ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾನು ಕುಡಿತ ಬಿಟ್ಟಿದ್ದೇನೆ’

Last Updated 10 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನನಗೀಗ 45 ವರ್ಷ. ಕುಡಿಯುವುದನ್ನು ಬಿಡದಿದ್ದರೆ ನನ್ನ ಸಮಾಧಿಯಾಗುವ ತನಕವೂ ಕುಡಿಯುತ್ತಲೇ ಇರಬೇಕಾಗುತ್ತದೆ. ನಾನು ಕುಡಿತ ಆರಂಭಿಸಿದಾಗ ನನಗೆ ಕೇವಲ ಹದಿನಾರು ವರ್ಷವಷ್ಟೇ. ನಾನು ಬೆಳೆದ ಆಂಗ್ಲೋ ಇಂಡಿಯನ್ ವಾತಾವರಣದಲ್ಲಿ ಮದ್ಯಪಾನ ಮಾಡುವುದು ಸಹಜ ಎನಿಸಿತ್ತು. ಪ್ರತಿ ಭಾನುವಾರವೂ ಕುಡಿಯುತ್ತಿದ್ದೆ.

ವೈನ್‌ನಿಂದ ನನ್ನ ಕುಡಿತದ ಯಾತ್ರೆ ಆರಂಭವಾಗಿತ್ತು. ನನ್ನ ಸಂಜೆಗಳಿಗೆ ಕುಡಿತವೇ ರಂಗು. ಸಿನಿಮಾ ಜಗತ್ತಿನ ಪಾರ್ಟಿಗಳಲ್ಲಿ ಕುಡಿತ ಸಾಮಾನ್ಯ. ಆದರೆ, ಇದೇ ಕುಡಿತದಿಂದಾಗಿ ನನ್ನ ತಂದೆ ತಾಯಿಗಳು ದೂರಾಗಿದ್ದರು. ವಿಚ್ಛೇದನಕ್ಕೆ ದಾರಿ ಮಾಡಿಕೊಟ್ಟಿತ್ತು. ಕೆಲ ವರ್ಷಗಳ ಹಿಂದೆ ಅಪ್ಪ ಮಹೇಶ್ ಭಟ್ ಗಟ್ಟಿ ಮನಸ್ಸು ಮಾಡಿ ಕುಡಿತ ಬಿಟ್ಟುಬಿಟ್ಟರು. ಆದರೆ, ನನಗೆ ಬಿಡಲು ಆಗುತ್ತಿರಲಿಲ್ಲ.

ನನಗಿನ್ನೂ ನೆನಪಿದೆ. ಅಂದು ಡಿಸೆಂಬರ್ 21, 2016. ಕ್ರಿಸ್‌ಮಸ್‌ಗೆ ನಾಲ್ಕು ದಿನಗಳಷ್ಟೇ ಬಾಕಿ ಇದ್ದವು. ಅಪ್ಪನ ಮೊಬೈಲಿನಿಂದ ನನಗೊಂದು ಮೆಸೇಜ್ ಬಂತು. ‘ಐ ಲವ್ ಯೂ ಮಗಳೇ’ ಅಂತ. ನಾನೂ ಅದಕ್ಕೆ ಪ್ರತಿಕ್ರಿಯಿಸಿದೆ. ‘ಐ ಲವ್ ಯು ಟೂ ಪಾಪ್ಸ್. ಜ‌ಗತ್ತಿನಲ್ಲಿ ಪ್ರೀತಿಗಿಂತ ದೊಡ್ಡದು ಯಾವುದೂ ಇಲ್ಲ ಅಪ್ಪಾ’ ಎಂದೆ. ’ನೀನು ನನ್ನನ್ನು ಪ್ರೀತಿಸುತ್ತೀಯಾ ಎಂದಾದರೆ ನಿನ್ನನ್ನು ನೀನೂ ಪ್ರೀತಿಸಿಕೊ. ಏಕೆಂದರೆ ನಾನು ನಿನ್ನೊಳಗಿದ್ದೇನೆ’ ಅಂತ ಅಪ್ಪ ರಿಪ್ಲೈ ಮಾಡಿದರು.

ನನಗೆ ತಕ್ಷಣ ಕುಡಿತ ಬಿಡಬೇಕು ಅನಿಸಿತು. ಅಂದಿನಿಂದ ಇಂದಿನವರೆಗೆ ಮದಿರೆಯ ಸಹವಾಸ ಮಾಡಿಲ್ಲ. ಕುಡಿತ ಬಿಟ್ಟ ಆರಂಭದ ದಿನಗಳು ಕಷ್ಟಕರವಾಗಿದ್ದವು. ಆದರೆ, ದೃಢನಿರ್ಧಾರ ಮತ್ತು ಅಪ್ಪನ ಮೇಲಿನ ಪ್ರೀತಿಯಿಂದ ಕುಡಿಯುವುದನ್ನು ಬಿಟ್ಟೆ.
- ಪೂಜಾ ಭಟ್, ಬಾಲಿವುಡ್ ನಟಿ
(ಸಂಗ್ರಹ: ಮಂಜುಶ್ರೀ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT