ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಚ್ಚಬೋರನಹಟ್ಟಿ, ಆರ್‌.ಜೆ.ಹಳ್ಳಿಯಲ್ಲಿ ಬಿರುಸಿನ ಮಳೆ

Last Updated 9 ಸೆಪ್ಟೆಂಬರ್ 2017, 9:34 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯ ವಿವಿಧೆಡೆ ಶುಕ್ರವಾರ ಮಧ್ಯಾಹ್ನ ಹದ ಮಳೆಯಾದ ವರದಿಯಾಗಿದೆ. ನಗರ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಉತ್ತಮ ಮಳೆಯಾಗಿದೆ. ಜಿ.ಆರ್. ಹಳ್ಳಿ, ಗೋನೂರು ಗ್ರಾಮ ಪಂಚಾಯ್ತಿಯ ಬಚ್ಚಬೋರನಹಟ್ಟಿ ಸುತ್ತ ಬಿರುಸಿನ ಮಳೆಯಾಗಿದೆ. ತೋಟಗ, ಹೊಲಗಳಲ್ಲಿ ನೀರು ಹರಿಯುತ್ತಿದೆ. ಬೆಳಗಟ್ಟ, ಸಾಸಲಹಟ್ಟಿ, ಕಲ್ಲೇನಹಳ್ಳಿಯಲ್ಲೂ ಉತ್ತಮ ಮಳೆಯಾದ ವರದಿಯಾಗಿದೆ.

ಇದೇ ವೇಳೆ ಚಳ್ಳಕೆರೆ ತಾಲ್ಲೂಕಿನ ಗಡಿ ಭಾಗ ರಾಮಜೋಗಿಹಳ್ಳಿಯಿಂದ ದಂಡಿನಕುರುಬರಹಟ್ಟಿವರೆಗೆ ಉತ್ತಮ ಮಳೆಯಾಗಿದೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ ತುಂತುರು ಮಳೆಯಾಗಿದೆ. ಚಿಕ್ಕಜಾಜೂರು ಸಮೀಪದ ಕಡೂರು ಗ್ರಾಮದಲ್ಲಿ ಸಂಜೆ ಸುರಿದ ಮಳೆಗೆ ರೈತ ನಾಗರಾಜ ಅವರ ಜಮೀನಿನಲ್ಲಿ ರಾಗಿ ಪೈರು ಕೊಚ್ಚಿಕೊಂಡು ಹೋಗಿದೆ.

ಗುಂಜಿಗನೂರು ಸುತ್ತಮುತ್ತ ಉತ್ತಮ ಮಳೆಯಾಗಿದೆ. ಸಿರಿಗೆರೆ ಸಮೀಪದ ಹಲವುದರ ಮತ್ತು ಹಳೇರಂಗಾಪುರದಲ್ಲಿ ಸಾಧಾರಣ ಮಳೆಯಾಗಿದ. ಚಿಕ್ಕಜಾಜೂರಿನ ಸಮೀಪದ ಮುತ್ತಗದೂರು, ತರಳಬಾಳು ನಗರ, ಸಾಸಲು ಗ್ರಾಮಗಳಲ್ಲಿ ಬಿರುಸಿನ ಮಳೆಯಾಗಿದೆ. ಅಂದನೂರು, ಗ್ಯಾರೆಹಳ್ಳಿ, ಬಂಡೆಬೊಮ್ಮನಹಳ್ಳಿ, ಲಿಂಗದಹಳ್ಳೀ, ಹಿರಯೂರು, ಬಿ.ದುರ್ಗ, ದಂಡಿಗನಹಳ್ಳೀಯಲ್ಲಿ ಸಾಧಾರಣ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT