ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಬೆಟನ್ ಕ್ಯಾಂಪ್‌ನಲ್ಲಿ ಬಾಡಿಗೆ ಯಂತ್ರ ಕೇಂದ್ರ

Last Updated 8 ಸೆಪ್ಟೆಂಬರ್ 2017, 5:31 IST
ಅಕ್ಷರ ಗಾತ್ರ

ಮುಂಡಗೋಡ: ತಾಲ್ಲೂಕಿನ ಟಿಬೆಟನ್ ಕ್ಯಾಂಪ್‌ ನಂ.3ರ ಡೊಗ್ಯುಲಿಂಗ್‌ ಪ್ರೈಮರಿ ಅಗ್ರಿಕಲ್ಚರ್‌ ಕೋ ಆಫ್‌ ಸೊಸೈ ಟಿಯು ಕಳೆದ 40 ವರ್ಷಗಳಿಂದ ಟಿಬೆ ಟನ್ ರೈತರಿಗೆ ಕೃಷಿ ಚಟುವಟಿಕೆ ಉತ್ತೇಜಿ ಸಲು ಬಾಡಿಗೆ ಆಧಾರದಲ್ಲಿ ಯಂತ್ರೋ ಪಕರಣಗಳ ಬಳಕೆಗೆ ಅವಕಾಶ ನೀಡುತ್ತಿದೆ.

ನಿರಾಶ್ರಿತರಾಗಿ ಬಂದಿದ್ದ ಟಿಬೆಟನ್ನ ರಿಗೆ ಕೃಷಿ ಚಟುವಟಿಕೆ ನಡೆಸಲು 4,500 ಹೆಕ್ಟೇರ್‌ ಅರಣ್ಯ ಭೂಮಿಯನ್ನು ನೀಡ ಲಾಗಿತ್ತು.  ಕೃಷಿ ಚಟುವಟಿಕೆಗೆ ಜಾನು­ವಾರುಗಳನ್ನೇ ಅವಲಂಬಿಸಬೇಕಾದ ಅನಿ­ವಾರ್ಯತೆ ಎದುರಾಗಿತ್ತು. ಜಾನು ವಾರು ಸಾಕಿ ವ್ಯವಸಾಯ ಮಾಡುವ ಪದ್ಧತಿ, ಟಿಬೆಟನ್ನ ರಿಗೆ  ಸ್ವಲ್ಪ ಕಠಿಣ ವಾಗತೊಡಗಿತ್ತು. ಇದನ್ನು ಮನಗಂಡ ಸ್ಥಳೀಯ ಡೊಗ್ಯು ಲಿಂಗ್‌ ಸೊಸೈಟಿ ಯವರು ಟಿಬೆಟನ್ ರೈತರಿಗೆ ಯಂತ್ರೋ­ಪಕರಣಗಳನ್ನು ಖರೀದಿಸಿ, ಬಾಡಿಗೆ ಆಧಾರದ ಮೇಲೆ ಅವಕಾಶ ಮಾಡಿಕೊಟ್ಟರು. 

‘ಆರಂಭದಲ್ಲಿ ನಾಲ್ಕೈದು ಟ್ರ್ಯಾಕ್ಟರ್‌ಗಳನ್ನು ಖರೀದಿ ಮಾಡಿ, ಟಿಬೆ ಟನ್ ರೈತರಿಗೆ ಕೃಷಿ ಚಟುವಟಿಕೆಗೆ ಅನುಕೂಲ ಮಾಡಿಕೊಡಲಾಗಿತ್ತು. ಕೃಷಿಯಲ್ಲಿ ಟ್ರ್ಯಾಕ್ಟರ್‌ಗಳ ಬಳಕೆ ಸ್ಥಳೀಯರಿಗೆ ಹೊಸದಾಗಿ ಕಂಡಿತ್ತು. ಯಂತ್ರೋಪಕರಣಗಳ ಬಳಕೆಯಿಂದ ಉಳುಮೆ ಮಾಡುವುದು ಸಾಮಾನ್ಯವಾಗತೊಡಗಿತ್ತು. ರೈತರು ಆದಾಯ ಗಳಿಸಿ, ಸೊಸೈಟಿಗೂ ಬಾಡಿಗೆ ಹಣವನ್ನು ತುಂಬುತ್ತಿದ್ದರು. ಇದರಿಂದ ಸೊಸೈಟಿ ವರ್ಷದಿಂದ ವರ್ಷಕ್ಕೆ ಹೆಚ್ಚು ಯಂತ್ರೋಪಕರಣಗಳ ಖರೀದಿ ಮಾಡಲು ಸಾಧ್ಯವಾಗಿತ್ತು’ ಎಂದು ಡೊಗ್ಯುಲಿಂಗ್‌ ಸೊಸೈಟಿಯ ವ್ಯವಸ್ಥಾಪಕ ಯಶಿ ಗ್ಯಾಲಟ್ಸನ್‌ ಹೇಳಿದರು.

ಇಂಗ್ಲೆಡ್‌ನಿಂದ ಟ್ಯಾಕ್ಟರ್‌ಗಳ ಕೊಡುಗೆ: ಟಿಬೆಟನ್ ರೈತರ ಕೃಷಿ ಚಟುವಟಿಕೆ ಉತ್ತೇಜಿಸಲು, ಇಂಗ್ಲೆಂಡ್‌ನಲ್ಲಿದ್ದ ಬೌದ್ಧ ಅನುಯಾಯಿಗಳು, ಮೆಸ್ಸಿ ಕಂಪೆನಿಯ 165, 135 ಮಾದರಿಯ ಒಟ್ಟು 16 ಟ್ರ್ಯಾಕ್ಟರ್‌ಗಳನ್ನು, ಈ ಸೊಸೈಟಿಗೆ ದಾನ ವಾಗಿ ನೀಡಿದ್ದರು.  ಶಕ್ತಿಶಾಲಿಯಾಗಿದ್ದ ಟ್ರ್ಯಾಕ್ಟರ್‌ಗಳ ಕಾರ್ಯಕ್ಷಮತೆ ತಿಳಿಯಲು, ಬೇರೆ ಟ್ರ್ಯಾಕ್ಟರ್‌ ಕಂಪೆನಿಯ ಪ್ರತಿನಿಧಿ ಗಳು ಬಂದು, ಅವುಗಳ ಮಾದರಿಯನ್ನು ಪರಿಶೀಲಿಸಿದ್ದರು. ಬಳಕೆ ಮಾಡಿದ ಕೆಲ ವರ್ಷಗಳಲ್ಲಿ, ಲಂಡನ್‌ ಮಾದರಿ ಟ್ರ್ಯಾಕ್ಟರ್‌ಗಳನ್ನು ದುರಸ್ತಿ ಮಾಡಿಸು ವುದು ಕಷ್ಟವಾಗತೊಡಗಿತು. ಅವುಗಳ ಬಿಡಿಭಾಗಗಳನ್ನು ದೆಹಲಿ, ಮುಂಬೈ ಯಿಂದ ತರಿಸಬೇಕಾದ ಪರಿಸ್ಥಿತಿಯಿತ್ತು. ನಿರ್ವಹಣೆ ಕಷ್ಟವಾಗಿ  ಪಂಜಾಬಿ ಮೂಲ ದವರು ಅವುಗಳನ್ನು ಖರೀದಿ ಮಾಡಿ ದರು ಎಂದು ಟಿಬೆಟನ್ ಮುಖಂಡ ಜಂಪಾ ಲೋಬ್ಸಂಗ್‌ ಹೇಳಿದರು.

ಟಿಬೆಟನ್ ರೈತರ ಕೆಲಸ, ಕಾರ್ಯ ಮುಗಿದ ನಂತರ ಸ್ಥಳೀಯ ರೈತರ ಹೊಲಗದ್ದೆಗಳಲ್ಲಿ ಯಂತ್ರೋಪಕರಣಗಳ ಬಳಕೆ ಮಾಡಲು ಅವಕಾಶ ನೀಡ ಲಾಗುತ್ತಿತ್ತು. ಸ್ಥಳೀಯ ಭಾರತೀಯ ರೈತರು ಟ್ರ್ಯಾಕ್ಟರ್‌ಗಳನ್ನು ಖರೀದಿಸಿ ದ್ದರಿಂದ, ಅವುಗಳನ್ನೇ ಬಾಡಿಗೆ ಆಧಾ ರದ ಮೇಲೆ ಟಿಬೆಟನ್ ರೈತರು ಪಡೆ ಯುವುದು ಮುಂದುವರಿಯಿತು. ಇದ ರಿಂದ ಯಂತ್ರೋಪಕರಣಗಳು ಮೊದಲಿ ನಷ್ಟು ಡೊಗ್ಯುಲಿಂಗ್‌್ ಸೊಸೈಟಿಯಲ್ಲಿ ಇಲ್ಲ ಎಂದು ಯಶಿ ಗ್ಯಾಲಟ್ಸನ್‌ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT