ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ವಾಸಕೋಶದ ಸೂಕ್ಷ್ಮ ರಂದ್ರ ಶಸ್ತ್ರಚಿಕಿತ್ಸೆ–ಮಂಗಳೂರಿನಲ್ಲಿ ಪ್ರಥಮ

Last Updated 9 ಸೆಪ್ಟೆಂಬರ್ 2017, 9:18 IST
ಅಕ್ಷರ ಗಾತ್ರ

ಮಂಗಳೂರು: ಇಲ್ಲಿನ ಎ. ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ 48 ವರ್ಷದ ಮಹಿಳೆಗೆ ಶ್ವಾಸಕೋಶದ ಸೂಕ್ಷ್ಮ ರಂದ್ರ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಮಹಿಳೆ ಕಫ ಮತ್ತು ಜ್ವರದಿಂದ 6 ತಿಂಗಳಿಂದ ಬಳಲುತ್ತಿದ್ದರು.

ಶ್ವಾಸಕೋಶ ತಜ್ಞರಾದ ಡಾಕ್ಟರ್ ವಿಷ್ಣು ಶರ್ಮರಿಂದ ಪರಿಶೀಲನೆಗೆ ಒಳ ಪಟ್ಟಿದ್ದು, ಆಕೆಯ ಶ್ವಾಸಕೋಶದ ಎಡಭಾಗದಲ್ಲಿ ಗೆಡ್ಡೆ ಇರುವುದನ್ನು ಪತ್ತೆಹಚ್ಚಿ ಅದನ್ನು ಶಸ್ತ್ರಚಿಕಿತ್ಸೆಯಿಂದ ತೆಗೆಯಬೇಕೆಂದು ತಿಳಿಸಿದ್ದರು. ಮಂಗಳೂರಿನಲ್ಲಿ ಮೊತ್ತ ಮೊದಲ ಬಾರಿಗೆ ವಿಡಿಯೋ ನೆರವಿನ ಥೊರಾಕೊಸ್ಕೋಪಿಯಿಂದ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು.

ಆ ಶಸ್ತ್ರಚಿಕಿತ್ಸೆಯಲ್ಲಿ 10 ಎಂಎಂ ಮತ್ತು 5 ಎಂಎಂ ನ ಎರಡು ಛೇದನಗಳನ್ನು ಮಾಡುವುದರ ಮೂಲಕ ಸಂಪೂರ್ಣ ಗೆಡ್ಡೆಯನ್ನು ತೆಗೆಯಲಾಯಿತು. ಎ. ಜೆ. ಆಸ್ಪತ್ರೆಯ ವೈದ್ಯರು ಅಪರೂಪದ ಮತ್ತು ಈ ಪ್ರಾಂತ್ಯದ ಮೊದಲ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ ಮತ್ತು ರೋಗಿಯು 2 ದಿನಗಳಲ್ಲಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ತೆರಳಿದ್ದಾರೆ.

ಈ ಅಪರೂಪದ ಶಸ್ತ್ರಚಿಕಿತ್ಸೆಯನ್ನು ಕಾರ್ಡಿಯೋ ಥೋರಸಿಕ್ ಹಾಗೂ ವ್ಯಾಸ್ಕ್ಯುಲರ್ ತಜ್ಞರಾದ ಡಾಕ್ಟರ್ ಸಂಭ್ರಮ್ ಶೆಟ್ಟಿ ಅವರು ನಿರ್ವಹಿಸಿದ್ದು, ಡಾಕ್ಟರ್ ಜಯಶಂಕರ್ ಮಾರ್ಲಾ, ಕಾರ್ಡಿಯೋ ಥೋರಸಿಕ್ ತಜ್ಞ, ಡಾಕ್ಟರ್ ಗೌರವ್ ಶೆಟ್ಟಿ, ಮಕ್ಕಳ ಹೃದ್ರೋಗ ಶಸ್ತ್ರಚಿಕಿತ್ಸಾ ತಜ್ಞ ಮತ್ತು ಹೃದ್ರೋಗ ಅರಿವಳಿಕೆ ತಜ್ಞ ಡಾಕ್ಟರ್ ಗುರುರಾಜ್ ತಂತ್ರಿ ಸಹಯೋಗ ನೀಡಿದರು. ಸಂಭ್ರಮ್‌ ಶೆಟ್ಟಿ ಅವರನ್ನು 7829333430  ಇಲ್ಲಿ ಸಂಪರ್ಕಿಸಬಹುದು ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT