ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗ್ನಲ್ ದೀಪ ಅಳವಡಿಕೆ; ವಾರದಲ್ಲಿ ಕಾರ್ಯಾರಂಭ

Last Updated 11 ಸೆಪ್ಟೆಂಬರ್ 2017, 4:48 IST
ಅಕ್ಷರ ಗಾತ್ರ

ವಿಜಯಪುರ: ನಗರದ ಆಯಕಟ್ಟಿನ ಸ್ಥಳಗಳಲ್ಲಿ ಸಿಗ್ನಲ್‌ ದೀಪ ಅಳವಡಿಸುವ ಕಾಮಗಾರಿಯನ್ನು  ಪಾಲಿಕೆ ಆಡಳಿತ ಕೈಗೊಂಡಿದ್ದು, ವಾರ ದೊಳಗೆ ನಗರದ ಹೃದಯ ಭಾಗ ಗಾಂಧಿಚೌಕ್ ಸೇರಿದಂತೆ, ಸಂಚಾರ ದಟ್ಟಣೆಯ ವಾಟರ್‌ ಟ್ಯಾಂಕ್‌ ಸರ್ಕಲ್‌ ನಲ್ಲಿ ಸಿಗ್ನಲ್‌ ದೀಪ ಕಾರ್ಯಾ ರಂಭಿಸಲಿವೆ.

ಉಳಿದಂತೆ ಬಸವೇಶ್ವರ ವೃತ್ತ, ಕೇಂದ್ರ ಬಸ್ ನಿಲ್ದಾಣ ಸನಿಹದ ವೃತ್ತ, ನಗರ ಹೊರ ವಲಯದ ಸಿಂದಗಿ ಬೈಪಾಸ್‌ನಲ್ಲಿನ ಸಿಗ್ನಲ್‌ ದೀಪಗಳ ಬದ ಲಾವಣೆ, ಆಧುನೀಕರಣ ಕಾಮಗಾರಿಗೂ ಚಾಲನೆ ನೀಡಿದ್ದು, ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣ ಗೊಳ್ಳಲಿದೆ ಎಂದು ಮಹಾನಗರ ಪಾಲಿಕೆ ಆಡಳಿತದ ಮೂಲಗಳು ತಿಳಿಸಿವೆ. ‘ಅಥಣಿ ರಸ್ತೆಯ ಇಟಗಿ ಪೆಟ್ರೋಲ್‌ ಪಂಪ್‌ ಬಳಿ ನೂತನ ಸಿಗ್ನಲ್‌ ದೀಪ ಅಳವಡಿಕೆಗೆ ಅನುಮತಿ ನೀಡಲಾಗಿದೆ. ಇಲ್ಲಿಯೂ ಪಾಲಿಕೆ ಶೀಘ್ರದಲ್ಲೇ ಕಾಮಗಾರಿ ಕೈಗೊಳ್ಳಲಿದೆ.

ಉಳಿದಂತೆ ಇನ್ನೊಂದು ಸಿಗ್ನಲ್‌ ದೀಪ ಅಳವಡಿಸುವ ಪ್ರಸ್ತಾವನೆ ಪಾಲಿಕೆ ಆಡಳಿತದ್ದು. ಇಲಾಖೆಯ ಉನ್ನತ ಅಧಿಕಾರಿಗಳು ಎಲ್ಲಿ ನಿರ್ಮಿಸಿದರೆ ಒಳಿತು ಎಂಬುದರ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಮನಗೂಳಿ ಅಗಸಿ ಬಳಿ, ಸ್ಟೇಷನ್‌ ರಸ್ತೆ, ಬಡಿಕಮಾನ್‌ ಕ್ರಾಸ್‌, ಬಂಜಾರಾ ಕ್ರಾಸ್‌ನಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಿದ್ದು, ಈ ಯಾವುದಾದರೂ ಒಂದು ಸ್ಥಳದಲ್ಲಿ ನೂತನವಾಗಿ ಸಿಗ್ನಲ್‌ ದೀಪ ಅಳ ವಡಿಸಲು ಕ್ರಮ ಕೈಗೊಳ್ಳಲಾ ಗುವುದು’ ಎಂದು ಪೊಲೀಸ್‌ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಸಂತಸ: ‘ಬರೋಬ್ಬರಿ ಮೂರು ವರ್ಷದ ಹಿಂದೆ ನಗರದಲ್ಲಿ ಮಾಸ್ಟರ್‌ ಪ್ಲ್ಯಾನ್‌ ಕಾಮಗಾರಿಗೆ ಚಾಲನೆ ನೀಡಲಾ ರಂಭಿಸುತ್ತಿದ್ದಂತೆ ಒಂದೊಂದೇ ಸಿಗ್ನಲ್‌ ದೀಪ ಕಾರ್ಯಾಚರಿಸುವುದನ್ನು ಸ್ಥಗಿತಗೊಳಿಸಿದವು. ಬಸ್‌ ನಿಲ್ದಾಣ ಸನಿಹದ ಸಿಗ್ನಲ್‌ ಹೊರತುಪಡಿಸಿದರೆ ಉಳಿದ ಸಿಗ್ನಲ್‌ಗಳು ಎರಡು ವರ್ಷದಿಂದ ದೀಪ ಬೆಳಗಿಸಲಿಲ್ಲ. ವಾಹನ ಸವಾರರಿಗೆ ಯಾವುದೇ ಸೂಚನೆ ನೀಡುತ್ತಿರಲಿಲ್ಲ. ಇದು ಸಂಚಾರ ದಟ್ಟಣೆಗೆ ಪ್ರಮುಖ ಕಾರಣವಾಗಿತ್ತು.

ಸಂಚಾರ ಠಾಣೆಯಲ್ಲಿ ಪೊಲೀಸರ ಕೊರತೆಯೂ ಇದರ ಜತೆಗೆ ಸೇರಿದ್ದ ರಿಂದ ಬಹುತೇಕ ಸಿಗ್ನಲ್‌ಗಳು ಮುಕ್ತ ಸಂಚಾರಕ್ಕೆ ತೆರೆದು ಕೊಂಡಿದ್ದವು. ಹಲವು ದಿನಗಳ ಬೇಡಿಕೆಗೆ ಈಗಲಾ ದರೂ ಮಹಾನಗರ ಪಾಲಿಕೆ ಆಡಳಿತ ಅನುಮತಿಯ ಮುದ್ರೆಯೊತ್ತಿದ್ದರಿಂದ ಕಾಮಗಾರಿ ಆರಂಭಗೊಂಡಿದೆ.

ಶೀಘ್ರದಲ್ಲೇ ಶಿಸ್ತಿನ ಸಂಚಾರ ವ್ಯವಸ್ಥೆ ಪುನರಾರಂಭಗೊಳ್ಳುವುದರಿಂದ ನಗರದ ಜನರು, ವಾಹನ ಸವಾರರು, ಪಾದಚಾರಿಗಳು ಇನ್ಮುಂದೆ ನಿರುಮ್ಮಳ ರಾಗಿ ಚಲಿಸಬಹುದು’ ಎಂದು ರಾಜು ಅಂಬಿಗೇರ ತಿಳಿಸಿದರು.

ಅಂಕಿ–ಅಂಶ
₹1 ಕೋಟಿ ಮೊತ್ತದ ಯೋಜನೆ

5 ಹಳೆಯ ಸಿಗ್ನಲ್‌ಗಳ ಆಧುನೀಕರಣ

2 ಹೊಸ ಸಿಗ್ನಲ್‌ ದೀಪ ಅಳವಡಿಕೆ

* * 

ಆಧುನೀಕರಣಗೊಳ್ಳುವ ಸಿಗ್ನಲ್‌ ದೀಪಗಳಿಂದ  ನಗರ ವ್ಯಾಪ್ತಿಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ.  ಸಂಚಾರದಲ್ಲೂ ಶಿಸ್ತು ಮೂಡಲಿದೆ
ಎಂ.ಎನ್‌.ಸಿಂಧೂರ
ಸಂಚಾರ ಠಾಣಾ ಪಿಎಸ್‌ಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT