ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ಕೆಂಜಿಗದಹಳ್ಳಿ ಜಲಾವೃತ

Last Updated 8 ಸೆಪ್ಟೆಂಬರ್ 2017, 9:45 IST
ಅಕ್ಷರ ಗಾತ್ರ

‌ಕೆಂಜಿಗದಹಳ್ಳಿ (ದೊಡ್ಡಬಳ್ಳಾಪುರ): ತಾಲ್ಲೂಕಿನ ಮಧುರೆ ಹೊಬಳಿ ಕೆಂಜಿಗ ದಹಳ್ಳಿ ಗ್ರಾಮದಲ್ಲಿ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು ಗ್ರಾಮಸ್ಥರು ನರಕ ಯಾತನೆ ಪಡುವಂತಾಗಿದೆ ಎಂದು ಗ್ರಾ ಮದ ನಿವಾಸಿ ವೆಂಕಟೇಶ್‌ ದೂರಿದ್ದಾರೆ.

ಶಾಲಾ ಕಟ್ಟಡ ಹಳೆಯ ದಾಗಿದ್ದು ಕಟ್ಟಡ ಶಿಥಿಲಾವಸ್ಥೆಯಾಗಿದೆ. ಗೊಡೆಗಳು ಬಿರುಕುಬಿಟ್ಟಿದ್ದು ಯಾವ ಸಮಯದಲ್ಲಿ ಬಿಳುತ್ತದೆಯೋ ಎನ್ನುವಂತಾಗಿದೆ. ಮಳೆ ಬಂದರೆ ಇಡೀ ಶಾಲಾ ಆವರಣ ಮಳೆ ನೀರಿನಿಂದ ತುಂಬಿ ಹೋಗುತ್ತದೆ.

ಕೆಂಜಿಗದಹಳ್ಳಿ ಗ್ರಾಮಕ್ಕೆ ಹೋಗಲು ಇರುವ ಮುಖ್ಯರಸ್ತೆ ಗುಂಡಿಗಳಿಂದ ತುಂಬಿದ್ದು ಕೆಸರು ಗದ್ದೆಯಂತಾಗಿದೆ. ಹಗಲಿನ ವೇಳೆಯಲ್ಲಿಯೇ ನಡೆದಾಡಲು ಸಾಧ್ಯವಿಲ್ಲದಂತಾಗಿದೆ. ಈಬಗ್ಗೆ ಹಲವಾರು ಬಾರಿ ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಳ್ಳು ವಂತಾಗಿದೆ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT