ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ವರ್ಷಧಾರೆಗೆ ಮೈದುಂಬಿದ ಹಳ್ಳ

ಝಳಕಿಯಲ್ಲಿ 15.2, ಚಡಚಣದಲ್ಲಿ 12.7 ಸೆಂ.ಮೀ. ಸುರಿದ ಮಳೆ
Last Updated 9 ಸೆಪ್ಟೆಂಬರ್ 2017, 5:51 IST
ಅಕ್ಷರ ಗಾತ್ರ

ವಿಜಯಪುರ: ಗುರುವಾರ ರಾತ್ರಿ ಜಿಲ್ಲೆಯ ಎಲ್ಲೆಡೆ ವರ್ಷಧಾರೆಯಾಗಿದ್ದು, ಹಳ್ಳಗಳು ಮೈದುಂಬಿ ಹರಿಯಲಾರಂಭಿಸಿವೆ. ಜಮೀನುಗಳ ಒಡ್ಡುಗಳಲ್ಲಿ ನೀರು ನಿಂತಿದೆ.
ಇಂಡಿ ತಾಲ್ಲೂಕಿನಲ್ಲಿ ಸುರಿದ ರಭಸದ ಮಳೆಗೆ ಅಪಾರ ಹಾನಿಯಾಗಿದೆ. 2009ರ ಬಳಿಕ ಒಮ್ಮೆಯೂ ಮೈದುಂಬಿ ಹರಿಯದ ಚಡಚಣ ಪಟ್ಟಣ ಸನಿಹದ ಬೋರಿ ಹಳ್ಳ ಹರಿದು ಭೀಮಾ ನದಿ ಸೇರಿದೆ.

ಚಡಚಣ ಪಟ್ಟಣದ ಕೆರೆಗೆ ಎರಡು ದಶಕಗಳ ಬಳಿಕ ನೀರು ಹರಿದು ಬಂದಿದ್ದು, ಪಟ್ಟಣದ ನಿವಾಸಿಗಳಲ್ಲಿ ಅಪಾರ ಹರ್ಷ ಮೂಡಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ರೇವತಗಾಂವ, ಜೀರಂಕಲಗಿ, ಬರಡೋಲ ಹಳ್ಳಗಳು ಸಹ ಒಂದೇ ರಾತ್ರಿಯ ಮಳೆಗೆ ಮೈದುಂಬಿ ಬೋರ್ಗರೆಯಲಾರಂಭಿಸಿವೆ.

ಇಂಡಿ ತಾಲ್ಲೂಕಿನ ಝಳಕಿ ಆಜುಬಾಜು 15.2 ಸೆಂ.ಮೀ, ಚಡಚಣ ಪಟ್ಟಣ ವ್ಯಾಪ್ತಿಯಲ್ಲಿ 12.7 ಸೆಂ.ಮೀ. ಮಳೆ ಗುರುವಾರ ರಾತ್ರಿ ಸುರಿದಿದೆ. ಇಂಡಿ ಪಟ್ಟಣದಲ್ಲಿ 3.72, ನಾದ ಬಿ.ಕೆ. 2.02, ಅಗರಖೇಡ 3.73, ಹೊರ್ತಿಯಲ್ಲಿ 7.6 ಸೆಂ.ಮೀ. ಮಳೆ ಸುರಿದಿದ್ದರೆ, ಹಲಸಂಗಿ ಯಲ್ಲಿ 4.40 ಸೆಂ.ಮೀ. ಮಳೆ ಸುರಿದಿದೆ.

ಬಸವನಬಾಗೇವಾಡಿ ಪಟ್ಟಣದಲ್ಲಿ 1.27, ಮನಗೂಳಿ ಪಟ್ಟಣ ವ್ಯಾಪ್ತಿಯಲ್ಲಿ 4.52, ಆಲಮಟ್ಟಿ–5.66, ಹೂವಿನ ಹಿಪ್ಪರಗಿ–2.22, ಅರೇಶಂಕರ– 2.04, ಮಟ್ಟಿಹಾಳ– 3.14, ವಿಜಯಪುರದಲ್ಲಿ 3.04, ನಾಗಠಾಣ 2.62, ಭೂತನಾಳ 4.88, ಹಿಟ್ನಳ್ಳಿ 6.14, ತಿಕೋಟಾ 1.12, ಮಮದಾ ಪುರ 9.8, ಕುಮಟಗಿ 3.62, ಕನ್ನೂರ 6.20, ಬಬಲೇಶ್ವರ ಭಾಗದಲ್ಲಿ 2.44 ಸೆಂ.ಮೀ. ವರ್ಷಧಾರೆಯಾಗಿದೆ.

ಮುದ್ದೇಬಿಹಾಳ ಪಟ್ಟಣದಲ್ಲಿ 4.75, ನಾಲತವಾಡ ಪಟ್ಟಣದಲ್ಲಿ 1.52, ತಾಳಿಕೋಟೆಯಲ್ಲಿ 2.00, ಢವಳಗಿಯಲ್ಲಿ 4.02, ಸಿಂದಗಿ ಪಟ್ಟಣದಲ್ಲಿ 2.36, ಆಲಮೇಲದಲ್ಲಿ 6.56, ಸಾಸಾಬಾಳದಲ್ಲಿ 3.80, ರಾಮನಹಳ್ಳಿಯಲ್ಲಿ 3.02, ಕಡ್ಲೇ ವಾಡದಲ್ಲಿ 1.22, ದೇವರ ಹಿಪ್ಪರಗಿ ಪಟ್ಟಣದಲ್ಲಿ 2.56, ಕೊಂಡಗೂಳಿ ಭಾಗ ದಲ್ಲಿ 2.34 ಸೆಂ.ಮೀ. ಮಳೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT