ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಸಮನ್ವಯ-ಸಹಬಾಳ್ವೆ ವೈವಾಹಿಕ ಜೀವನದ ಕೀಲಿಕೈ'

Last Updated 8 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಇಂದಿರಾ ಪಿ.

**

'ಮದುವೆ'. ಇದು ಎರಡು ಜೀವಿಗಳನ್ನು ಬೆಸೆಯುವ ಒಂದು ಸುಂದರವಾದ ಚೌಕಟ್ಟು ಹಾಗೂ ಸಮಾಜದ ಕಟ್ಟುಪಾಡು. ವಿವಾಹಗಳಲ್ಲಿ ಧಾರ್ಮಿಕವಿವಾಹ, ಪ್ರೇಮವಿವಾಹ, ಗಾಂಧರ್ವವಿವಾಹ ಇತ್ಯಾದಿ ಅನೇಕ ರೀತಿಗಳಿವೆ. ಏನೇ ಇರಲಿ, ಎರಡು ಜೀವಿಗಳ ಮನಸ್ಸನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಅವರ ಭವಿಷ್ಯದ ಭದ್ರತೆ ಅಡಗಿರುವುದಂತೂ ಸತ್ಯ!

ನಮ್ಮ ಕಾಲದಲ್ಲಿ ನಾವು ಮದುವೆಯಾಗುವ ಹುಡುಗನನ್ನು ಮದುವೆ ಸಂದರ್ಭದಲ್ಲಿಯೇ ನೋಡುವುದು ಪರಿಪಾಠ. ‘ಹುಡುಗ ನಿನಗೆ ಇಷ್ಟವೆ? ಒಪ್ಪಿಗೆಯೇ?’ ಎಂದು ಕೇಳುವ ಪ್ರಶ್ನೆಯೇ ಏಳುತ್ತಿರಲಿಲ್ಲ. 'ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ' ಎನ್ನುವ ಗಾದೆಯಂತೆ ಕಷ್ಷವೋ ಸುಖವೋ ಹೊಂದಿಕೊಂಡು ಬಾಳಲೇಬೇಕು, ಸಂಸಾರರಥವನ್ನು ಸಾಗಿಸಲೇಬೇಕು ಎನ್ನುವ ಮಾತನ್ನು ಹಿರಿಯರಿಂದ ಕೇಳುತ್ತಲೇ ಬಂದಿದ್ದೇವೆ. ಈಗ ಕಾಲ ಬದಲಾಗಿದೆ. ಹುಡುಗ–ಹುಡುಗಿಯ ಕುಟುಂಬ, ಮನೆತನ ಎನ್ನುವ ಹಲವು ರೀತಿಯ ತಲಾಶೆಗಳು ನಡೆದಿರುತ್ತವೆ.

ಈಗ ಮದುವೆಗೆ ಮೊದಲೇ ಇಬ್ಬರಿಗೂ ಪರಸ್ಪರ ಪರಿಚಯ, ಒಡನಾಟವೂ ನಡೆದಿರುತ್ತದೆ. ಆದರೂ ವಿವಾಹದ ನಂತರದಲ್ಲಿ ಸಾಮರಸ್ಯದ ಕೊರತೆಯಿಂದಾಗಿ ಕೆಲವೊಂದು ಸಂದರ್ಭಗಳಲ್ಲಿ ಸಂಬಂಧ ಮುರಿದು ಬೀಳುತ್ತಿವೆ ಕೂಡ. ಇತ್ತೀಚಿಗೆ ಭಾರತದಲ್ಲಿ ವಿಚ್ಛೇದನ ಪಡೆಯುವವರ ಸಂಖ್ಯೆ ಸಾಮಾನ್ಯವೆಂಬಂತೆ ಕೇಳಿ ಬರುತ್ತಿವೆ. ಸಹಬಾಳ್ವೆ ಅಸಾಧ್ಯ – ಎನ್ನುವ ತೀರ್ಮಾನಕ್ಕೆ ಬಂದು ದಾಂಪತ್ಯಜೀವನದಿಂದ‌ ಬೇರ್ಪಡುವುದು ಹೆಚ್ಚಾಗುತ್ತಿದೆ. ವಿಚ್ಛೇದನವು ಸ್ವಾತಂತ್ರ್ಯವನ್ನೇನೋ ಕೊಡಬಹುದು. ಆದರೆ ಅದು ಭವಿಷ್ಯದ ಜೀವನಕ್ಕೆ ದುಃಖವನ್ನೂ ತಂದು ಕೊಟ್ಟೀತು! ಪರಸ್ಪರ ತಿಳಿವಳಿಕೆಯಿಂದ ಒಬ್ಬರನ್ನೊಬ್ಬರು ಅರಿತು, ಹೊಂದಿಕೊಂಡು ಬಾಳಲು ಕಲಿತರೆ ಬೇರ್ಪಡುವ ಪ್ರಶ್ನೆಯೇ ಉಂಟಾಗಲಾರದು. ಚಿಕ್ಕ ಪುಟ್ಟ ತಪ್ಪುಗಳು ಬರುವುದು ಸಹಜ ಅದನ್ನು ಅಲ್ಲಿಗೇ ಪರಿಹರಿಸಿಕೊಳ್ಳುವುದು ಒಳಿತು. ಸಕಾರಾತ್ಮಕ ಚಿಂತನೆಯುಂದ ನಕಾರಾತ್ಮಕ ಧೋರಣೆಗಳು ಕಡಿಮೆಯಾಗುವುದಲ್ಲದೆ, ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆಯನ್ನು ಗಳಿಸಲು ಸಾಧ್ಯವಾಗುತ್ತದೆ.

ಜೊತೆಯಾಗಿ ಇಬ್ಬರೂ ಪರಸ್ಪರವಾಗಿ ಮಾನಸಿಕಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರೆ ಮದುವೆಯ ಜೀವನಾರಂಭದಲ್ಲಿ ಇರುವ ಉತ್ಸಾಹ–ಪ್ರೀತಿಗಳು ಬದುಕಿನ ಮುಸ್ಸಂಜೆಯ ಸಮಯದಲ್ಲೂ  ಅಪ್ಪುವ ಕೈಗಳಾಗಿ ಸಾಂತ್ವನ ನೀಡುತ್ತವೆ. ವಿವಾಹಜೀವನದ ಸುಖ ನಮ್ಮಿಂದಲೇ ರೂಪುಗೊಳ್ಳುತ್ತವೆ. ಗಂಡ–ಹೆಂಡತಿ – ಇಬ್ಬರ ಅನ್ಯೋನ್ಯ ಸಂಬಂಧದಿಂದ ವೈವಾಹಿಕ ಜೀವನದ ಅಂತಿಮ ಹಂತದವರೆಗೂ ಸುಖ, ಸಂತೋಷ, ನೆಮ್ಮದಿ ನೀಡಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT