ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪುಹಣ ಪತ್ತೆಗೆ ಜಾಲತಾಣದ ಮೇಲೆ ಐ.ಟಿ ಕಣ್ಣು

Last Updated 10 ಸೆಪ್ಟೆಂಬರ್ 2017, 20:28 IST
ಅಕ್ಷರ ಗಾತ್ರ

ನವದೆಹಲಿ: ದುಬಾರಿ ಬೆಲೆ ತೆತ್ತು ಖರೀದಿಸಿದ ಐಷಾರಾಮಿ ಸರಕುಗಳ ಚಿತ್ರಗಳನ್ನು ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರೆ ತೆರಿಗೆ ಅಧಿಕಾರಿಗಳು ನಿಮ್ಮ ಮನೆ ಬಾಗಿಲು ತಟ್ಟುವ ಸಂಭವ ಇದೆ.

ಹೌದು, ವಿಲಾಸಿ ಕಾರು ಅಥವಾ ದುಬಾರಿ ಬೆಲೆಯ ವಾಚು ಖರೀದಿಸಿದ್ದನ್ನು ಫೇಸ್‌ಬುಕ್‌ ಅಥವಾ ಇನ್‌ಸ್ಟಾ ಗ್ರಾಂನಲ್ಲಿ ಪೋಸ್ಟ್‌ ಮಾಡಿದರೆ ಅದರ ಮಾಹಿತಿ ಕೇಳಿಕೊಂಡು ತೆರಿಗೆ ಅಧಿಕಾರಿಗಳು ನಿಮ್ಮ ಮನೆಗೆ ಬರಲಿದ್ದಾರೆ.

ಕಪ್ಪುಹಣ ಪತ್ತೆಗಾಗಿ ತೆರಿಗೆ ಇಲಾಖೆಯು ಸಾಮಾಜಿಕ ಜಾಲತಾಣಗಳ ನೆರವು ಪಡೆಯಲು ನಿರ್ಧರಿಸಿದೆ. ಮುಂದಿನ ತಿಂಗಳಿನಿಂದ ತೆರಿಗೆ ಅಧಿಕಾರಿಗಳು ಈ ಉದ್ದೇಶಕ್ಕೆ ಫೇಸ್‌ ಬುಕ್‌, ಇನ್‌ಸ್ಟಾ ಗ್ರಾಂ ಒಳಗೊಂಡು ಜನಪ್ರಿಯ ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಡಲಿದ್ದಾರೆ.

ದುಬಾರಿ ಬೆಲೆ ತೆತ್ತು ಖರೀದಿಸಿದ ಸರಕುಗಳೊಂದಿಗೆ ಛಾಯಾಚಿತ್ರ ತೆಗೆಸಿಕೊಂಡು ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡುವ ಗೀಳು ಇರುವವರು ಅದಕ್ಕೆ ಸಂಬಂಧಿಸಿದ ಸೂಕ್ತ ದಾಖಲೆಗಳನ್ನೂ ತಮ್ಮ ಬಳಿ ಇಟ್ಟು ಕೊಳ್ಳುವುದು ಇನ್ನು ಮುಂದೆ ಅನಿವಾರ್ಯವಾಗಲಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗಿ ಬರಬಹುದು.

ಪ್ರಾಜೆಕ್ಟ್ ಇನ್‌ಸೈಟ್: ‘ಪ್ರಾಜೆಕ್ಟ್ ಇನ್‌ಸೈಟ್’ ಹೆಸರಿನ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡುವ ಯೋಜನೆ ಜಾರಿಗೆ ತರಲು ಉದ್ದೇಶಿಸಲಾಗಿದೆ. ಇದರಿಂದ ವ್ಯಕ್ತಿಯ ಘೋಷಿತ ಆದಾಯ ಮತ್ತು ಖರ್ಚಿನ ಬಗ್ಗೆ ಇಲಾಖೆಯು ಖಚಿತ ಮಾಹಿತಿ ಪಡೆಯಬಹುದು.  ಇದರಿಂದ ತೆರಿಗೆ ತಪ್ಪಿಸುವ ಪ್ರವೃ
ತ್ತಿಗೆ ಕಡಿವಾಣ ಹಾಕಬಹುದು. ಕಪ್ಪುಹಣದ ಮೂಲವನ್ನೂ ಪತ್ತೆ ಮಾಡಬಹುದಾಗಿದೆ.

ಈ ಯೋಜನೆಗಾಗಿ ತೆರಿಗೆ ಇಲಾಖೆ ಕಳೆದ ವರ್ಷವೇ ಎಲ್‌ಆ್ಯಂಡ್‌ಟಿ ಇನ್ಫೊ ಟೆಕ್‌ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಸದ್ಯ, ಈ ಯೋಜನೆಯನ್ನು ಪರಿಶೀಲನೆಗೆ ಒಳಪಡಿಸಲಾಗಿದೆ. ಮುಂದಿನ ತಿಂಗಳಿನಿಂದ ಜಾರಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೈಯಕ್ತಿಕ ಆದಾಯ ಮತ್ತು ಸಂಪತ್ತಿನ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಕೇಂದ್ರ ಸರ್ಕಾರ ಪ್ಯಾನ್‌ಗೆ ಆಧಾರ್ ಸಂಪರ್ಕಿಸುವುದನ್ನೂ
ಕಡ್ಡಾಯಗೊಳಿಸಿದೆ. ಈ ಮೂಲಕವೂ ಕಪ್ಪುಹಣಕ್ಕೆ ಕಡಿವಾಣ ಬೀಳಲಿದೆ ಎಂದು ಸರ್ಕಾರ ನಿರೀಕ್ಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT