ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧು, ಗೋಪಿ ಮತ್ತು ಸೈನಾ..

Last Updated 10 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬ್ಯಾಡ್ಮಿಂಟನ್‌ ಲೋಕದಲ್ಲಿ ಹರಿಯಾಣದ ಸೈನಾ ನೆಹ್ವಾಲ್‌ ಅಚ್ಚಳಿಯದ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ. ಈ ಕ್ರೀಡೆಯ ಶಕ್ತಿಕೇಂದ್ರಗಳೆಂದೆ ಗುರುತಿಸಿಕೊಂಡಿರುವ ಚೀನಾ, ಜಪಾನ್‌, ಮಲೇಷ್ಯಾ, ಡೆನ್ಮಾರ್ಕ್‌ ಮತ್ತು ಕೊರಿಯಾದ ಸ್ಪರ್ಧಿಗಳ ಸವಾಲನ್ನು ಮೀರಿ ನಿಲ್ಲುವ ಸಾಮರ್ಥ್ಯ ಭಾರತದ ಸ್ಪರ್ಧಿಗಳಲ್ಲೂ ಇದೆ ಎಂಬುದನ್ನು ಜಗಜ್ಜಾಹೀರು ಮಾಡಿದ ಕೀರ್ತಿ ಸೈನಾಗೆ ಸಲ್ಲುತ್ತದೆ.

ಜೂನಿಯರ್‌ ಹಂತದಿಂದಲೂ ಅನನ್ಯ ಆಟ ಆಡುತ್ತಾ ಸಾಗಿರುವ ಅವರು ಒಲಿಂಪಿಕ್ಸ್‌, ಆಲ್‌ ಇಂಗ್ಲೆಂಡ್‌ ಮತ್ತು ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಪದಕಗಳನ್ನು ಗೆದ್ದು ಭಾರತದ ಬ್ಯಾಡ್ಮಿಂಟನ್‌ನಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದ್ದಾರೆ.

ಆಂಧ್ರಪ್ರದೇಶದ ಹೈದರಾಬಾದ್‌ನಲ್ಲಿರುವ ಗೋಪಿಚಂದ್‌ ಅಕಾಡೆಮಿಯಲ್ಲಿ ಆಟದ ಪಟ್ಟುಗಳನ್ನು ಕಲಿತ ಸೈನಾ, ಹಲವು ದಾಖಲೆಗಳ ಒಡತಿಯಾಗಿ ಮಿಂಚಿದ್ದರು. ಯಶಸ್ಸಿನ ಉತ್ತುಂಗದಲ್ಲಿದ್ದಾಗ ರಾಷ್ಟ್ರೀಯ ಕೋಚ್‌ ಗೋಪಿಚಂದ್‌ ಅವರೊಂದಿಗೆ ಭಿನ್ನಾಭಿಪ್ರಾಯದಿಂದಾಗಿ ಅಕಾಡೆಮಿ ತೊರೆದ ಅವರು ಬೆಂಗಳೂರಿನಲ್ಲಿ ನೆಲೆಸಿರುವ ಯು.ವಿಮಲ್‌ ಕುಮಾರ್‌ ಅವರ ಬಳಿ ತರಬೇತಿಗೆ ಸೇರಿದರು.

ವಿಮಲ್‌ ಅವರ ಮಾರ್ಗದರ್ಶನ ಸಿಕ್ಕ ನಂತರ ಸೈನಾ ಮುಟ್ಟಿದ್ದೆಲ್ಲಾ ಚಿನ್ನವಾಗಿತ್ತು. ವಿಶ್ವ ಚಾಂಪಿಯನ್‌ಷಿಪ್‌ ಮತ್ತು ಆಲ್‌ ಇಂಗ್ಲೆಂಡ್‌ ಓಪನ್‌ ಟೂರ್ನಿಗಳಲ್ಲಿ ಬೆಳ್ಳಿ ಗೆದ್ದ ಹಿರಿಮೆ ತಮ್ಮದಾಗಿಸಿಕೊಂಡಿದ್ದ ಅವರು ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿ ಹೊಸ ಭಾಷ್ಯ ಬರೆದಿದ್ದರು. ಹೋದ ತಿಂಗಳು ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿಗೆ ಕೊರಳೊಡ್ಡಿದ್ದರು.

ಹೀಗೆ ಸಾಧನೆಯ ಒಂದೊಂದೆ ಮೆಟ್ಟಿಲುಗಳನ್ನು ಏರುತ್ತಿದ್ದ ಅವರು ಮತ್ತೆ ಗೋಪಿಚಂದ್‌ ಅಕಾಡೆಮಿಗೆ ಮರಳುತ್ತಿರುವುದಾಗಿ ಇತ್ತೀಚೆಗೆ ಟ್ವೀಟ್‌ ಮಾಡಿದ್ದರು. ಗೋಪಿಚಂದ್‌ ಮತ್ತು ವಿಮಲ್‌ ಅವರ ಬಳಿ ಚರ್ಚಿಸಿಯೇ ಈ ತೀರ್ಮಾನಕ್ಕೆ ಬಂದಿದ್ದಾಗಿಯೂ ಸ್ಪಷ್ಟಪಡಿಸಿದ್ದರು.

ಸೈನಾ ಅವರ ನಿರ್ಧಾರದ ಹಿಂದೆ ಬಲವಾದ ಕಾರಣವೂ ಇತ್ತು. ಭಾರತ ಬ್ಯಾಡ್ಮಿಂಟನ್‌ ಸಂಸ್ಥೆ (ಬಿಎಐ), ಈ ವರ್ಷದ ಆರಂಭದಲ್ಲಿ ಇಂಡೊನೇಷ್ಯಾದ ಮುಲ್ಯೊ ಹೊಂಡೊಯೊ ಅವರನ್ನು ಸಿಂಗಲ್ಸ್‌ ವಿಭಾಗದ ಕೋಚ್‌ ಆಗಿ ನೇಮಿಸಿತ್ತು. ಅವರ ಮಾರ್ಗದರ್ಶನದಲ್ಲಿ ತರಬೇತುಗೊಂಡಿದ್ದ ಸಿಂಧು, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದಿದ್ದರು, ಶ್ರೀಕಾಂತ್ ಮತ್ತು ಸಾಯಿ ಪ್ರಣೀತ್‌ ಅವರು ಹಲವು ಟೂರ್ನಿಗಳಲ್ಲಿ ಪ್ರಶಸ್ತಿ ಎತ್ತಿಹಿಡಿದಿದ್ದರು.

ಮುಲ್ಯೊ ಅವರು ಗೋಪಿಚಂದ್‌ ಅಕಾಡೆಮಿಯೊಂದಿಗೂ ಒಪ್ಪಂದ ಮಾಡಿಕೊಂಡಿದ್ದಾರೆ. ಅವರ ಮಾರ್ಗದರ್ಶನ ಪಡೆಯಲು ಸೈನಾ ಕೂಡ ಉತ್ಸುಕರಾಗಿದ್ದು, ಇದಕ್ಕಾಗಿ ಅಕಾಡೆಮಿಗೆ ಮರಳುವುದು ಅನಿವಾರ್ಯ ಎಂಬ ಸತ್ಯ ಅವರಿಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿಯೇ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂಬ ಮಾತುಗಳೂ ಕೇಳಿ ಬಂದಿವೆ.

*


ವಿಮಲ್‌ ಕುಮಾರ್‌ ಮಾರ್ಗದರ್ಶನದಲ್ಲಿ ಸೈನಾ ಸಾಧನೆ

*2014, ಜೂನ್‌ 29 ಆಸ್ಟ್ರೇಲಿಯಾ ಸೂ‍ಪರ್‌ ಸೀರಿಸ್‌ನಲ್ಲಿ ಪ್ರಶಸ್ತಿ.
*ಬಿಡಬ್ಲ್ಯುಎಫ್‌ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಬಡ್ತಿ
*ಚೀನಾ ಸೂಪರ್‌ ಸೀರಿಸ್‌ ಪ್ರೀಮಿಯರ್‌ನಲ್ಲಿ ಟ್ರೋಫಿ
*ಊಬರ್‌ ಕಪ್‌ ತಂಡ ವಿಭಾಗದಲ್ಲಿ ಕಂಚು.

2015
*ಇಂಡಿಯಾ ಓಪನ್‌ ಗ್ರ್ಯಾನ್‌ ಪ್ರಿ ಗೋಲ್ಡ್‌ ಟೂರ್ನಿಯಲ್ಲಿ ಚಾಂಪಿಯನ್‌.
*ಆಲ್‌ ಇಂಗ್ಲೆಂಡ್‌ ಓಪನ್‌ನಲ್ಲಿ ಬೆಳ್ಳಿಯ ಪದಕ. ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ.
* ಇಂಡಿಯಾ ಓಪನ್‌ ಸೂಪರ್‌ ಸೀರಿಸ್‌ನಲ್ಲಿ ಟ್ರೋಫಿ.
*ಏಪ್ರಿಲ್‌ 2 ರಂದು ಬಿಡಬ್ಲ್ಯುಎಫ್‌ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಬಡ್ತಿ.
*ಆಗಸ್ಟ್ 16, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದ ಹಿರಿಮೆ. ಈ ಸಾಧನೆ ಮಾಡಿದ ಮೊದಲ ಆಟಗಾರ್ತಿ.

2016
ಏಷ್ಯಾ ಚಾಂಪಿಯನ್‌ಷಿಪ್‌ನಲ್ಲಿ ಕಂಚು.
*ಆಸ್ಟ್ರೇಲಿಯಾ ಸೂಪರ್‌ ಸೀರಿಸ್‌ನಲ್ಲಿ ಪ್ರಶಸ್ತಿ.

2017
ಮಲೇಷ್ಯಾ ಓಪನ್‌ ಗ್ರ್ಯಾನ್‌ ಪ್ರಿ ಗೋಲ್ಡ್‌ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ.
*ಆಗಸ್ಟ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ
*ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸತತ ಏಳನೇ ಬಾರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆ.

ಗೋಪಿಚಂದ್‌ ಗರಡಿಯಲ್ಲಿ ಸೈನಾ ಸಾಧನೆ
*2008ರ ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ.
*ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ.
*ಚೀನಾ ತೈಪೆ ಓಪನ್‌ನಲ್ಲಿ ಪ್ರಶಸ್ತಿ.

2009
*ಜೂನ್‌ನಲ್ಲಿ ಬಿಡಬ್ಲ್ಯುಎಫ್‌ ಸೂಪರ್‌ ಸೀರಿಸ್‌ನಲ್ಲಿ ಪ್ರಶಸ್ತಿ
*ಇಂಡೊನೇಷ್ಯಾ ಓಪನ್‌ನಲ್ಲಿ ಚಾಂಪಿಯನ್‌.
*ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್ ಫೈನಲ್‌ ಪ್ರವೇಶ.

2010
*ಆಲ್‌ ಇಂಗ್ಲೆಂಡ್‌ ಓಪನ್‌ನಲ್ಲಿ ಸೆಮಿಫೈನಲ್‌ ಪ್ರವೇಶ.
*ಇಂಡಿಯಾ ಓಪನ್‌ ಗ್ರ್ಯಾನ್ ಪ್ರಿ ಗೋಲ್ಡ್‌ ಟೂರ್ನಿಯಲ್ಲಿ ಪ್ರಶಸ್ತಿ.
*ಸಿಂಗಪುರ ಓಪನ್‌ನಲ್ಲಿ ಚಾಂಪಿಯನ್‌.
* ಜೂನ್‌ 24ರಂದು ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನಕ್ಕೆ ಪ್ರಗತಿ.
* ಇಂಡೊನೇಷ್ಯಾ ಓಪನ್‌ ಸೂಪರ್‌ ಸೀರಿಸ್‌ನಲ್ಲಿ  ಪ್ರಶಸ್ತಿ.
*ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನ.
*ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನ.
*ಇಂಡೊನೇಷ್ಯಾ ಸೂಪರ್‌ ಸೀರಿಸ್‌ನಲ್ಲಿ ಪ್ರಶಸ್ತಿ.

2011
* 20 ಮಾರ್ಚ್‌ನಲ್ಲಿ ಸ್ವಿಸ್‌ ಓಪನ್‌ ಗ್ರ್ಯಾನ್‌ ಪ್ರಿ ಗೋಲ್ಡ್‌ ಟೂರ್ನಿಯಲ್ಲಿ ಚಾಂಪಿಯನ್‌.
*ಮಲೇಷ್ಯಾ ಗ್ರ್ಯಾನ್‌ ಪ್ರಿ ಗೋಲ್ಡ್‌ ಟೂರ್ನಿಯಲ್ಲಿ ರನ್ನರ್‌ ಅಪ್‌.
*26 ಜೂನ್‌ನಲ್ಲಿ ಇಂಡೊನೇಷ್ಯಾ ಓಪನ್‌ನಲ್ಲಿ ರನ್ನರ್‌ ಅಪ್‌.
*ಬಿಡಬ್ಲ್ಯುಎಫ್‌ ಸೂಪರ್‌ ಸೀರಿಸ್‌ ಮಾಸ್ಟರ್ಸ್‌ ಫೈನಲ್ಸ್‌ನಲ್ಲಿ ಫೈನಲ್‌ ಪ್ರವೇಶಿಸಿದ ಸಾಧನೆ.

2012–2013
*ಸ್ವಿಸ್‌ ಓಪನ್‌ನಲ್ಲಿ ಟ್ರೋಫಿ.
*ಥಾಯ್ಲೆಂಡ್‌ ಓಪನ್‌ ಗ್ರ್ಯಾನ್‌ ಪ್ರಿ ಗೋಲ್ಡ್‌ನಲ್ಲಿ ಪ್ರಶಸ್ತಿ.
*ಜೂನ್‌ನಲ್ಲಿ ಇಂಡೊನೇಷ್ಯಾ ಓ‍ಪನ್‌ ಸೂ‍ಪರ್‌ ಸರಣಿಯಲ್ಲಿ ಟ್ರೋಫಿ.
*ಆ‌ಗಸ್ಟ್‌ 4ರಂದು ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚು.
*ಅಕ್ಟೋಬರ್‌ 21ರಂದು ಡೆನ್ಮಾರ್ಕ್‌ ಓಪನ್‌ನಲ್ಲಿ ಚೊಚ್ಚಲ ಪ್ರಶಸ್ತಿ.

2014
*ಇಂಡಿಯಾ ಓಪನ್‌ ಗ್ರ್ಯಾನ್‌ ಪ್ರಿ ಗೋಲ್ಡ್‌ ಟೂರ್ನಿಯಲ್ಲಿ ಪ್ರಶಸ್ತಿ.


ಗೋಪಿಚಂದ್‌ ಮಾರ್ಗದರ್ಶನದಲ್ಲಿ ಸಿಂಧು ಸಾಧನೆ
2011

ಏಷ್ಯಾ ಜೂನಿಯರ್‌ ಚಾಂಪಿಯನ್‌ಷಿಪ್‌ನ ಸಿಂಗಲ್ಸ್‌ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಕಂಚು.

2012
*ಜುಲೈ 7 ರಂದು ಏಷ್ಯಾ ಯೂತ್‌ 19 ವರ್ಷದೊಳಗಿನವರ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ.

2013
*ಮಲೇಷ್ಯಾ ಮಾಸ್ಟರ್ಸ್‌ನಲ್ಲಿ ಪ್ರಶಸ್ತಿ.
*ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚು.
*ಮಕಾವ್‌ ಓಪನ್‌ನಲ್ಲಿ ಚಾಂಪಿಯನ್‌.

2014
*ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚು.  ಚಾಂಪಿಯನ್‌ಷಿಪ್‌ನಲ್ಲಿ ಸತತ ಎರಡು ಪದಕ ಗೆದ್ದು ಭಾರತದ ಮೊದಲ ಆಟಗಾರ್ತಿ.
*ಮಕಾವ್‌ ಓಪನ್‌ನಲ್ಲಿ ಪ್ರಶಸ್ತಿ.

2015
*ಮಕಾವ್‌ ಓಪನ್‌ ಗ್ರ್ಯಾನ್‌ ಪ್ರಿ ಗೋಲ್ಡ್‌ ಟೂರ್ನಿಯಲ್ಲಿ ಕಿರೀಟ.

2016
*ಮಲೇಷ್ಯಾ ಮಾಸ್ಟರ್ಸ್‌ ಗ್ರ್ಯಾನ್‌ ಪ್ರಿ ಗೋಲ್ಡ್‌ ಟೂರ್ನಿಯಲ್ಲಿ ಚಾಂಪಿಯನ್‌.
*ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದು ದಾಖಲೆ. ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ.

2017
*ಇಂಡಿಯಾ ಓಪನ್‌ನಲ್ಲಿ ಗರಿ.
ಸೈಯದ್‌ ಮೋದಿ ಇಂಟರ್‌ನ್ಯಾಷನಲ್‌ ಟೂರ್ನಿಯಲ್ಲಿ ಪ್ರಶಸ್ತಿ.
*ಗ್ಲಾಸ್ಗೊದಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಸಾಧನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT