ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನಗಳಲ್ಲಿ ಸಕಲ ಧರ್ಮಗಳ ತಿರುಳು

Last Updated 8 ಸೆಪ್ಟೆಂಬರ್ 2017, 8:40 IST
ಅಕ್ಷರ ಗಾತ್ರ

ಮೈಸೂರು: ಜಗತ್ತಿನ ಎಲ್ಲ ಧರ್ಮಗಳಲ್ಲಿ ಹೇಳಿರುವ ತಿರುಳು ವಚನಗಳಲ್ಲಿ ಅಡಗಿದೆ ಎಂದು ಲೇಖಕ ಸಿ.ನಾಗಣ್ಣ ಅಭಿ‍ಪ್ರಾಯ ವ್ಯಕ್ತಪಡಿಸಿದರು. ಶಿವರಾತ್ರಿ ರಾಜೇಂದ್ರ ಸ್ವಾಮಿ ಜನ್ಮದಿನದ ಅಂಗವಾಗಿ ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ನಗರ ಘಟಕವು ಈಚೆಗೆ ನಗರದಲ್ಲಿ ಆಯೋಜಿಸಿದ್ದ ವಚನ ದಿನ ಉದ್ಘಾಟಿಸಿದ ಅವರು, ‌‘ವಚನ ಧರ್ಮ–ವಿಶ್ವ ಧರ್ಮ’ ವಿಷಯ ಮಂಡಿಸಿದರು.

ಕ್ರಿಶ್ಚಿಯನ್‌ ಧರ್ಮವು ಶತ್ರುವನ್ನು ‍ಪ್ರೀತಿಸು, ಒಂದೇ ಜನ್ಮದಲ್ಲಿ ಮುಕ್ತಿ ಸಂಪಾದಿಸಬೇಕು ಎಂದು ಹೇಳಿದರೆ, ಇಸ್ಲಾಂನಲ್ಲಿ ದುಡಿಮೆಯಿಂದ ಬದುಕು ಸಾಗಿಸು, ಸರಳ ಜೀವನ ನಡೆಸು, ಬಡವರ ಬಗ್ಗೆ ಔದಾರ್ಯದಿಂದ ಇರಬೇಕು ಎಂದು ಹೇಳುತ್ತದೆ.

ಆದರೆ ಶರಣ ಧರ್ಮ ಜನ್ಮಾಂತರಗಳಿಗೆ ಪ್ರಧಾನ್ಯತೆ ಕೊಡಲಿಲ್ಲ, ಇಹಪರಗಳೆಲ್ಲ ಇಲ್ಲೇ ಇರುವುದು ಎಂದು ಸಾರಿತು. ಇಲ್ಲಿಯೇ ಸಲ್ಲಬೇಕು ಎಂಬುದಕ್ಕೆ ಒತ್ತು ಕೊಟ್ಟಿದೆ. ಜಗತ್ತಿನ ಎಲ್ಲ ಧರ್ಮಗಳ ಸಾರವೂ ಒಂದೇ ಅದು ಸರಳ ಜೀವನ ನಡೆಸಬೇಕು ಎಂಬುದು. ಆದರೆ ಅದನ್ನು ಯಾರೂ ಪಾಲಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.‌

ಎಂದೆಂದೂ ಮುಗಿಯದ ‘ಬ್ಯಾಂಕ್‌ ಬ್ಯಾಲೆನ್ಸ್‌’ ಅನ್ನು ವಚನಕಾರರು ನಮಗೆ ಬಿಟ್ಟು ಹೋಗಿದ್ದಾರೆ. ಅದನ್ನು ಮುಂದಿನ ಪೀಳಿಗೆಗೆ ಒಂದೊಂದು ವಚನಗಳನ್ನು ಹೇಳಿಕೊಟ್ಟರೆ ಅವರ ಬದುಕು ವಿಶಾಲವಾಗುತ್ತದೆ ಎಂದರು. ಸಹಾಯಕ ಪ್ರಾಧ್ಯಾ‍ಪಕಿ ಜ್ಯೋತಿ ಶಂಕರ್‌ ಅವರು, ‘ವಚನ ಸಾಹಿತ್ಯದಲ್ಲಿರುವ ಸಮಾನತೆಯ ಅಂಶಗಳು’ ಕುರಿತು ಮಾತನಾಡಿದರು.

ಸಹಾಯಕ ಪ್ರಾಧ್ಯಾಪಕ ನಂದೀಶ್‌ ಹಂಚೆ, ಶಿವರಾತ್ರೀಶ್ವರ ಅಕ್ಕನ ಬಳಗದ ಅಧ್ಯಕ್ಷೆ ಎಂ.ಎ.ನೀಲಾಂಬಿಕಾ, ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ಘಟಕದ ಅಧ್ಯಕ್ಷ ಗೊ.ರು. ಪರಮೇಶ್ವರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT