ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆ ಗೂಡಾದ ಸರ್ಕಾರಿ ಉರ್ದು ಶಾಲೆ

Last Updated 11 ಸೆಪ್ಟೆಂಬರ್ 2017, 5:57 IST
ಅಕ್ಷರ ಗಾತ್ರ

ಹಾವೇರಿ: ಇಲ್ಲಿನ ಅಶ್ವಿನಿ ನಗರದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಸುಸಜ್ಜಿತ ಶೌಚಾಲಯ, ಆಟದ ಮೈದಾನ ವಿಲ್ಲದೇ ಸಮಸ್ಯೆಗಳ ಗೂಡಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಕಾಮಗಾರಿಗೆ ₹ 14 ಲಕ್ಷ ಮಂಜೂರಾಗಿದ್ದರು, ಈ ವರೆಗೆ ಕಾಮಗಾರಿ ಪ್ರಾರಂಭವಾಗಿಲ್ಲ ಎಂದು ಪೋಷಕರು ದೂರುತ್ತಿದ್ದಾರೆ.

ಸುಸಜ್ಜಿತ ಶೌಚಾಲಯ ಹಾಗೂ ಶಾಲೆಯ ಆವರಣ ಎತ್ತರಿಸಲು 2014 ರಲ್ಲಿ ತಲಾ ₹ 6 ಲಕ್ಷದಂತೆ, ಜಿಲ್ಲಾ ಉಸ್ತು ವಾರಿ ಸಚಿವ ರುದ್ರಪ್ಪ ಲಮಾಣಿ ಹಣ ಮಂಜೂರು ಮಾಡಿ ಭೂಮಿ ಪೂಜೆ ನೆರವೇರಿಸಿದ್ದರು. ಆದರೆ, ಮೂರು ವರ್ಷಗಳೇ ಉರುಳಿದರು ಶೌಚಾಲಯದ ಕಾಮಗಾರಿ ಪ್ರಾರಂಭವಾಗುತ್ತಿಲ್ಲ.

ಅಲ್ಲದೇ ಇದ್ದ ಶೌಚಾಲಯಕ್ಕೆ ಚಾವಣಿ ಇಲ್ಲದೇ, ಸಂಪೂರ್ಣ ಹಾಳಾಗಿದೆ. ಹೀಗಾಗಿ ವಿದ್ಯಾರ್ಥಿನಿಯರು ಪ್ರತಿನಿತ್ಯ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಶಾಲೆಯ ಸುತ್ತಮುತ್ತಲು ದೊಡ್ಡ ದೊಡ್ಡ ಕಟ್ಟಡಗಳಿರುವ ಕಾರಣಕ್ಕೆ, ವಿದ್ಯಾರ್ಥಿನಿ ಯರು ಆ ಚಾವಣಿ ಇಲ್ಲದ ಶೌಚಾ ಲಯಕ್ಕೆ ಹೋಗಲು ಹಿಂಜರಿಯುತ್ತಿದ್ದಾರೆ ಎಂದು ಪೋಷಕ ಎಂ.ಐ.ಪಠಾಣ ತಿಳಿಸಿದರು.

ಶಾಲೆಯ ಆವರಣ ತಗ್ಗಾಗಿರುವ ಕಾರಣಕ್ಕೆ ಶಾಲೆಯ ಮುಂದಿನ ರಸ್ತೆಯ ಮಳೆ ನೀರು ಶಾಲೆಯ ಆವರಣಕ್ಕೆ  ನುಗ್ಗುತ್ತಿದೆ. ಹೀಗಾಗಿ ಶಾಲೆಯ ಆವರಣ ಸಂಪೂರ್ಣ ಮಳೆ ನೀರಿನಿಂದ ತುಂಬಿ ಕೊಂಡು, ವಿದ್ಯಾರ್ಥಿಗಳು ತುಂಬ ತೊಂದರೆ ಅನುಭವಿಸುತ್ತಿದ್ದಾರೆ.

ಈ ಸಮಸ್ಯೆಯನ್ನು ನಿವಾರಿಸಲು ಜಿಲ್ಲಾ ಉಸ್ತುವಾರಿ ಸಚಿವರು ₹ 6 ಲಕ್ಷ ಹಣ ಮಂಜೂರು ಮಾಡಿದ್ದರು, ಆದರೆ ಅದು ಈ ವರೆಗೂ ಕಾಮಗಾರಿ ಪ್ರಾರಂಭ ವಾಗುತ್ತಿಲ್ಲ. ಆದಷ್ಟು ಬೇಗ ಕಾಮಗಾರಿ ಯನ್ನು ಪ್ರಾರಂಭಿಸಬೇಕು ಎಂದು ಪೋಷಕರು ಒತ್ತಾಯಿಸುತ್ತಿದ್ದಾರೆ.

ಅಲ್ಲದೇ 2014–15ನೇ ಸಾಲಿನ ಎಂ.ಎಸ್‌.ಡಿ.ಪಿ. ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡಿದ, ಮೊದಲ ಅಂತಸ್ಥಿನ ಕಟ್ಟಡದ ಕಾಮಗಾರಿ ಡಿಸೆಂಬರ್‌ 2016ರಲ್ಲಿಯೇ ಪೂರ್ಣ ಗೊಂಡಿದೆ. ಆದರೆ, ಈ ವರೆಗೂ ಉದ್ಘಾ ಟನೆಯಾಗಿಲ್ಲ ಎಂದು ಅಬ್ದುಲ್‌ ಖಾದರ್‌ ಎಚ್‌.ಧಾರವಾಡ ತಿಳಿಸಿದರು.

‘ನಾನು  ಈ ಶಾಲೆಗೆ ವರ್ಗಾವಣೆ ಯಾಗಿ ಬಂದು ಕೇವಲ ಆರೇಳು ತಿಂಗಳಾಗಿವೆ. ಆದರೆ, ಈ ವರೆಗೂ ಶಾಲೆಗೆ ಯಾವುದೇ ಕಾಮಕಾರಿ ಆದೇಶ ಪತ್ರ ಬಂದಿಲ್ಲ’ ಎಂದು ಶಾಲೆಯ ಮುಖ್ಯಶಿಕ್ಷಕ ಎಚ್‌.ಎಂ.ಪಡ್ಡೇಶಿ ತಿಳಿಸಿದರು.

* * 

ಮೊದಲ ಅಂತಸ್ತಿನ ಕಟ್ಟಡದ ಕಾಮಗಾರಿ ಪೂರ್ಣಗೊಂಡು ವರ್ಷ ಕಳೆದಿದೆ, ಆದರೆ ಉದ್ಘಾಟನೆ ಯಾಗಿಲ್ಲ. ಅಲ್ಲದೇ, ಅದಕ್ಕೆ ಕೇವಲ ಒಂದು ಅಡಿ ಮಾತ್ರ  ತಡೆಗೋಡೆ ನಿರ್ಮಿಸಿದ್ದರಿಂದ ಅಪಾಯವಿದೆ
ಅಬ್ದುಲಖಾದರ್‌ ಎಚ್‌.ಧಾರವಾಡ
ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT