ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ತಾಲ್ಲೂಕು: ಜನರಲ್ಲಿ ಸಂತಸದ ಹೊನಲು

Last Updated 10 ಸೆಪ್ಟೆಂಬರ್ 2017, 5:41 IST
ಅಕ್ಷರ ಗಾತ್ರ

ಕಂಪ್ಲಿ: ನೂತನ ತಾಲ್ಲೂಕುಗಳಿಗೆ ರಾಜ್ಯ ಸರ್ಕಾರ ಅಧಿಕೃತವಾಗಿ ಅಂಕಿತ ಹಾಕಿರು ವುದರಿಂದ ತಾಲ್ಲೂಕು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಕಂಪ್ಲಿ ಜನವರಿ–2018ಕ್ಕೆ ನೂತನ ತಾಲ್ಲೂಕು ಆಗಿ ಅಸ್ತಿತ್ವಕ್ಕೆ ಬರಲಿದ್ದು, ಈ ಭಾಗದ ಜನರಲ್ಲಿ ಸಂಭ್ರಮ ಮನೆ ಮಾಡಿದೆ.

ಕಂಪ್ಲಿ ತಾಲ್ಲೂಕು ಕೇಂದ್ರವನ್ನಾಗಿ ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಘೋಷಿಸಿದ್ದರೂ ಅನುಷ್ಠಾನ ಗೊಂಡಿರಲಿಲ್ಲ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 49 ತಾಲ್ಲೂಕು ಗಳನ್ನು 2017ರ ಬಜೆಟ್‌ನಲ್ಲಿ ಘೋಷಿಸಿದರು.

ಬಜೆಟ್‌ ನಂತರ 2018ರ ಜನವರಿಯಿಂದ ಅನುಷ್ಠಾನಗೊಳಿಸುವ ಕುರಿತು ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಈ ಭಾಗದ ಜನರ ಮೂರೂವರೆ ದಶಕಗಳ ಹೋರಾಟದ ಕನಸು ನನಸಾದಂತಾಗಿದೆ.

ಕಂದಾಯ ಇಲಾಖೆಯಿಂದ ಹೊಸ ತಾಲ್ಲೂಕು ಕಚೇರಿ ತೆರೆಯಲು ಮತ್ತು ಇತರೆ ಇಲಾಖೆಗಳ ತಾಲ್ಲೂಕು ಮಟ್ಟದ ಕಚೇರಿಗಳನ್ನು ಆರ್ಥಿಕ ಇಲಾಖೆಯ ಸಹಮತದೊಂದಿಗೆ ಹಂತ ಹಂತವಾಗಿ ತೆರೆಯಲು ಇದೇ 6ರಂದು ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಶಾಸಕ ಟಿ.ಎಚ್‌. ಸುರೇಶ್‌ಬಾಬು ಸೇರಿದಂತೆ ಕಂಪ್ಲಿ ತಾಲ್ಲೂಕು ಹೋರಾಟ ಸಮಿತಿಯ ಅರವಿ ಬಸವನಗೌಡ, ಕೆ.ಎಂ. ಹೇಮಯ್ಯಸ್ವಾಮಿ ಮತ್ತು ಪದಾಧಿ ಕಾರಿಗಳು,  ಪ್ರಮುಖರು, ವಿವಿಧ ಸಂಘ ಸಂಸ್ಥೆಯವರು ಸರ್ಕಾರದ ಈ ಆದೇಶ ಕುರಿತು ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಮೊದಲು ಕಂಪ್ಲಿ ತಾಲ್ಲೂಕಿಗೆ ಸಂಡೂರು ತಾಲ್ಲೂಕಿನ ದರೋಜಿ ಮತ್ತು ಹೊಸಪೇಟೆ ತಾಲ್ಲೂಕಿನ ಬುಕ್ಕಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿ ಸೇರ್ಪಡೆಗೆ ಆ ಭಾಗದ ಜನತೆ ಇಚ್ಛಿಸಿದ್ದರು. ಆದರೆ ಬುಕ್ಕಸಾಗರ ವ್ಯಾಪ್ತಿ ಹೊಸಪೇಟೆ ತಾಲ್ಲೂಕಿನಲ್ಲೇ ಮುಂದುವರಿಸಲು ನಿರ್ಧ ರಿಸಲಾಗಿದೆ ಎನ್ನಲಾಗಿದೆ.

ಹೊಸ ದರೋಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಮಾತ್ರ ಕೆಲ ದಿನಗಳಿಂದ ಪರ ವಿರೋಧ ಹೇಳಿಕೆಗಳು ವ್ಯಕ್ತವಾಗುತ್ತಿವೆ. ಇನ್ನು ನೆಲ್ಲೂಡಿ ಗ್ರಾ.ಪಂ ಸೇರ್ಪಡೆ ಕುರಿತಂತೆ ಅತಂತ್ರ ಸ್ಥಿತಿಯಲ್ಲಿದೆ. ಸಿರುಗುಪ್ಪ ತಾಲ್ಲೂಕಿನ ಮಣ್ಣೂರು–ಸೂಗೂರು ಕಂಪ್ಲಿಗೆ ಸೇರಲು ಈಗಾಗಲೇ ಆ ಭಾಗದ ಜನರು ಇಚ್ಛಿಸಿದ್ದಾರೆ.

ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯ
‘ಆ.29ರಂದು ಹೊಸ ದರೋಜಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆದ ಸರ್ವ ಸದ ಸ್ಯರ ಸಾಮಾನ್ಯ ಸಭೆಯಲ್ಲಿ ನೂತನ ಕಂಪ್ಲಿ ತಾಲ್ಲೂಕಿಗೆ ದರೋಜಿಯನ್ನು ಸೇರಿಸುವಂತೆ ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ಗ್ರಾ.ಪಂ ಉಪಾಧ್ಯಕ್ಷ ಎಂ.ಎಸ್‌. ಗುರು ಮೂರ್ತಿ ತಿಳಿಸಿದರು.

‘ ಈ ಠರಾವು ಅನ್ನು ರದ್ದು ಮಾಡಿ ದರೋಜಿಯನ್ನು ಸಂಡೂರು ತಾಲ್ಲೂಕಿನಲ್ಲಿಯೇ ಮುಂದುವರಿ ಸಬೇಕು’ ಎಂದು ಶಾಸಕ ಇ. ತುಕಾರಾಂ ನೇತೃತ್ವ ದಲ್ಲಿ ಜಿ.ಪಂ ಸದಸ್ಯ ವಿ. ಜನಾ ರ್ದನ ಅವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಗ್ರಾ.ಪಂ ಉಪಾಧ್ಯಕ್ಷ ಗುರು ಮೂರ್ತಿ ಗ್ರಾಮದ ಮುಖಂಡರು, ಪ್ರಗತಿ ಪರ ಸಂಘಟನೆ ಪದಾಧಿ ಕಾರಿಗಳು ವಿಧಾನ ಪರಿಷತ್‌ ಸದಸ್ಯ ಕೆ.ಸಿ. ಕೊಂಡಯ್ಯ ನೇತೃತ್ವದ ತಂಡ ಜಿಲ್ಲಾಧಿಕಾರಿ ಗಳನ್ನು ಭೇಟಿ ಮಾಡಿ ‘ದರೋಜಿ ಯನ್ನು ಕಂಪ್ಲಿ ತಾಲ್ಲೂಕಿಗೆ ಸೇರಿಸ ಬೇಕು’ ಎಂದು ಹೇಳಿದರು.

* * 

ದರೋಜಿಯಿಂದ ಸಂಡೂರು 45 ಕಿ.ಮೀ ಇದೆ. ಕಂಪ್ಲಿಯಿಂದ ಕೇವಲ 20 ಕಿ.ಮೀ ಅಂತರದಲ್ಲಿದೆ. ಆಡಳಿತಾತ್ಮಕ ದೃಷ್ಟಿಯಿಂದ ಕಂಪ್ಲಿ ನೂತನ ತಾಲ್ಲೂಕಿಗೆ ಸೇರಿಸಬೇಕು ನಾಗರಾಜ ಭೋವಿ,
ಜಿಲ್ಲಾ ಅಧ್ಯಕ್ಷ, ದಲಿತ ಪ್ಯಾಂಥರ್‍್ಸ್‌ ಆಫ್‌ ಇಂಡಿಯಾ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT