ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರೆಗೆ ಹೂವು ಅರಳುತ್ತಿವೆ

Last Updated 10 ಸೆಪ್ಟೆಂಬರ್ 2017, 7:16 IST
ಅಕ್ಷರ ಗಾತ್ರ

ಮೈಸೂರು: ಕವಿ ಚೆನ್ನವೀರ ಕಣವಿ ಅವರು ‘ಹೊವು ಹೊರಳವವು ಸೂರ್ಯನೆಡೆಗೆ’ ಎಂದ ಹಾಗೆ ಅರಮನೆಯ ಆವರಣದಲ್ಲಿ ದಸರಾಗೆ ಹೂವುಗಳು ಅರಳುತ್ತಿವೆ.
35 ವಿವಿಧ ಬಗೆಯ 5 ಸಾವಿರ ಹೂವಿನ ಗಿಡಗಳು ನಳನಳಿಸಲಿವೆ.

ಇವುಗಳೊಂದಿಗೆ ಅರಮನೆ ಮಂಡಳಿಯ ಕಚೇರಿ ಎದುರು ವಿವಿಧ ಬಗೆಯ 800 ಗುಲಾಬಿ ಹೂವುಗಳು ಆಕರ್ಷಿಸಲಿವೆ. ಸದ್ಯ ತೋಟಗಾರಿಕೆ ಇಲಾಖೆಯ ನರ್ಸರಿ ವಿಭಾಗದಲ್ಲಿ ಹೂವಿನ ಗಿಡಗಳ ಆರೈಕೆ ನಡೆಯುತ್ತಿದೆ. ದಸರಾ ಮಹೋತ್ಸವ ಶುರುವಾಗುವ ಸೆ. 21ರಿಂದ ಅರಮನೆ ಮಂಡಳಿ ಕಚೇರಿ ಮುಂದೆ, ಅರಮನೆ ಎದುರು ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯ ಅಲಂಕಾರಕ್ಕೆ ಬಳಸಲಾಗುತ್ತದೆ.

ಅರಮನೆ ಆವರಣದಲ್ಲಿರುವ ವಿದ್ಯುತ್‌ ಸರಬರಾಜು ಘಟಕ, ಭದ್ರತಾ ಕಚೇರಿ, ರಾಜವಂಶಸ್ಥರ ಅರಮನೆ ಮುಂದೆ ಹಾಗೂ ಕುಪ್ಪಣ್ಣ ಉದ್ಯಾನದಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನದಲ್ಲೂ ಇಲ್ಲಿನ ಹೂವುಗಳು ಕಂಗೊಳಿಸಲಿವೆ. ಜತೆಗೆ, ಜಯಮಾರ್ತಾಂಡ, ವರಾಹ, ಬಲರಾಮ, ಕರಿಕಲ್ಲುತೊಟ್ಟಿ ದ್ವಾರಗಳ ಬಳಿಯೂ ಇಡಲಾಗುತ್ತದೆ.

ಇದರೊಂದಿಗೆ ಬಾವುಟ ಉದ್ಯಾನದ ಬತೇರಿನಲ್ಲಿ ಮೇರಿಗೋಲ್ಡ್ ಹೂವುಗಳು ಹಾಗೂ ಹೊನಗೊನೆಸೊಪ್ಪಿನ ಅಲಂಕಾರದ ‘ನಾಡಹಬ್ಬಕ್ಕೆ ಸ್ವಾಗತ–2017 ದಸರಾ’ ಎನ್ನುವುದು ಗಮನ ಸೆಳೆಯಲಿದೆ.

‘ದಸರಾ ಮಹೋತ್ಸವಕ್ಕೆ ನಾಲ್ಕು ತಿಂಗಳ ಮೊದಲೇ ಹೂವಿನ ಗಿಡಗಳನ್ನು ಬೆಳೆಸಲು ಸಿದ್ಧತೆ ಮಾಡಿಕೊಳ್ಳುತ್ತೇವೆ. ಮಣ್ಣು, ಗೊಬ್ಬರ, ಮರಳು ಮಿಶ್ರಣ ಮಾಡಿ ಕುಂಡಗಳಲ್ಲಿ ಹಾಕಿ ಬೆಳೆಸುತ್ತೇವೆ’ ಎನ್ನುತ್ತಾರೆ ತೋಟಗಾರಿಕೆ ವಿಭಾಗದ ಅಧಿಕಾರಿಗಳು.

ಹಗಲು ಹೊತ್ತಿನಲ್ಲಿ ಅರಮನೆ ನೋಡುವ ಪ್ರವಾಸಿಗರಿಗೆ ಹೂವುಗಳು ಕಣ್ಣು ತಂಪಾಗಿಸುತ್ತವೆ. ಜತೆಗೆ, ರಾತ್ರಿ ಹೊತ್ತು ದೀಪಗಳ ಬೆಳಕಿನಲ್ಲಿ ಬೇರೆ ಬೇರೆ ರೀತಿಯಾಗಿ ಹೊಳೆಯುವುದರಿಂದ ಪ್ರವಾಸಿಗರು ಖುಷಿಪಡುತ್ತಾರೆ. ಡಿಸೆಂಬರ್‌ನಲ್ಲಿ ಅರಮನೆ ಆವರಣದಲ್ಲಿ ಆರಂಭವಾಗುವ ಪುಷ್ಪ ಪ್ರದರ್ಶನಕ್ಕೆ ಹೂವುಗಳನ್ನು ಬೆಳೆಸುವ ಕೆಲಸ ದಸರಾ ನಂತರ ಆರಂಭವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT