ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರುಗಳ ಅಂತ್ಯಕ್ರಿಯೆಗೆ ನೆರವು

Last Updated 10 ಸೆಪ್ಟೆಂಬರ್ 2017, 5:08 IST
ಅಕ್ಷರ ಗಾತ್ರ

ಬೈಲಹೊಂಗಲದ ಗುತ್ತಿಗೆದಾರ ರೊಬ್ಬರು ಪಶು, ಪಕ್ಷಿಗಳು ಮೃತಪಟ್ಟರೆ ಅವುಗಳ ಶವ ಸಂಸ್ಕಾರಕ್ಕೆ ಉಚಿತವಾಗಿ ಜೆಸಿಬಿ ನೀಡಿ ನೆರವಾಗುವ ಮೂಲಕ ಸಾರ್ವಜನಿಕರ ಗಮನ ಸೆಳೆದಿದ್ದಾರೆ. ಬೈಲಹೊಂಗಲದ ಶಿಕ್ಷಕರ ಚಾಳ ನಿವಾಸಿ, ಕ್ಲಾಸ್ 1 ಗುತ್ತಿಗೆದಾರ ಮಂಜುನಾಥ ಹಿರೇಮಠ ಅವರು ಕಳೆದ 11 ವರ್ಷಗಳಿಂದ ಈ ಕಾರ್ಯ ಮಾಡುತ್ತಿದ್ದಾರೆ.

ಯಾರಾದರೂ ರೈತರು ತಮ್ಮ ಹಸು ಸಾವಿಗೀಡಾಗಿದೆ. ಜೆಸಿಬಿ ಕಳುಹಿಸಿ ಎಂದು ಕೇಳಿದರೆ ಸಾಕು ಖುದ್ದು ಕಾಳಜಿ ವಹಿಸಿ ಜೆಸಿಬಿಯಿಂದ ಗುಂಡಿ ತೋಡಿಸಿ ಕಳೇಬರದ ನೆರವಾಗುತ್ತಾರೆ.

ಬಡ ರೈತರೊಬ್ಬರು ತಮ್ಮ ಹಸು ಮೃತಪಟ್ಟಾಗ ಅಂತ್ಯಸಂಸ್ಕಾರಕ್ಕೆ ಹಣವಿಲ್ಲದೇ ಚಡಪಡಿಸುತ್ತಿದ್ದಾಗ ಮಂಜುನಾಥ ಅವರು ಅವರ ನೆರವಿಗೆ ಬಂದು ಶವ ಸಂಸ್ಕಾರಕ್ಕೆ ಸಹಕರಿಸಿದರು. ಮಂಜುನಾಥ ಅವರ ಈ ಸಮಾಜ ಸೇವೆಯ ಬಗ್ಗೆ ಸಾರ್ವಜನಿಕರು ಮುಕ್ತ ಕಂಠದಿಂದ ಪ್ರಶಂಸೆ ವ್ಯಕ್ತಪಡಿಸುತ್ತಾರೆ.

ಹಿನ್ನೆಲೆ: ಮಂಜುನಾಥ ಅವರು ಜಾನುವಾರುಗಳ ಶವ ಸಂಸ್ಕಾರಕ್ಕೆ ಜೆಸಿಬಿ ನೀಡಲು ಒಂದು ಕಾರಣ ಇದೆ. ‘2007ರಲ್ಲಿ ಜೆಸಿಬಿ ಪಡೆದಾಗ ಮೊದಲು ಕೆಲಸ ಮಾಡಿದ್ದೇ ಹಸುವಿನ ಅಂತ್ಯಕ್ರಿಯೆಗೆ ಗುಂಡಿ ತೋಡಿದ್ದು. ಅದನ್ನೇ ಮುನ್ನಡೆಸಿಕೊಂಡು ಹೋಗು ತ್ತಿರುವೆ’ ಎಂದು ಮಂಜುನಾಥ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT