ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ಉತ್ತಮ ಮಳೆ

Last Updated 11 ಸೆಪ್ಟೆಂಬರ್ 2017, 5:27 IST
ಅಕ್ಷರ ಗಾತ್ರ

ಗದಗ: ಲಕ್ಷ್ಮೇಶ್ವರ, ಗದಗ, ನರೇಗಲ್, ಮುಂಡರಗಿ, ಡಂಬಳ ಹೋಬಳಿ, ನರಗುಂದ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ತಡರಾತ್ರಿ ಉತ್ತಮ ಮಳೆ ಆಗಿದೆ. ಗದಗ, ಡಂಬಳ, ನರಗುಂದಲ್ಲಿ ಶನಿವಾರ ರಾತ್ರಿ 11 ಗಂಟೆಯಿಂದ ಭಾನು ವಾರ ಬೆಳಗಿನವರೆಗೂ ಗುಡುಗು– ಮಿಂಚು ಸಹಿತ ಮಳೆ ಸುರಿದಿದೆ. ಲಕ್ಷ್ಮೇ ಶ್ವರ ಸಮೀಪದ ಶಿಗ್ಲಿಯಲ್ಲಿ ಒಂದು ಗಂಟೆ ಕಾಲ ಮಳೆ ಆರ್ಭಟಿಸಿತು. ಭಾನುವಾರ ಮಧ್ಯಾಹ್ನ ಗದಗ ನಗರ ವ್ಯಾಪ್ತಿಯಲ್ಲಿ ಜಿಟಿಜಿಟಿ ಮಳೆಯಾಗಿದೆ.

ಗದುಗಿನಲ್ಲಿ ಶನಿವಾರ ರಾತ್ರಿ ಸುರಿದ ಮಳೆಯಿಂದ ಜವುಳಗಲ್ಲಿ, ಪಂಚಾಕ್ಷರಿ ನಗರ ಸೇರಿ ಕೆಲ ಪ್ರದೇಶಗಳಲ್ಲಿ ಮನೆ ಒಳಗೆ ನೀರು ನುಗ್ಗಿತು. ವೆಂಕಟೇಶ ಚಿತ್ರ ಮಂದಿರದ ಎದುರಿನ ರಸ್ತೆ, ಹಾತಲಗೇರಿ ನಾಕಾ ಬಳಿ ಕೆಲ ಅಂಗಡಿಗಳಿಗೆ ಚರಂಡಿ ನೀರು ನುಗ್ಗಿತು. ಹಳೆಯ ಬಸ್‌ ನಿಲ್ದಾಣದ ಎದುರಿನ ಮಾಳಶೆಟ್ಟಿ ವೃತ್ತ, ರೈಲು ನಿಲ್ದಾಣ ಸಮೀಪದ ಝೇಂಡಾ ವೃತ್ತ ಸಂಪೂರ್ಣ ಜಲಾವೃತಗೊಂಡು ವಾಹನ ಸವಾರರು ಪರದಾಡಿದರು.

ರಾತ್ರಿ ಮಳೆಯಾಗುತ್ತಿದ್ದರೂ, ಹಗಲಿ ನಲ್ಲಿ ಬಿಸಿಲಿನ ತಾಪದಿಮದ ಸೆಕೆಯ ಅನುಭವವಾಗುತ್ತಿದೆ. ಶನಿವಾರ ಮತ್ತು ಭಾನುವಾರ ಮಧ್ಯಾಹ್ನ ನಗರದಲ್ಲಿ ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖ ಲಾಗಿದೆ. ಗದಗ ಜಿಲ್ಲಾ ವ್ಯಾಪ್ತಿಯಲ್ಲಿ ಭಾನುವಾರವೂ ಮೋಡಬಿತ್ತನೆ ಆಗಿದೆ.

ಹಿಂಗಾರು ಸಂತಸ: ಒಂದು ವಾರದಿಂದ ಜಿಲ್ಲೆಯಲ್ಲಿ ಉತ್ತಮ ಮಳೆ ಆಗುತ್ತಿದ್ದು, ಹಿಂಗಾರು ಬಿತ್ತನೆಗೆ ಬಲ ಬಂದಿದೆ. ಭೂಮಿ ಹದ ಮಾಡಿಕೊಂಡಿರುವ ರೈತರು ಸೂರ್ಯಕಾಂತಿ, ಕುಸುಬಿ, ಕಡಲೆ ಬಿತ್ತನೆ ಮಾಡಲು ಸಿದ್ಧರಾಗುತ್ತಿದ್ದಾರೆ. ಕೆಲವೆಡೆ ಈಗಾಗಲೇ ಬಿತ್ತನೆ ಆಗಿದೆ.  ಮುಂಗಾರಿ ನಲ್ಲಿ ಮಳೆ ಹಾನಿಯಿಂದ ಶೇ 75ರಷ್ಟು ಬೆಳೆಹಾನಿ ಆಗಿದೆ ಎಂದು ಕೃಷಿ ಇಲಾಖೆ ಅಂದಾಜು ಮಾಡಿದೆ. ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ಒಟ್ಟು 2.63 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ನಿಗದಿಪಡಿಸಲಾಗಿದೆ.

ನರಗುಂದ ವರದಿ
ನರಗುಂದ: ಪಟ್ಟಣ ಸೇರಿ ತಾಲ್ಲೂಕಿನ ವಿವಿಧೆಡೆ ಶನಿವಾರ ರಾತ್ರಿ ಉತ್ತಮ ಮಳೆ ಸುರಿದಿದೆ. ಮಳೆಯಿಂದ ಚರಂಡಿಗಳು ತುಂಬಿ ಹರಿದವು. ಇದರಿಂದ ರಸ್ತೆಗಳ ಮೇಲೆ ಕೆಸರು, ಕಲುಷಿತ ನೀರು ನಿಂತು ಸಂಚಾರಕ್ಕೆ ತೊಂದರೆಯಾಯಿತು.

ತುಂಬಿದ ಚೆಕ್ ಡ್ಯಾಂ
ಲಕ್ಷ್ಮೇಶ್ವರ: ಎರಡು ದಿನಗಳಿಂದ ಸಮೀ ಪದ ಆದರಹಳ್ಳಿ ಸುತ್ತ ಉತ್ತಮ ಮಳೆ ಆಗಿದ್ದು, ಗ್ರಾಮದ ಹಳ್ಳಕ್ಕೆ ನಿರ್ಮಿಸಿರುವ ಚೆಕ್‌ ಡ್ಯಾಂ ನೀರಿನಿಂದ ತುಂಬಿದೆ. ಶಾಸಕ ರಾಮಕೃಷ್ಣ ದೊಡ್ಡಮನಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಾಗೇಶ ಲಮಾಣಿ, ಶೇಕಪ್ಪ ಲಮಾಣಿ, ನಾಗೇಶ ಲಮಾಣಿ, ಅಲ್ಲಾಭಕ್ಷ ಇದ್ದರು.

ಶಾಲೆ ಕೊಠಡಿ ಮೇಲೆ ಉರುಳಿದ ಮರ
ಲಕ್ಷ್ಮೇಶ್ವರ: ಸಮೀಪದ ದೊಡ್ಡೂರು ಗ್ರಾಮದಲ್ಲಿ ಶನಿವಾರ ಸಂಜೆ ಸುರಿದ ಮಳೆ ಗಾಳಿಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬೆಳೆ ದಿದ್ದ ನೀಲಗಿರಿ ಬೃಹತ್‌ ಮರ ಬುಡ ಸಹಿತ ಕೊಠಡಿ ಮೇಲೆ ಉರುಳಿ ಬಿದ್ದಿದ್ದು ಕೊಠಡಿಗೆ ಹಾನಿಯಾಗಿದೆ. ಆದರೆ ಯಾವುದೇ ಪ್ರಾಣ ಹಾನಿಯಾಗಿಲ್ಲ. 

ಲಕ್ಷ್ಮೇಶ್ವರ, ಗೊಜನೂರು, ಶಿಗ್ಲಿ, ಸೂರಣಗಿ, ಬಾಲೆಹೊಸೂರು, ಗೋವ ನಾಳ, ಅಡರಕಟ್ಟಿ, ದೊಡ್ಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಶನಿವಾರ ಉತ್ತಮ ಮಳೆ ಆಗಿದ್ದು, ಹಿಂಗಾರು ಬಿತ್ತ ನೆಗೆ ಅನುಕೂಲವಾಗಿದೆ.

ಹೊಲದಲ್ಲಿ ನೀರು
ಡಂಬಳ: ಹೋಬಳಿ ವ್ಯಾಪ್ತಿಯ ಹಿಂಗಾರು ಮಳೆ ಉತ್ತಮವಾಗಿ ಸುರಿಯುತ್ತಿದ್ದು ರೈತರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಕೆಲ ಗ್ರಾಮಗಳಲ್ಲಿ ರೈತರ ಹೊಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದು, ಬೆಳೆ ಹಾನಿ ಆಗಿದೆ. ಹಳ್ಳಕೊಳ್ಳಗಳ ಹರಿ ಯುತ್ತಿದ್ದು, ಹೊಲದ ಬದುಗಳು ಒಡೆದು ತೇವಾಂಶ ಪ್ರಮಾಣ ಹೆಚ್ಚಿರುವುದರಿಂದ ಕೃಷಿ ಚಟುವಟಿಕೆಗಳು  ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ.

ಡಂಬಳ ಹೋಬಳಿಯ ಹಳ್ಳಿಗುಡಿ, ಅತ್ತಿಕಟ್ಟಿ ಬರದೂರ,  ಚಿಕ್ಕವಡ್ಡಟ್ಟಿ ಮೇವುಂಡಿ, ಜಂತ್ಲಿಶಿರೂರ ಹಾರೋ ಗೇರಿ, ಶಿಂಗಟಾಲೂರ, ಕದಾಂಪುರ, ಹಿರೇವಡ್ಡಟ್ಟಿ, ಯಕ್ಲಾಸಪುರ, ಹಳ್ಳಿಕೇರಿ, ಸುತ್ತಲಿನ ಗ್ರಾಮಗಳಲ್ಲಿ  ಹಿಂಗಾರು ಮಳೆ ಉತ್ತಮವಾಗಿ ಸುರಿದಿದೆ.

ತೇವಾಂಶ ಕೊರತೆಯಿಂದ ಒಣಗಿದ್ದ ಹತ್ತಿ, ಮಕ್ಕೆಜೋಳ ಶೇಂಗಾ, ಈರುಳ್ಳಿ, ಸೂರ್ಯಕಾಂತಿ ಬೆಳೆ ಜೀವಕಳೆ ಪಡೆದಿವೆ. ಕೃಷಿಹೊಂಡ ಹಾಗೂ ಚೆಕ್‌ ಡ್ಯಾಂಗಳು ಭರ್ತಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT