ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಟಮಿನ್ ಇ ಬಗ್ಗೆ ನಿಮಗೆಷ್ಟು ಗೊತ್ತು?

Last Updated 7 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

–ಕಲಾವತಿ ಬೈಚಬಾಳ

*

ನಮ್ಮ ದಿನನಿತ್ಯದ ಆಹಾರದಲ್ಲಿ ವಿಟಮಿನ್‌ಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಹಲವಾರು ಸೌಂದರ್ಯವರ್ಧಕಗಳಲ್ಲೂ ವಿಟಮಿನ್‌ ಇ ಪ್ರಮುಖ ಅಂಶವಾಗಿ ಬಳಕೆಯಾಗುತ್ತದೆ. ನೈಸರ್ಗಿಕ ಸಾಮಾಗ್ರಿಗಳ ಜೊತೆಗೆ ವಿಟಮಿನ್ ಇ ಕ್ಯಾಪ್ಸುಲ್‌ ಎಣ್ಣೆಯನ್ನು ಮಿಕ್ಸ್‌ ಮಾಡಿ ಮಾಸ್ಕ್‌ ತಯಾರಿಸಲಾಗುತ್ತದೆ. ಇದನ್ನು ಬಳಸುವುದರಿಂದ ತುಟಿ, ಚರ್ಮ ಹಾಗೂ ಕೂದಲಿನ ಸೌಂದರ್ಯ ಇನ್ನಷ್ಟು ಹೆಚ್ಚುತ್ತದೆ.

ಮೊಡವೆ ಹಾಗೂ ಗುಳ್ಳೆಗಳಿಂದ ಮುಕ್ತಿ: ಮುಖದಲ್ಲಿನ ಮೊಡವೆ ಹಾಗೂ ಸಣ್ಣ ಪುಟ್ಟ ಗುಳ್ಳೆಗಳಿಂದ ಮುಕ್ತಿ ಪಡೆಯಲು 1 ಚಮಚ ವಿಟಮಿನ್ ಇ ಎಣ್ಣೆ ಹಾಗೂ 1 ಚಮಚ ಜೇನು ತುಪ್ಪ ಸೇರಿಸಿ ಮೊಡವೆ ಆಗಿರೋ ಜಾಗಕ್ಕೆ ಹಚ್ಚಿ. 10 ನಿಮಿಷದ ನಂತರ ತಣ್ಣೀರಿನಿಂದ ಮುಖ ತೊಳೆಯಿರಿ.

ಮೃದು ತುಟಿಗೆ: ವಿಟಮಿನ್ ಇ ಮಾತ್ರೆಗಳಿಂದ ಎಣ್ಣೆ ತೆಗೆದು ಅದನ್ನು ಗ್ಲಿಸರಿನ್ ಜೊತೆ ಮಿಶ್ರಣ ಮಾಡಿ ತುಟಿಗೆ ಹಚ್ಚಿ. ತುಟಿಯನ್ನು ಕೋಮಲವಾಗಿಸಲು 1 ಚಮಚ ವಿಟಮಿನ್ ಇ ಎಣ್ಣೆ ಜೊತೆಗೆ 1 ಚಮಚ ಗ್ಲಿಸರಿನ್ ಹಾಕಿ ಮಿಶ್ರ ಮಾಡಿ ಪೇಸ್ಟ್ ತಯಾರಿಸಿ ಒಂದು ಬಾಟಲಿಯಲ್ಲಿ ಹಾಕಿಡಿ. ಪ್ರತಿ ದಿನ ಮಲಗುವ ಮೊದಲು ಇದನ್ನು ಹಚ್ಚಿ. ಇದರಿಂದ ತುಟಿ ಮೃದುವಾಗುತ್ತದೆ.

ಮುಖದ ಕಾಂತಿಗಾಗಿ: ಒಂದು ಚಮಚ ಅಲೊವೇರಾ ಜೆಲ್‌ಗೆ ವಿಟಮಿನ್ ಇ ಕ್ಯಾಪ್ಸುಲ್‌ ಎಣ್ಣೆ ಸೇರಿಸಿ ಪೇಸ್ಟ್ ತಯಾರಿಸಿ. ಮುಖವನ್ನು ತೊಳೆದು ಈ ಪೇಸ್ಟ್‌ನ್ನು ಹಚ್ಚಿ. ಒಣಗಿದ ನಂತರ ಮುಖ ತೊಳೆಯಿರಿ.

ಚರ್ಮದ ಕಾಂತಿಗಾಗಿ: ಬಾಳೆಹಣ್ಣು, ಸೇಬುಹಣ್ಣು, ಬಾದಾಮಿಯ ಜೊತೆಗೆ ವಿಟಮಿನ್‌ ಇ ಎಣ್ಣೆ ಹಾಕಿ ಮುಖಕ್ಕೆ ಲೇಪಿಸಿದರೂ ಚರ್ಮ ಕಾಂತಿಯುಕ್ತವಾಗುತ್ತದೆ.

ಕಪ್ಪು ವರ್ತುಲ ನಿವಾರಣೆಗೆ: 1 ಚಮಚ ವಿಟಮಿನ್ ಇ ಎಣ್ಣೆ ಹಾಗೂ 1 ಚಮಚ ತೆಂಗಿನ ಎಣ್ಣೆಯನ್ನು ಸೇರಿಸಿ ಕಣ್ಣಿನ ಕೆಳಗೆ ಹಚ್ಚಿ. ಹಚ್ಚುವ ಮೊದಲು ಕಣ್ಣಿನ ಕೆಳಭಾಗವನ್ನು ಚೆನ್ನಾಗಿ ಒರೆಸಿ ನಂತರ ಹಚ್ಚಿ.

ರಕ್ತ ಸಂಚಾರ: ಬ್ರೊಕೋಲಿ, ಪಾಲಕ್, ಮಾವಿನ ಹಣ್ಣು, ಗೋಧಿ, ಬಾದಾಮಿ, ಬೆಣ್ಣೆ ಹಣ್ಣು, ಬಾಳೆಹಣ್ಣು, ಮೀನು, ಬೆಳ್ಳುಳ್ಳಿ, ಕರಬೂಜ, ಕೆಂಪು ಮೆಣಸಿನ ಕಾಯಿ, ಜೋಳ, ಟೊಮೆಟೊ, ಸೇಬು, ಕಲ್ಲಂಗಡಿ, ಅಣಬೆ, ಬ್ಲ್ಯಾಕ್‌ಬೆರ‍್ರಿ, ಬಾಳೆಹಣ್ಣು, ಕಿವಿ ಹಣ್ಣುಗಳು, ಬಾದಾಮಿ, ಕಡಲೆಬೀಜ ಈ ಆಹಾರಗಳಲ್ಲಿ ವಿಟಮಿನ್ ಇ ಅಂಶ ಹೆಚ್ಚಾಗಿರುತ್ತದೆ. ಇವುಗಳ ಸೇವನೆಯಿಂದ ದೇಹದಲ್ಲಿ ರಕ್ತ ಸಂಚಾರ ಹೆಚ್ಚಾಗಿ ಕೂದಲು ಆರೋಗ್ಯವಾಗಿರುತ್ತವೆ. ವಿಟಮಿನ್ ಇ  ಅಧಿಕವಾಗಿರುವ ಆಹಾರಗಳಲ್ಲಿ ಒಂದು ಬಗೆಯ ಎಣ್ಣೆಯ ಅಂಶವಿದ್ದು, ಇದು ಒಣಚರ್ಮದ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT