ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳು ಚಕ್ಕರ್ ಹೊಡೆಯದ ಹೆಗ್ಗಳಿಕೆ!

Last Updated 8 ಸೆಪ್ಟೆಂಬರ್ 2017, 5:09 IST
ಅಕ್ಷರ ಗಾತ್ರ

ಆಲಮಟ್ಟಿ:(ನಿಡಗುಂದಿ): ಆಲಮಟ್ಟಿ ಡ್ಯಾಂಸೈಟ್‌ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ಬಸವನಬಾಗೇವಾಡಿ ತಾಲ್ಲೂಕಿನ ‘ಉರ್ದು ಮಾಧ್ಯಮದ ಅತ್ಯುತ್ತಮ ಶಾಲೆ’ ಪ್ರಶಸ್ತಿಗೆ  ಪಾತ್ರವಾಗಿದೆ. ಇತ್ತೀಚಿಗೆ ಬಸವನಬಾಗೇವಾಡಿ ಯಲ್ಲಿ ನಡೆದ ಶಿಕ್ಷಕರ ದಿನೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಶಿವಾನಂದ ಪಾಟೀಲ ಈ ಶಾಲೆಯ ಮುಖ್ಯ ಶಿಕ್ಷಕ ಎಂ.ಆರ್. ಮಕಾನದಾರ್ ಹಾಗೂ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

1 ರಿಂದ 8ನೇ ತರಗತಿಯನ್ನು ಹೊಂದಿದ ಈ ಶಾಲೆಯಲ್ಲಿ 89 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಮುಖ್ಯ ಶಿಕ್ಷಕ ಸೇರಿದಂತೆ ಒಟ್ಟು ಆರು ಜನ ಶಿಕ್ಷಕರಿದ್ದಾರೆ. ಮಕ್ಕಳಿಗೆ ಪಠ್ಯದ ಜೊತೆಗೆ ಶಾರೀರಿಕ ಶಿಕ್ಷಣ ಜೊತೆಗೆ ಪಠ್ಯೇತರ ಚಟುವಟಿಕೆಗಳು ಕೂಡಾ ಇಲ್ಲಿ ಹೆಚ್ಚು ನಡೆಯುತ್ತವೆ.

ಆಲಮಟ್ಟಿ, ಚಿಮ್ಮಲಗಿ, ಅರಳದಿನ್ನಿ ಸೇರಿದಂತೆ ಸುತ್ತಮುತ್ತಲಿನ ಹಲವಾರು ಕಡೆಯಿಂದ ಮುಸ್ಲಿಂ ಮಕ್ಕಳು ಇಲ್ಲಿ ಅಧ್ಯಯನಕ್ಕೆ ನಿತ್ಯವೂ ಬರುತ್ತಾರೆ.  ಶಾಲಾ ಮಕ್ಕಳಿಗೆ ಕುಡಿಯಲು ಪರಿಶುದ್ಧ ನೀರು, ಶೌಚಗೃಹದ ಶುಚಿತ್ವ, ರುಚಿ ಮತ್ತು ಶುಚಿಕರವಾದ ಬಿಸಿಯೂಟ ನೀಡುತ್ತಾ ಬಂದಿರುವುದು ಈ ಶಾಲೆಯ ವೈಶಿಷ್ಟ್ಯ. 

ಶಾಲೆಯ ಸುತ್ತಲಿನ ಆವರಣ ಸಂಪೂರ್ಣ ನಿಸರ್ಗಮಯವ ನ್ನಾಗಿ ರೂಪಿಸುವಲ್ಲಿ ವಿದ್ಯಾರ್ಥಿಗಳನ್ನು ನಿತ್ಯ ಕಾರ್ಯತತ್ಪರ ನ್ನಾಗಿ ಇಲ್ಲಿನ ಶಿಕ್ಷಕರು ಹೆಚ್ಚಿನ ಮುತುವರ್ಜಿ ವಹಿಸಿದ್ದು ಇತರ ಶಾಲೆಗಳಿಗೆ ಮಾದರಿಯಾಗಿ ಕಂಗೊಳಿಸುವಂತಿದೆ ಎಂದು ಶಾಲೆಯ ಮುಖ್ಯ ಶಿಕ್ಷಕ ಎಂ.ಆರ್‌.ಮಕಾಂದಾರ ಹೇಳುತ್ತಾರೆ.

ಉದ್ಯಾನದ ರೀತಿಯಲ್ಲಿ ಗಿಡ ಗಳನ್ನು ನೆಟ್ಟು, ಹುಲ್ಲನ್ನು ಬೆಳೆಸಲಾಗಿದೆ. ಶಾಲೆಯ ಅಂದಚೆಂದವನ್ನು ಮಾಡಿಸ ಲಾಗಿದ್ದು, ರಾಷ್ಟ್ರ ನಾಯಕರ ಭಾವ ಚಿತ್ರಗಳು ಗೋಡೆಯಲ್ಲಿ ರಾರಾಜಿಸುತ್ತಿವೆ.

ಪಠ್ಯೇತರ ಚಟುವಟಿಕೆಯಲ್ಲಿ ಈ ಮಕ್ಕಳು ಸದಾ ಮುಂದೆ.  ಶಾಲೆ ಯಲ್ಲಿಯ ವಿಶೇಷತೆಗಳ ಕರಪತ್ರ ಮುದ್ರಿಸಿ ಸಾರ್ವಜನಿಕರಿಗೆ ಹಂಚಿ, ಶಾಲೆಯ ಬಗ್ಗೆ  ತಿಳುವಳಿಕೆ ಮೂಡಿಸಲಾಗಿದೆ ಎಂದೂ ಅವರು ಹೇಳಿದರು.

* * 

ಶಾಲೆಯ ಮಕ್ಕಳ ಗುಣಾತ್ಮಕ ಶಿಕ್ಷಣದ ಜೊತೆಗೆ ಶಿಸ್ತಿನ ಪಾಠವೂ ನಮ್ಮ ಶಾಲೆಯ ವೈಶಿಷ್ಠ್ಯ. ತಾಲ್ಲೂಕು ಮಟ್ಟದ ಉತ್ತಮ ಶಾಲೆ ಪ್ರಶಸ್ತಿ ಬರಲು ಶಿಕ್ಷಕರ ಸಹಕಾರ ಕಾರಣ
ಎಂ.ಆರ್. ಮಕಾನದಾರ್
ಮುಖ್ಯ ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT