ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲೆಮಾರಿಯಾದ ಪ್ರಿಯಾಂಕ

Last Updated 9 ಸೆಪ್ಟೆಂಬರ್ 2017, 5:04 IST
ಅಕ್ಷರ ಗಾತ್ರ

‘ಸೋ.. ನಾವು ಇಲ್ಲಿಂದ ಎಲ್ಲಿ ಹೋಗುತ್ತೇವೆ... ಟ್ರಾವೆಲ್ಲರ್‌ #ನೋಮ್ಯಾಡ್‌ ಗರ್ಲ್‌’ ಹೀಗೆಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿಕೊಂಡಿದ್ದಾರೆ ಪ್ರಿಯಾಂಕಾ ಚೋಪ್ರಾ. ವಿಮಾನದ ಕಿಟಕಿ ಹೊರಗೆ ನೋಡುತ್ತಿರುವ ಅವರು ಯಾವುದೋ ಯೋಚನೆಯಲ್ಲಿ ತಲ್ಲೀನವಾಗಿರುವಂತಿದೆ ಈ ಚಿತ್ರ.

ಪ್ರಿಯಾಂಕಾ ಹಾಲಿವುಡ್‌ ಗಲ್ಲಿಗೆ ಕಾಲಿರಿಸಿದ್ದಾಗಿನಿಂದ ಸಂಚಾರಿಯಾಗಿಬಿಟ್ಟಿದ್ದಾರೆ. ಪ್ರಪಂಚದಾದ್ಯಂತ ಪಯಣ ಮಾಡುತ್ತಲೇ ಇರುತ್ತಾರೆ. ಈ ಕಾರಣಕ್ಕೆ ‘ಅಲೆಮಾರಿ ಹುಡುಗಿ’ ಎಂದು ಅವರು ತಮ್ಮನ್ನು ಕರೆದುಕೊಂಡಿದ್ದಾರೆ.

ಸದ್ಯ ಹಾಲಿವುಡ್‌ನ ‘ಇಸ್‌ ನಾಟ್‌ ಇಟ್‌ ರೊಮ್ಯಾಂಟಿಕ್‌’ ಸಿನಿಮಾದ ಚಿತ್ರೀಕರಣದಲ್ಲಿ ಪ್ರಿಯಾಂಕಾ ಬ್ಯುಸಿಯಾಗಿದ್ದಾರೆ. ಟೊರಾಂಟೊದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ತಾಯಿ ಮಧು ಚೋಪ್ರಾ ಜೊತೆ ಅವರು ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT