ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ ರಸ್ತೆಯಲ್ಲಿ ಸಂಚಾರ ಯಾತನಾಮಯ

Last Updated 9 ಸೆಪ್ಟೆಂಬರ್ 2017, 6:27 IST
ಅಕ್ಷರ ಗಾತ್ರ

ಶಿರಸಿ: ಕುಮಟಾ– ತಡಸ್ ರಾಜ್ಯ ಹೆದ್ದಾರಿಯಲ್ಲಿ ತಾಲ್ಲೂಕಿನ ಇಸಳೂರಿ ನಿಂದ ಶಿರಸಿ ನಗರದವರೆಗೆ ರಸ್ತೆ ಸಂಪೂರ್ಣ ಹಾಳಾಗಿದ್ದರೂ ಲೋಕೋ ಪಯೋಗಿ ಇಲಾಖೆ ದುರಸ್ತಿಗೊಳಿಸಿಲ್ಲ ಎಂದು ಆರೋಪಿಸಿ ಸಾರ್ವಜನಿಕರು ಬಿಜೆಪಿ ಗ್ರಾಮೀಣ ಘಟಕದ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಇಸಳೂರಿನಲ್ಲಿ ರಸ್ತೆ ನಡುವೆ ಸೃಷ್ಟಿಯಾಗಿರುವ ದೊಡ್ಡ ಹೊಂಡದಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟಿಸಿದ ಸಾರ್ವಜನಿಕರು, ಅರ್ಧ ತಾಸು ರಸ್ತೆ ತಡೆ ನಡೆಸಿದರು. ಹುಬ್ಬಳ್ಳಿ ರಸ್ತೆಯ ದುರವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಚಂದ್ರು ದೇವಾಡಿಗ ಮಾತನಾಡಿ, ‘ರಸ್ತೆ ಹಾಳಾಗಿರುವ ಕುರಿತು ಅಧಿಕಾರಿಗಳು, ಸರ್ಕಾರದ ಗಮನಸಳೆಯಲು ಸಾಂಕೇತಿಕ ವಾಗಿ ಪ್ರತಿಭಟಿಸಿದ್ದೇವೆ. 15 ದಿನಗ ಳೊಳಗೆ ರಸ್ತೆ ದುರಸ್ತಿ ಮಾಡದಿದ್ದಲ್ಲಿ ರಸ್ತೆ ನಡುವೆ ಕುಳಿತು ಪ್ರತಿಭಟಿಸಲಾಗುವುದು’ ಎಂದರು.

ಲೋಕೋಪಯೋಗಿ ಇಲಾಖೆಯ ಎಇಇ ಸ್ಥಳಕ್ಕೆ ಬರಬೇಕು ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು. ಶಿರಸಿ ಕಚೇರಿಯಲ್ಲಿದ್ದ ಎಇಇ ಸತೀಶ ಜಹಗೀರದಾರ್ ಮತ್ತು ಎಂಜಿನಿಯರ್ ಎಂ.ಎನ್. ಹೆಗಡೆ ಸ್ಥಳಕ್ಕೆ ಬಂದರು.

‘₹ 10 ಲಕ್ಷದಿಂದ ₹ 50  ಲಕ್ಷವರೆಗಿನ ಕಾಮಗಾರಿಗಳನ್ನು ಗುತ್ತಿಗೆ­ಯನ್ನು ಎಸ್.ಸಿ ಹಾಗೂ ಎಸ್.ಟಿ. ಸಮು­ದಾಯಗಳಿಗೆ ನಿಗದಿಪಡಿಸಲಾಗಿದೆ. ಸರ್ಕಾರ ಇದರ ನಿಯಮಾವಳಿ ರೂಪಿಸು­ತ್ತಿರುವುದರಿಂದ ಈ ಬಜೆಟ್‌ ಒಳಗಿನ ಕಾಮಗಾರಿ ಗುತ್ತಿಗೆ ನೀಡಲು ಆಗುತ್ತಿಲ್ಲ’ ಎಂದು ಜಹಗೀರದಾರ್ ಅವರು ಸರ್ಕಾರದ ಆದೇಶದ ಪ್ರತಿಯನ್ನು ಜನರಿಗೆ ತೋರಿಸಿದರು. ‘ಸರ್ಕಾರ ಹಲವಾರು ಆದೇಶಗಳನ್ನು ಮಾಡುತ್ತದೆ. ಆದರೆ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿರುವ ರಸ್ತೆಯನ್ನು ಶೀಘ್ರ ದುರಸ್ತಿಗೊಳಿಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

‘ತಾಲ್ಲೂಕಿನ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳು ಕೆಲವೆಡೆ ತೀರಾ ಹಾಳಾಗಿದ್ದು ಸಂಚಾರ ಯೋಗ್ಯವಾಗಿಲ್ಲ. ತಡಸ್– ಕುಮಟಾ ರಸ್ತೆ ನಿರ್ವಹಣೆ­ಯಿ­ಲ್ಲದೇ ಸಂಪೂರ್ಣ ಹಾಳಾಗಿದೆ. 

ಪ್ರತಿ­ವರ್ಷ ಏಪ್ರಿಲ್,-ಮೇ ತಿಂಗಳಲ್ಲಿ ನಿರ್ವ­ಹಣಾ ಗುತ್ತಿಗೆ ನೀಡಬೇಕೆಂಬ ನಿಯಮವಿದೆ. ಆದರೆ ಸೆಪ್ಟೆಂಬರ್ ತಿಂಗಳು ಬಂದರೂ ಗುತ್ತಿಗೆ ನೀಡ­ಲಾಗಿಲ್ಲ. ರಸ್ತೆ ನಿರ್ವಹಣೆಗೂ ಹಣ­ವಿಲ್ಲದೇ ಸರ್ಕಾರ ದಿವಾಳಿಯಾಗಿದೆ­ಯೆಂಬ ಜನರಿಗೆ ಕಾಡುವ ಮೊದಲು ರಾಜ್ಯ ಹೆದ್ದಾರಿ ದುರಸ್ತಿಗೊಳಿಸಬೇಕು’ ಎಂದು ಮನವಿಯಲ್ಲಿ ವಿನಂತಿಸಲಾಗಿದೆ.

ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಆರ್.ವಿ. ಹೆಗಡೆ ಚಿಪಗಿ, ಪ್ರಮುಖರಾದ ಜಿ.ಕೆ. ಹೆಗಡೆ ಬಿಸಲಕೊಪ್ಪ, ಶಿವರಾಮ ಭಟ್, ಪ್ರಸನ್ನ ಹೆಗಡೆ, ಪ್ರಶಾಂತ ಹೆಗಡೆ, ನಾಗರಾಜ ಶೆಟ್ಟಿ ಇದ್ದರು.

* * 

ಜಿಲ್ಲಾ ಉಸ್ತುವಾರಿ ಸಚಿವರು ಹಳಿಯಾಳಕ್ಕೆ ಮಾತ್ರ ಸಚಿವರಲ್ಲ, ಅವರ ಜಿಲ್ಲೆಯ ಎಲ್ಲ ಕಡೆ ಗಮನಹರಿಸಬೇಕು. ಹುಬ್ಬಳ್ಳಿ ರಸ್ತೆ ಮರುಡಾಂಬರೀಕರಣ ಆಗಬೇಕು
ನಿರ್ಮಲಾ ಶೆಟ್ಟಿ
ಇಸಳೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT