ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣಿಗಳು ನುಡಿದಂತೆ ನಡೆಯಲಿ

Last Updated 10 ಸೆಪ್ಟೆಂಬರ್ 2017, 4:19 IST
ಅಕ್ಷರ ಗಾತ್ರ

ನರಗುಂದ: ರಾಜಕಾರಣಿಗಳು ನಡಿದಂತೆ ನಡೆಯಬೇಕು, ಅವರ  ಅಂತರಂಗ, ಬಹಿರಂಗ ಒಂದೇ ಆಗಿರಬೇಕು ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಹೇಳಿದರು.
ಪಟ್ಟಣದ ಬಸವೇಶ್ವರ ಸಮುದಾಯ ಭವನದಲ್ಲಿ ಶನಿವಾರ ನಡೆದ ಮಾಜಿ ಶಾಸಕ ದಿ.ಎಸ್‌.ಎಫ್‌.ಪಾಟೀಲರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜಕಾರಣಕ್ಕೆ ತನ್ನದೇ ಆದ ಮೌಲ್ಯ ಇದೆ. ಅದನ್ನು ಉಳಿಸಿಕೊಂಡು ಹೋಗು ವುದು ಬಹಳ ಮುಖ್ಯವಾಗಿದೆ. ಉತ್ತಮ ನಾಯಕತ್ವದ ಗುಣಗಳಿದ್ದಾಗ ಎಲ್ಲರೂ ಮೆಚ್ಚುವ ರಾಜಕಾರಣಿಗಳಾಗಲು ಸಾಧ್ಯ. ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಂತೆ ಬದುಕಿದ ವರು ಎಸ್‌.ಎಫ್‌.ಪಾಟೀಲ. ಇವರ ಸೇವೆ ಅಪಾರ. ತಮ್ಮ ಕ್ಷೇತ್ರದ ಸಮಸ್ಯೆಗಳು ನಿವಾರಣೆ ಆಗುವವರೆಗೆ ಅವರು ಬಿಡು ತ್ತಿರಲಿಲ್ಲ ಎಂದು ಮೊಯಿಲಿ ಹೇಳಿದರು.

ಮಹದಾಯಿ ಯೋಜನೆ ಜಾರಿಗೆ ಬದ್ಧ: ಹಲವು ದಶಕಗಳಿಂದ ಈ ಭಾಗದಲ್ಲಿ ಕುಡಿಯುವ ನೀರು ಹಾಗೂ ನೀರಾವರಿ ಸಮಸ್ಯೆ ಇದೆ. ಇದಕ್ಕೆ ಪಕ್ಷಾತೀತವಾಗಿ ಪರಿಹಾರ ಕಂಡುಕೊಳ್ಳಬೇಕು ಎಂದರು.

ಮಹದಾಯಿ ಯೋಜನೆ ಜಾರಿಗೆ ಎಲ್ಲ ಪಕ್ಷಗಳು ಸಕಾರಾತ್ಮಕವಾಗಿ ಚಿಂತನೆ ನಡೆಸಬೇಕು.  ಇದಕ್ಕೆ ಕಾಂಗ್ರೆಸ್‌ ಪಕ್ಷವೂ ಬದ್ಧವಾಗಿದೆ. ಇದರ ಬಗ್ಗೆ ಮುಖ್ಯಮಂತ್ರಿ ಜತೆ ಮಾತ ನಾಡಿ, ಈ ಭಾಗದ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಕಾವೇರಿ, ಕೃಷ್ಣಾ, ತೆಲಗು ಗಂಗಾದಂಥಹ ಯೋಜನೆಗಳಿಗೆ  ಪರಿ ಹಾರ ಕಂಡುಕೊಳ್ಳುವ ಪ್ರಯತ್ನ ನಡೆ ದಿತ್ತು. ಅದೇ ನಿಟ್ಟಿನಲ್ಲಿ ಈ ಭಾಗದ ನೀರಿನ ಸಮಸ್ಯೆ ಪರಿಹರಿಸಲು ಪ್ರಯತ್ನ ಮಾಡುವೆ ಎಂದು ತಿಳಿಸಿದರು.
ದೂರವಾಣಿ ಮೂಲಕ ಶುಭ ಕೋರಿದ ಕುಮಾರಸ್ವಾಮಿ: ಸಮಾರಂಭಕ್ಕೆ ಬರ ಬೇಕಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ದೂರವಾಣಿ ಮೂಲಕ ಸಭೆಗೆ ಶುಭ ಕೋರಿದರು.

ಶಾಸಕ ಬಿ.ಆರ್‌.ಯಾವಗಲ್‌ ಮಾತ ನಾಡಿ, ಎಸ್‌.ಎಫ್‌.ಪಾಟೀಲ ತಮ್ಮ ವಿರುದ್ಧ ಜಯ ಸಾಧಿಸಿದ ನೆನೆಪು ಮೆಲಕು ಹಾಕಿ ಅವರ ವ್ಯಕ್ತಿತ್ವನ್ನು ಪ್ರಶಂಸಿಸಿದರು.
ಮಾಜಿ ಶಾಸಕ ಸಿ.ಸಿ.ಪಾಟೀಲ ಮಾತ ನಾಡಿ, ಎಸ್‌.ಎಫ್‌.ಪಾಟೀಲ ಸಹಕಾರ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಜೀವನ ಸರ್ವರಿಗೂ   ಮಾದರಿ ಎಂದು ಹೇಳಿದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ  ಹಿರೇಮಠದ ಸಿದ್ದಲಿಂಗ ಶ್ರೀ,  ವಿರಕ್ತ ಮಠದ ಶಿವಕುಮಾರ ಶ್ರೀ, ಪತ್ರಿವನ ಮಠದ ಸಿದ್ಧವೀರ ಶಿವಯೋಗಿ  ಶ್ರೀ,  ಮಾತನಾಡಿದರು.
ಶಾಸಕರಾದ ಎನ್‌.ಎಚ್‌.ಕೋನರಡ್ಡಿ,  ಜಿ.ಎಸ್‌.ಪಾಟೀಲ, ವೀರಣ್ಣ ಮತ್ತಿಕಟ್ಟಿ, ಕೆ.ಎಸ್‌.ಪಾಟೀಲ ಮಾತನಾಡಿದರು. ಎ.ಆರ್‌.ಪಾಟೀಲ, ಎಸ್‌.ಎಸ್‌. ಪಾಟೀಲ, ಗಿರೀಶ ಪಾಟೀಲ ಇದ್ದರು.

ಸಮಾರಂಭದಲ್ಲಿ ನಿವೃತ್ತ ಶಿಕ್ಷಕರನ್ನು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ರೈತ ಹೋರಾಟಗಾರರನ್ನು ಸನ್ಮಾನಿಸಲಾ ಯಿತು. ಡಾ.ಸಿ.ಕೆ.ಪಾಟೀಲ ಸ್ವಾಗತಿಸಿ ದರು. ಶ್ರೀನಿವಾಸ ಇನಾಮದಾರವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ನಾಗರಾಜ ನಡುವಿನಮಠ  ನಿರೂಪಿಸಿ, ಚಂದ್ರಗೌಡ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT