ಧರ್ಮ ಎಂದರೇನು? ಮತ ಎಂದರೇನು? ಅಧ್ಯಾತ್ಮ ಎಂದರೇನು?

ಎಲ್ಲವನ್ನೂ ತಾಳುವಂಥದ್ದು, ಧರಿಸುವಂಥದ್ದು, ಆಧಾರವಾಗಿರುವಂಥದ್ದು ಯಾವುದೋ ಅದು ‘ಧರ್ಮ’. ಇದು ಅದರ ಮೂಲಾರ್ಥ. ಇದನ್ನೇ Cosmic Order  ಎನ್ನಬಹುದು. ಇದೊಂದು‌ ವಿಶ್ವವ್ಯವಸ್ಥೆ; ದೇಶ–ಕಾಲಗಳನ್ನು ಮೀರಿದ ತತ್ತ್ವ.

ಚಿಲಿಯಲ್ಲಿರುವ ಒಂದು ಮಂದಿರ –ಚಿತ್ರಕೃಪೆ: ವಿಕಿಕಾಮನ್ಸ್‌

- ಲೀಲಾವತಿ, ಹಾಸನ

‘ಧರ್ಮ’. ನಮ್ಮ ದೇಶದಲ್ಲಿ ಈ ಶಬ್ದದಷ್ಟು ಅಪಾರ್ಥಕ್ಕೆ‌ ಒಳಗಾಗಿರುವ ಶಬ್ದ ಇನ್ನೊಂದು ಇಲ್ಲ ಎನ್ನಬಹುದು. ಇದಕ್ಕೆ ಕಾರಣವೂ ಇಲ್ಲದಿಲ್ಲ. ‘ಧರ್ಮ’- ಇದು‌ ಅತ್ಯಂತ ಸಂಕೀರ್ಣ ಪದ. ಹಲವು ನೆಲೆಗಳ‌ ಅರ್ಥವನ್ನು ಅದು ಹೊಂದಿದೆ; ಸುಲಭವಾಗಿ ಅರ್ಥೈಸಲು ಆಗದು. ಆದುದರಿಂದ ಅದನ್ನು ಉಪಯೋಗಿಸಿದ ಸಂದರ್ಭವನ್ನು ನೋಡಿಕೊಂಡೇ ಅರ್ಥ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ‘Religion’ ಎಂಬುದಕ್ಕೆ ಪರ್ಯಾಯವಾಗಿ ಅದನ್ನು ಬಳಸುತ್ತಿರುತ್ತೇವೆ.‌ ಆದರೆ ಧರ್ಮಕ್ಕೆ ಇನ್ನೂ ವ್ಯಾಪಕವಾದ‌ ಅರ್ಥಪರಂಪರೆ ಇದೆ.

ಎಲ್ಲವನ್ನೂ ತಾಳುವಂಥದ್ದು, ಧರಿಸುವಂಥದ್ದು, ಆಧಾರವಾಗಿರುವಂಥದ್ದು ಯಾವುದೋ ಅದು ‘ಧರ್ಮ’. ಇದು ಅದರ ಮೂಲಾರ್ಥ. ಇದನ್ನೇ Cosmic Order  ಎನ್ನಬಹುದು. ಇದೊಂದು‌ ವಿಶ್ವವ್ಯವಸ್ಥೆ; ದೇಶ–ಕಾಲಗಳನ್ನು ಮೀರಿದ ತತ್ತ್ವ.

ನಾವು ಹಿಂದೂಧರ್ಮ, ಬೌದ್ಧ ಧರ್ಮ, ಇಸ್ಲಾಂಧರ್ಮ ಎಂದೆಲ್ಲ ಹೇಳುವಾಗ ‘ಧರ್ಮ’ದ ಮೂಲಾರ್ಥಕ್ಕಿಂತ ಬೇರೆಯಾದ ಮತ್ತೊಂದು ಸ್ತರದ ಅರ್ಥವೇ ಅಲ್ಲಿರುತ್ತದೆ ಎನ್ನುವುದನ್ನು ಗಮನಿಸಬೇಕು. ಹೀಗೆಯೇ ರಾಜಧರ್ಮ, ಗೃಹಸ್ಥಾಶ್ರಮಧರ್ಮ, ಸಂನ್ಯಾಸಧರ್ಮ - ಹೀಗೆ ಹೇಳುವಾಗಲೂ ಇನ್ನೊಂದು ಸ್ತರದ ಅರ್ಥವೇ ಇರುತ್ತದೆ. ಆದುದರಿಂದ ಧರ್ಮ ಎಂದರೇನು ಎಂದು ಆಯಾ ಸಂದರ್ಭವನ್ನು ಹಿಡಿದೇ ಅರ್ಥ ಮಾಡತಕ್ಕದ್ದು.

ವೈಯಕ್ತಿಕ ಸ್ತರದ ಆಚಾರ-ವಿಚಾರ-ನಂಬಿಕೆಗಳನ್ನೇ ‘ಮತ'’ ಎನ್ನುವುದು. ‌ಮತ ಒಂದು‌ ಜನಾಂಗದಿಂದ‌ ಮತ್ತೊಂದು ಜನಾಂಗಕ್ಕೆ ಭಿನ್ನವಾಗಿರುವುದು ಸಹಜ. ಅಂತೆಯೇ ದೇಶ-ಕಾಲ-ಸಂಸ್ಕೃತಿಗಳಿಗೆ ಅನುಗುಣವಾಗಿ ಮತದ ಕಲ್ಪನೆ ಬದಲಾಗಬಹುದು. ಇಂದು ನಾವು ಧರ್ಮ ಎಂದು ವ್ಯವಹರಿಸುವುದೆಲ್ಲವೂ ವಾಸ್ತವವಾಗಿ ಮತವೇ ಆಗಿರುತ್ತದೆ.
‘ಅಧ್ಯಾತ್ಮ’ ಎಂದರೆ ಆತ್ಮವನ್ನು ಕುರಿತಾದುದು. ಆತ್ಮ ಎಂದರೆ ಮೂಲಚೈತನ್ಯ. ಸೃಷ್ಟಿಯ ಎಲ್ಲ‌ ವಿವರಗಳ ಹಿಂದಿರುವ ಕಾರಣಶಕ್ತಿಯೇ ಅದು. ಅದರ ಹುಡುಕಾಟವನ್ನು ಮಾಡುವ ಎಲ್ಲ ಪ್ರಕ್ರಿಯೆಗಳೂ ಆಧ್ಯಾತ್ಮಿಕತೆ ಎನಿಸಿಕೊಳ್ಳುತ್ತವೆ.

ಇದಿಷ್ಟು ಧರ್ಮ, ಮತ ಮತ್ತು ಅಧ್ಯಾತ್ಮ - ಇವುಗಳ ಬಗ್ಗೆ ಸಂಕ್ಷಿಪ್ತ ಪರಿಚಯ.

Comments
ಈ ವಿಭಾಗದಿಂದ ಇನ್ನಷ್ಟು

ಸ್ವಾಧ್ಯಾಯ
ಅಗ್ನಿಯ ಸ್ತುತಿ

ಋಗ್ವೇದ ಆರಂಭವಾಗುವುದೇ ಅಗ್ನಿಯ ಸ್ತುತಿಯಿಂದ; ಋಗ್ವೇದದ ಮೊದಲ ಮಂತ್ರ ಹೀಗಿದೆ. ಈ ಮಂತ್ರದ ಋಷಿ: ಮಧುಚ್ಛಂದಾ; ಛಂದಸ್ಸು: ಗಾಯತ್ರೀ; ದೇವತೆ: ಅಗ್ನಿ

21 Apr, 2018
ಏನ್‌ ಎಮ್ಮೆಲ್ಲೆಗಳೋ ಯಾಕ್ಹಿಂಗ್‌ ಆಡ್ತಾರೊ!

ವಿಡಂಬನೆ
ಏನ್‌ ಎಮ್ಮೆಲ್ಲೆಗಳೋ ಯಾಕ್ಹಿಂಗ್‌ ಆಡ್ತಾರೊ!

21 Apr, 2018
ಯಾಗದ ಕುದುರೆ ಹೊರಟಿತು ಸಂಚಾರಕೆ

ರಾಮಾಯಣ ರಸಯಾನ 36
ಯಾಗದ ಕುದುರೆ ಹೊರಟಿತು ಸಂಚಾರಕೆ

21 Apr, 2018

ಬೆಳಕು – ಬೆರಗು
ಐಕಾನ್‍ಗಳಾಚೆಗೆ...

‘ಬಸವನೆಂದರೆ ಪಾಪ ದೆಸೆಗಟ್ಟಿ ಓಡುವುದಯ್ಯಾ’ ಎಂಬ ಮಾತಿದೆ. ಬಹುಶಃ ತಳ ಸಮುದಾಯಗಳು ತಮ್ಮನ್ನು ಕೇಡು ಆಚರಣೆಗಳಿಂದ ದೂರ ಇಟ್ಟುಕೊಳ್ಳಲು ಭಾವನಾತ್ಮಕವಾಗಿ ಹೀಗೆ ಬಸವನೊಂದಿಗೆ ಬೆಸೆದುಕೊಂಡಿವೆ. ...

18 Apr, 2018

ಬೆಳಕು – ಬೆರಗು
ಬುದ್ಧನ ನಂತರ ಭೂಮಿಗೆ ಬಿದ್ದ ಬೆಳಕು

ಸತ್ಯ-ಅಹಿಂಸೆ ಬೋಧಿಸಿದ ಗಾಂಧೀಜಿ ಮತ್ತು ಸಮಾನತೆಗಾಗಿ ಹಂಬಲಿಸಿದ ಅಂಬೇಡ್ಕರರಿಗಿಂತ 700 ವರ್ಷಗಳ ಹಿಂದೆಯೇ ಮಾದಾರ ಚೆನ್ನಯ್ಯನ ಮಗ ನಾನು ಎಂದು ಹೇಳಿ, ಅಂತರ್ಜಾತೀಯ ವಿವಾಹವನ್ನೂ...

18 Apr, 2018