ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಿನ ಜೋಳಕ್ಕೆ ಹಳದಿ ರೋಗ

Last Updated 9 ಸೆಪ್ಟೆಂಬರ್ 2017, 5:17 IST
ಅಕ್ಷರ ಗಾತ್ರ

ಗುತ್ತಲ: ಪಟ್ಟಣ ಹಾಗೂ ಸುತ್ತಲಿನ ಪ್ರದೇಶದಲ್ಲಿ ಗೋವಿನ ಜೋಳದ ಬೆಳೆಯು ಹಳದಿ ಬಣ್ಣಕ್ಕೆ ತಿರುಗುತ್ತಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ. ‘ಬಿತ್ತನೆ ಮಾಡಿದ ಗೋವಿನ ಜೋಳದ ಬೆಳೆ ಉತ್ತಮವಾಗಿದೆ. ಆದರೆ, 25–30 ದಿನಗಳ ಸಸಿಗಳ ಹಳದಿ ಬಣ್ಣಕ್ಕೆ ತಿರುತ್ತಿವೆ.

ಒಂದು ಎಕರೆ ಜಮಿನಿನಲ್ಲಿ 50ರಿಂದ 100 ಇಂಥ ಸಸಿಗಳು ಸಿಗುತ್ತಿವೆ. ನಿತ್ಯವೂ ಇಂಥ ಸಸಿಗಳು ಹೆಚ್ಚಿತ್ತಿವೆ. ಔಷಧಿ ಸಿಂಪಡಿಸಿದರೂ ಅದು ಹತೋಟಿಗೆ ಬರುತ್ತಿಲ್ಲ’ ಎಂದು ರೈತ ನೀಲಪ್ಪ ಅಸಹಾಯಕತೆ ವ್ಯಕ್ತಪಡಿಸಿದರು. ‘ಇದೇ ರೀತಿ ಹಳದಿ ಬಣ್ಣದ ರೋಗ ಮುಂದುವರೆದರೆ ಸಂಪೂರ್ಣ ಬೆಳೆ ನಾಶ ಆಗುವ ಆತಂಕ ಕಾಡುತ್ತಿದೆ’ ಎಂದೂ ಅವರು ಹೇಳಿದರು.

* * 

ಸಾರಜನಕ ಮತ್ತು ಪೋಷ ಕಾಂಶದ ಕೊರತೆ ಯಿಂದ ಗೋವಿನ ಜೋಳದ ಬೆಳೆಗೆ ಹಳದಿ ಬಣ್ಣದ ರೋಗ ತಗು ಲುತ್ತದೆ. ನೀರಿನಲ್ಲಿ ಕರಗುವ 19.19.19 ಗೊಬ್ಬರವನ್ನು ಬೆಳೆಗೆ ಸಿಂಪಡಿಸಬೇಕು. ಯೂರಿಯಾವನ್ನು ಮೇಲು ಗೊಬ್ಬರವಾಗಿ ಹಾಕಬೇಕು.
ಡಿ.ಕೆ.ಕರಿಯಲ್ಲಪ್ಪ
ಸಹಾಯಕ ಕೃಷಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT