ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ನಲ್ಲಿ ‘ಶಿಕ್ಷಕರ ದಿನೋತ್ಸವ’

Last Updated 9 ಸೆಪ್ಟೆಂಬರ್ 2017, 5:49 IST
ಅಕ್ಷರ ಗಾತ್ರ

ವಿಜಯಪುರ: ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರ ‘ಸಿರಿ ಕನ್ನಡ ನುಡಿ ಬಳಗ’ ಮಂಗಳವಾರ ರಾತ್ರಿ ವಿಶಿಷ್ಟವಾಗಿ ಶಿಕ್ಷಕರ ದಿನೋತ್ಸವ ಆಚರಿಸುವ ಮೂಲಕ ನೂತನ ಮೈಲುಗಲ್ಲು ನಿರ್ಮಿಸಿದೆ. ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದ ಆಲೂರು ವೆಂಕಟರಾಯರ ಸ್ಮರಣೆಯ ಜತೆಗೆ ಶಿಕ್ಷಕರ ದಿನಾಚರಣೆ ಅಂಗವಾಗಿ ಸಾಮಾಜಿಕ ಜಾಲತಾಣ ‘ಹೈಕ್‌’ ಬಳಸಿ ಕೊಂಡು, ಸಂಜೆ 7ರಿಂದ ರಾತ್ರಿ 9ರವರೆಗೆ ಬರೋಬ್ಬರಿ ಎರಡು ತಾಸಿನ ಆನ್‌ಲೈನ್‌ ಸಮಾರಂಭವನ್ನು ಯಶಸ್ವಿಯಾಗಿ ನೆರವೇರಿಸಿದೆ.

ತನ್ನ ಬಳಗದ ಸಂಪನ್ಮೂಲ ವ್ಯಕ್ತಿಗಳು, ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಸದಸ್ಯರು, ಬೋಧನಾ ಕ್ಷೇತ್ರ ದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ವಿವಿಧ ಜಿಲ್ಲೆಗಳ 10ಕ್ಕೂ ಹೆಚ್ಚು ಶಿಕ್ಷಕ ರನ್ನು ಉದ್ಘಾಟಕರು, ಮುಖ್ಯ ಅತಿಥಿ ಗಳು, ಸಮಾರಂಭದ ಅಧ್ಯಕ್ಷರು ಎಂದು ನಿಯೋಜಿಸಿಕೊಂಡು, ವೇದಿಕೆ ಕಾರ್ಯ ಕ್ರಮ ನಿರ್ವಹಿಸುವ ಮಾದರಿ ಯಲ್ಲೇ ಆನ್‌ಲೈನ್‌ಲ್ಲಿ ಸಮಾರಂಭ ನಡೆಸಿದೆ.

‘ಸ್ವಾಗತ, ಪರಿಚಯ, ಉದ್ಘಾಟನೆ, ಉದ್ಘಾಟಕರ ಮಾತು, ಉಪನ್ಯಾಸ, ಅತಿಥಿಗಳ ಭಾಷಣ, ಅಧ್ಯಕ್ಷೀಯ ಭಾಷಣ ಸಹ ‘ಹೈಕ್‌’ ಗ್ರೂಪ್‌ನಲ್ಲೇ ಎರಡು ತಾಸು ನಡೆದಿದ್ದು, ಗುಂಪಿನ 900ಕ್ಕೂ ಹೆಚ್ಚು ಸದಸ್ಯರು ಸಕ್ರಿಯವಾಗಿ ಪ್ರತಿ ಹಂತದಲ್ಲೂ ಪ್ರತಿಕ್ರಿಯಿಸಿದರು’ ಎಂದು ಕಾರ್ಯಕ್ರಮದ ಆಯೋಜಕರ ಲ್ಲೊಬ್ಬರಾದ ಬಳ್ಳಾರಿ ಜಿಲ್ಲೆಯ ರೂಪನ ಗುಡಿ ಸರ್ಕಾರಿ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕ ಬಸವರಾಜ ಟಿ.ಎಂ. ಕುರುಬನಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಡಿಯೋ ಲೈವ್‌ ಇರಲಿಲ್ಲವಷ್ಟೇ. ಸಮಾರಂಭದ ಅತಿಥಿಗಳಾಗಿದ್ದ ಎಲ್ಲರ ಆಡಿಯೋ, ಅಕ್ಷರ ರೂಪದ ಸಂದೇಶ ನಮ್ಮ ‘ಹೈಕ್‌’ ಗುಂಪಿನಲ್ಲಿ ಹರಿದಾಡಿತು. ಅತಿಥಿಗಳ ಫೋಟೋ ಸಹ ಅಪ್‌ ಲೋಡ್‌ ಮಾಡಲಾಯಿತು. ಈ ಸಮಾರಂಭಕ್ಕೆ  ಬಳಗದಿಂದ ಅದ್ಭುತ ಪ್ರತಿಕ್ರಿಯೆ’ ದೊರೆತಿದೆ ಎಂದು  ಜಿಲ್ಲೆಯ ಬಸವನ ಬಾಗೇವಾಡಿಯ ಸರ್ಕಾರಿ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕ ಎಸ್.ಎಸ್‌.ಗಡೇದ ಹೇಳಿದರು.

ಬಳಗದ ಕುರಿತು: ‘ರಾಜ್ಯದ ಪ್ರೌಢಶಾಲೆ ಗಳಲ್ಲಿ ಏಕರೂಪದಲ್ಲಿ ಕನ್ನಡ ಬೋಧನೆ ನಡೆಯಲಿ ಎಂಬ ಆಶಯದಿಂದ ಸ್ಥಾಪಿಸಿದ ಗುಂಪಿದು. 2014ರ ಜೂನ್‌ ನಲ್ಲಿ ‘ಕನ್ನಡ ಭಾಷಾ ಶಿಕ್ಷಕರ ಬಳಗ’ ಎಂಬ ಹೆಸರಿನಿಂದ ಅಸ್ಥಿತ್ವಕ್ಕೆ ಬಂದಿತು. ಸಂಸ್ಕೃತ ಪದ ಸೇರ್ಪಡೆಯಾಗಿವೆ ಎಂಬ ಕಾರಣದಿಂದ ಕೆಲ ದಿನಗಳಲ್ಲೇ ‘ಸಿರಿ ಕನ್ನಡ ನುಡಿ ಬಳಗ’ ಎಂದು ಪುನರ್‌ ನಾಮಕಾರಣ ಮಾಡಲಾಯಿತು.

ಸರ್ಕಾರಿ–ಖಾಸಗಿ ಪ್ರೌಢಶಾಲೆಗಳ ಆಯ್ದ ಕನ್ನಡ ಭಾಷಾ ಶಿಕ್ಷಕರು ಈ ಬಳಗದ ಸದಸ್ಯರು. ನಿತ್ಯವೂ ಗುಂಪಿನ ಸದಸ್ಯರು ಶಾಲೆಗಳಲ್ಲಿ ಬೋಧನೆಯ ಸಂದರ್ಭ ತಾವು ಎದುರಿಸುವ ಸಮಸ್ಯೆ ಗಳ ಕುರಿತಂತೆ ಸಾಮಾಜಿಕ ಜಾಲತಾಣ ‘ಹೈಕ್‌’ನಲ್ಲಿ ಪ್ರಸ್ತಾಪಿಸುತ್ತಾರೆ. ನುರಿತ ಶಿಕ್ಷಕರು, ಸಂಪನ್ಮೂಲ ವ್ಯಕ್ತಿಗಳು ಸಮಸ್ಯೆ ಪರಿಹರಿಸುವ ಯತ್ನ ನಡೆಸುತ್ತಾರೆ.

ಮೂರು ವರ್ಷಗಳಿಂದ ಬಳಗ ಕ್ರಿಯಾಶೀಲವಾಗಿದೆ. ಈಗಾಗಲೇ ತಲಕಾಡು, ವಿಜಯಪುರ–ಬಾಗಲಕೋಟೆ ಜಿಲ್ಲೆಗಳಲ್ಲಿ ಕ್ಷೇತ್ರಾಧ್ಯಯನ ನಡೆಸಿ, ಶಾಲ ಗಳಲ್ಲಿ ಪರಿಣಾಮಕಾರಿಯಾಗಿ ಬೋಧಿಸುತ್ತಿದೆ. 

ವಾರ್ಷಿಕ ಪಾಠ ಯೋಜನೆ, ಬೋಧನಾ ವಿಧಾನ, ಮಾದರಿ ಪ್ರಶ್ನೆಪತ್ರಿಕೆ, ಪಠ್ಯಗಳ ಸಾರಾಂಶ, ವ್ಯಾಕರಣಾಂಶಗಳ ಪರಿಚಯವನ್ನು ನಿಯಮಿತವಾಗಿ ‘ಹೈಕ್‌’ನಲ್ಲೇ ಹಂಚಿ ಕೊಳ್ಳಲಾಗುತ್ತಿದೆ’ ಎಂದು ಬಳಗದ ಸಂಸ್ಥಾಪಕ ಧಾರವಾಡ ಜಿಲ್ಲೆಯ ಕಲಘಟಕಿ ತಾಲ್ಲೂಕಿನ ದೇವಿಕೊಪ್ಪ ಗ್ರಾಮದ ಸರ್ಕಾರಿ ಪ್ರೌಢಶಾಲಾ ಶಿಕ್ಷಕ ರಂಗನಾಥ ಎನ್‌.ವಾಲ್ಮೀಕಿ ವಿವರಿಸಿದರು.

ಅಂಕಿ–ಅಂಶ
1000 ಸದಸ್ಯರ ‘ಸಿರಿ ಕನ್ನಡ ನುಡಿ ಬಳಗ’

900 ಸದಸ್ಯರು ದಿನಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡವರು

10 ಕ್ಕೂ ಹೆಚ್ಚು ಶಿಕ್ಷಕರು ಅತಿಥಿಗಳಾಗಿ ಭಾಗಿ

2 ತಾಸು ಆನ್‌ಲೈನ್‌ನಲ್ಲಿ ನಡೆದ ಶಿಕ್ಷಕರ ದಿನೋತ್ಸವ

* * 

ಸಾಮಾಜಿಕ ಜಾಲತಾಣಗಳ ಸದ್ಬಳಕೆಯ ಪರಿಕಲ್ಪನೆಯನ್ನು  ಮೂಡಿಸಲು ಹಮ್ಮಿಕೊಂಡಿದ್ದ ವಿನೂತನ ಸಮಾರಂಭಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಿತು
ಬಸವರಾಜ ಟಿ.ಎಂ
ಪ್ರೌಢಶಾಲಾ ಶಿಕ್ಷಕ, ಕುರುಬನಹಳ್ಳಿ, ಬಳ್ಳಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT