ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಮಾನದ ಸಂಭ್ರಮಕ್ಕೆ ಸಿಎಂ ಚಾಲನೆ

Last Updated 8 ಸೆಪ್ಟೆಂಬರ್ 2017, 6:07 IST
ಅಕ್ಷರ ಗಾತ್ರ

ಬಾಗಲಕೋಟೆ: ಇಲ್ಲಿನ ಬಸವೇಶ್ವರ ಸಹಕಾರಿ ಬ್ಯಾಂಕ್‌ನ ಶತಮಾನೋತ್ಸವ ಡಿಸೆಂಬರ್ 1ರಿಂದ 3ರವರೆಗೆ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ ಎಂದು ಬ್ಯಾಂಕ್‌ನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೊದಲ ದಿನದ ಸಮಾರಂಭದ ಸಾನಿಧ್ಯವನ್ನು ಸಿದ್ದೇಶ್ವರ ಸ್ವಾಮೀಜಿ ವಹಿಸಲಿದ್ದು, ಜಿಲ್ಲೆಯ ಎಲ್ಲಾ ಜನಪ್ರತಿ ನಿಧಿಗಳು ಪಾಲ್ಗೊಳ್ಳಲಿದ್ದಾರೆ. ಅಂದು ಸಂಜೆ ರವೀಂದ್ರ ಸೋರಗಾವಿ ಅವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸ ಲಾಗಿದೆ. ಡಿಸೆಂಬರ್ 2ರಂದು 100 ಜೋಡಿ ಸಾಮೂಹಿಕ ವಿವಾಹ ನಡೆಯಲಿದೆ.

ಈ ಸಮಾರಂಭಕ್ಕೆ ನಾಡಿನ ವಿವಿಧ ಮಠಾಧೀಶರು ಸಾಕ್ಷಿಯಾಗಲಿ ದ್ದಾರೆ. ಮುಂಡರಗಿ ತೋಂಟದಾರ್ಯ ಮಠದ ನಿಜಗುಣಾ ನಂದ ಸ್ವಾಮೀಜಿ ಪ್ರವಚನ ನೀಡಲಿದ್ದಾರೆ. ಡಿಸೆಂಬರ್ 3ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪಾಲ್ಗೊಳ್ಳಲಿದ್ದಾರೆ. ಶ್ರೀಶೈಲ ಪೀಠದ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಅಂದು ಸಂಜೆ ರಾಜೇಶ ಕೃಷ್ಣನ್ ಅವರಿಂದ ಸಂಗೀತ  ಆಯೋಜಿಸಲಾಗಿದೆ ಎಂದರು.

ವಿವಿಧ ಕಾರ್ಯಕ್ರಮ ಆಯೋಜನೆ: ಶತಮಾನೋತ್ಸವದ ಅಂಗವಾಗಿ 100 ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿತ್ತು. ಅದರಲ್ಲಿ ಈಗಾಗಲೇ 35 ಕಾರ್ಯಕ್ರಮ ಮುಕ್ತಾಯಗೊಂಡಿವೆ. ‘ಬಸವ ಸಂಪದ’ ಸ್ಮರಣಿಕೆ ಹೊರ ತರಲಾ ಗುತ್ತಿದೆ. ಪುರುಷರಿಗಾಗಿ ಬ್ಯಾಡ್ಮಿಂ ಟನ್, ಟೆನಿಸ್, ಖೊಖೊ, ಆಟ್ಯಾ–ಪಾಟ್ಯಾ, ಕುಸ್ತಿ, ವಾಲಿಬಾಲ್, ಯೋಗ, ಹಗ್ಗ–ಜಗ್ಗುವ ಸ್ಪರ್ಧೆ, ಸೈಕ್ಲಿಂಗ್, ಮಲ್ಲಕಂಬ, ಪಗಡೆ, ತೆರೆದ ಬಂಡಿ ಓಟ, ಟಗರಿನ ಕಾಳಗ ಹಮ್ಮಿಕೊಳ್ಳಲಾಗುವುದು.

ಮಹಿಳೆಯರಿಗಾಗಿ ಅಡುಗೆ ಮಾಡುವ ಸ್ಪರ್ಧೆ, ಕ್ವಿಜ್, ಜಾನಪದ ಗೀತೆ, ಶರಣ–ಶರಣೆಯರ ವೇಷ–ಭೂಷಣ, ರಂಗೋಲಿ, ಸೌಂದರ್ಯ ಸ್ಪರ್ಧೆ ನಡೆಸಲಾಗುವುದು. ಶತಮಾನೋತ್ಸವ ಭವನ ನಿರ್ಮಿಸಲಾಗಿದ್ದು, ರಂಗಸಂಭ್ರಮ, ಬಸವೇಶ್ವರ ಬ್ಯಾಂಕ್ ರೂಪಕ ಆಯೋಜಿಸಲಾಗುವುದು.

ನವೆಂಬರ್ 19ರಂದು ಜಾನಪದ ಗಾರುಡಿಗ ಗುರುರಾಜ ಹೊಸಕೋಟಿ ಅವರಿಂದ ಜನಪದ ರಸಸಂಜೆ, 26ರಂದು ಗಂಗಾವತಿ ಪ್ರಾಣೇಶ ಹಾಗೂ ತಂಡದವರಿಂದ ಹಾಸ್ಯ ಸಂಜೆ, ಕಿವುಡ, ಮೂಗ ಹಾಗೂ ಮಂದಬುದ್ಧಿಯ 200 ಮಕ್ಕಳಿಗೆ ಮೂರು ದಿನಗಳ ವೃತ್ತಿ ತರಬೇತಿ, ಬಸವ ಜಲ ಭಾಗ್ಯ ಅಡಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಬಸ್ ತಂಗುದಾಣ ನಿರ್ಮಿಸಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT