಭದ್ರಪ್ಪ ಕಾರ್ಯ ಕ್ರಮವನ್ನು ಉದ್ಘಾಟಿಸಿದರು. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿ.ಎನ್.ಗಿರಿ ಮಲ್ಲಪ್ಪ ಮಾತನಾಡಿದರು. ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಕೃಷ್ಣ ಅಧ್ಯಕ್ಷತೆ ವಹಿಸಿದ್ದರು.

ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ನಾರಾಯಣಗುರು ಭಾವಚಿತ್ರದ ಮೆರ ವಣಿಗೆಗೆ ಇಲ್ಲಿನ ಮುನ್ಸಿಪಲ್ ಕಾಲೇಜಿನ ಮೈದಾನದಲ್ಲಿ ಉಸ್ತುವಾರಿ ಸಚಿವ ಸಂತೋಷ್‌ಲಾಡ್‌ ಚಾಲನೆ ನೀಡಿದರು. ನೂರಾರು ಮಹಿಳೆಯರು ಕಲಶ ಹೊತ್ತು ಮರವಣಿಗೆಯಲ್ಲಿ ನಡೆದಿದ್ದು ಗಮನ ಸೆಳೆಯಿತು.

ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಪಾಲಿಕೆ ಜಂಟಿ ಯಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆರ್ಯ ಈಡಿಗ  ಮಹಾಜನ ಸಭಾದ ಜಿಲ್ಲಾ ಘಟಕ ಕಾರ್ಯದರ್ಶಿ ಮೂಲ ಶ್ರೀನಿವಾಸುಲು, ಮುಖಂಡರಾದ ಕೀರ್ತಿಕುಮಾರ, ಎ. ಮಂಜುನಾಥ, ಸತ್ಯವೇಣಿ,         ಧನಂಜಯ, ವಿಜಯಕುಮಾರ, ಸುಂಕಪ್ಪ, ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT