ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಡಕ್ಕಿರಲಿ ಸಾವಯವ ಆರೈಕೆ

Last Updated 7 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಮನೆಯಂಗಳದ ಒಂದಿಷ್ಟು ಜಾಗದಲ್ಲಿ ಮಾಡಿಕೊಂಡ ಕೈತೋಟದ ಆರೈಕೆಗೆ ಮನೆಯಲ್ಲಿ ಉಳಿದ ಪದಾರ್ಥಗಳನ್ನು ಗೊಬ್ಬರದಂತೆ ಬಳಸಬಹುದು. ಅದಕ್ಕಾಗಿ ಒಂದಿಷ್ಟು ಟಿಪ್ಸ್‌ ಇಲ್ಲಿದೆ...

* ಕಾಫಿ, ಟೀ ಮಾಡಿದ ನಂತರ ಉಳಿದ ಗರಟವನ್ನು ಕೆಲ ಸಮಯ ನೀರಿನಲ್ಲಿ ಬೆರೆಸಿ. ನಂತರ ಗಿಡಗಳ ಬುಡಕ್ಕೆ ಹಾಕಿ. ಟೀ ಬ್ಯಾಗ್‌ಗಳನ್ನೂ ಗಿಡದ ಬುಡಕ್ಕೆ ಹಾಕಬಹುದು. ಕಾಫಿ ಗರಟವನ್ನು ಪ್ರತಿದಿನವೂ ಬಳಸಬಾರದು. ವಾರಕ್ಕೊಮ್ಮೆ ಹಾಕಿದರೆ ಸಾಕು

* ತರಕಾರಿ, ಹಣ್ಣುಗಳ ಸಿಪ್ಪೆಗಳನ್ನೂ ಗಿಡಗಳ ಬುಡಕ್ಕೆ ಹಾಕಿ. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ

* ಮೊಟ್ಟೆ ಸಿಪ್ಪೆಯನ್ನು ಪುಡಿ ಮಾಡಿ, ನೀರಿನಲ್ಲಿ ಕೆಲಕಾಲ ನೆನೆಸಿಡಿ. ನಂತರ ಗಿಡಗಳ ಬುಡಕ್ಕೆ ಹಾಕಿ

* ಶೇಂಗಾ ಸಿಪ್ಪೆ ಮತ್ತು ಸೂರ್ಯಕಾಂತಿ ಬೀಜದ ಸಿಪ್ಪೆಗಳು ಸಹ ಮಣ್ಣಿನ ಫಲವತ್ತತೆ ಕಾಪಾಡಲು ಸಹಕಾರಿ. ಸಿಪ್ಪೆಯನ್ನು ಉಪ್ಪು ನೀರಿನಲ್ಲಿ ತೊಳೆದು ಗೊಬ್ಬರವನ್ನಾಗಿ ಬಳಸಬಹುದು.

* ಕಿತ್ತಳೆ, ಮೋಸಂಬಿ, ನಿಂಬೆಯಂಥ ಸಿಟ್ರಿಕ್‌ ಜಾತಿಯ ಹಣ್ಣುಗಳ ಸಿಪ್ಪೆಗಳನ್ನು ಗಿಡಗಳ ಬುಡಕ್ಕೆ ಹಾಕಬಹುದು. ಇವುಗಳನ್ನು ಗಿಡದ ಬೇರುಗಳ ಮೇಲೆ ಹಾಕಿದರೆ ಬಸವನ ಹುಳು ಮುಂತಾದ ಕೀಟಗಳು ಗಿಡಗಳ ಮೇಲೆ ದಾಳಿ ಮಾಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT