ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ಸಾವಿರ ಸಸಿ ಪೋಷಣೆಗೆ ನಿರ್ಧಾರ

Last Updated 9 ಸೆಪ್ಟೆಂಬರ್ 2017, 6:25 IST
ಅಕ್ಷರ ಗಾತ್ರ

ಚಿಕ್ಕೋಡಿ: ‘ಶ್ರೀ ಯರ್ರಿಸ್ವಾಮಿ ಚಾರಿಟಬಲ್‌ ಫೌಂಡೇಷನ್‌ ಮೂಲಕ ಪಟ್ಟಣ ಸೇರಿದಂತೆ ತಾಲ್ಲೂಕಿನ ಶಾಲೆ–ಕಾಲೇಜುಗಳು ಮತ್ತು ದೇವಸ್ಥಾನಗಳ ಆವರಣಗಳಲ್ಲಿ 25 ಸಾವಿರ ಸಸಿಗಳನ್ನು ನೆಟ್ಟು ಅವುಗಳ ಪಾಲನೆ–ಪೋಷಣೆ ಮಾಡಲಾಗುವುದು’ ಎಂದು ಅಧ್ಯಕ್ಷ ವಿಜಯಭಾಸ್ಕರಗೌಡ ಇಟಗೋಣಿ ಹೇಳಿದರು.

ತಾಲ್ಲೂಕಿನ ಹಿರೇಕೋಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಟಾಂಗ್ಯಾನ ಕೋಡಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶುಕ್ರವಾರ ಸಸಿಗಳನ್ನು ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಯರ್ರಿಸ್ವಾಮಿ ಚಾರಿಟಬಲ್‌ ಫೌಂಡೇಷನ್‌ ಕಳೆದ 11 ವಾರಗಳಿಂದ ಪ್ರತಿ ಭಾನುವಾರ ‘ಸ್ವಚ್ಛ ಚಿಕ್ಕೋಡಿ–ಸುಂದರ ಚಿಕ್ಕೋಡಿ’ ಧ್ಯೇಯವಾಕ್ಯ ದೊಂದಿಗೆ ವಿವಿಧ ಬಡಾವಣೆಗಳಲ್ಲಿ ಸ್ವಚ್ಛತಾ ಕಾರ್ಯ ಕೈಕೊಂಡಿದ್ದು, ಜೊತೆಗೆ ಸುಮಾರು 500 ಸಸಿಗಳನ್ನು ನೆಡಲಾಗಿದೆ. ಕೇವಲ ಸಸಿಗಳನ್ನು ನೆಡುವುದು ಮಾತ್ರವಲ್ಲ, ಅವುಗಳಿಗೆ ತಂತಿ ಬೇಲಿ ಅಳವಡಿಸಿ ಕಾಲಕಾಲಕ್ಕೆ ನೀರು, ಗೊಬ್ಬರ ನೀಡಿ ಪಾಲನೆ ಪೋಷಣೆಯನ್ನೂ ಮಾಡಲಾಗುತ್ತಿದೆ. ಸಾರ್ವಜನಿಕರೂ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸುತ್ತಿದ್ದಾರೆ’ ಎಂದರು.

ಗ್ರಾಮ ಪಂಚಾಯ್ತಿ ಸದಸ್ಯ ವಿಕ್ರಂ ಬನಗೆ ಅವರು ಯರ್ರಿಸ್ವಾಮಿ ಚಾರಿಟೇಬಲ್‌ ಫೌಂಡೇಷನ್‌ ಕಾರ್ಯ ಚಟುವಟಿಕೆಗಳನ್ನು ಪ್ರಶಂಸಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಸುನೀಲ ಮಾಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮ ಪಂಚಾಯ್ತಿ ಸದಸ್ಯ ಶೀತಲ ಬಾಳಿಕಾಯಿ, ಅನಿತಾ ಬನಗೆ, ಸಿಆರ್‌ಸಿ ಸಂಪನ್ಮೂಲ ವ್ಯಕ್ತಿ ಆರ್‌.ವಿ.ಪೋತದಾರ, ಕರೆಪ್ಪ ದಿನ್ನಿಮನಿ, ಬಸವರಾಜ ಯಮಗರ, ಎಸ್‌.ಕೆ.ಪೋಳ, ಫೌಂಡೇ ಷನ್‌ ಸಿಇಒ ವಿನಯ ಹೊರಟ್ಟಿ ಇದ್ದರು. ಮುಖ್ಯ ಶಿಕ್ಷಕ ಸಿ.ಎಸ್‌.ಹತ್ತಿ ಸ್ವಾಗತಿಸಿದರು. ಸಿ.ಬಿ.ಅರಭಾಂವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಮಣ್ಣಗೋಳ ನಿರೂಪಿಸಿದರು. ಎಸ್‌.ಎಂ.ತರಾಳ ವಂದಿಸಿದರು.

* * 

ಫೌಂಡೇಷನ್‌ನಿಂದ ಮುಂದಿನ ತಿಂಗಳು 10 ಜನ ಶಿಕ್ಷಕರನ್ನು ಗುರುತಿಸಿ ಅವರಿಗೆ ಯರ್ರಿಸ್ವಾಮಿ ಶ್ರೀ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಗುವುದು
ವಿಜಯಕುಮಾರ ಇಟಗೋಣಿ
ಫೌಂಡೇಷನ್ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT