ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಕನ್ನಡ ವಿ.ವಿ.ಗೆ ಬೆಳ್ಳಿಹಬ್ಬ ಸಂಭ್ರಮ

Last Updated 11 ಸೆಪ್ಟೆಂಬರ್ 2017, 6:18 IST
ಅಕ್ಷರ ಗಾತ್ರ

ಹೊಸಪೇಟೆ: ‘ಹಂಪಿ ಕನ್ನಡ ವಿಶ್ವವಿದ್ಯಾ ಲಯದ ಬೆಳ್ಳಿ ಹಬ್ಬದ ಅಂಗವಾಗಿ ಇದೇ 12ರಿಂದ ಮುಂದಿನ ಒಂದು ವರ್ಷದ ವರೆಗೆ ನಿರಂತರವಾಗಿ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯ ಲಿದ್ದು, ನಾಡಿನ ಪ್ರಜ್ಞಾವಂತರನ್ನು ಆಹ್ವಾನಿಸಲಾಗುವುದು’ ಎಂದು ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ ತಿಳಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಇದೇ 12ರಿಂದ 18ರ ವರೆಗೆ ನಿತ್ಯ ಬೆಳಿಗ್ಗೆ ಸಾಹಿತ್ಯ ಗೋಷ್ಠಿ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇದೇ 13ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿರುವ ‘ಭವಿಷ್ಯದ ಕನ್ನಡ ವಿಶ್ವವಿದ್ಯಾಲಯ’ ಕುರಿತ ಗೋಷ್ಠಿಗೆ ವಿಶ್ರಾಂತ ಕುಲಪತಿ ಚಂದ್ರ ಶೇಖರ ಕಂಬಾರ ಚಾಲನೆ ನೀಡುವರು.

ಮಧ್ಯಾಹ್ನ 3ಕ್ಕೆ ಚಿಂತಕ ಪ್ರೊ.ಜಿ.ಕೆ. ಗೋವಿಂದರಾವ್‌ ಸಾಂಸ್ಕೃತಿಕ ಕಾರ್ಯ ಕ್ರಮಗಳಿಗೆ ಚಾಲನೆ ಕೊಡುವರು. ಮೈಸೂರಿನ ಜನಮನ ತಂಡವು ‘ಜನಪದ ಮತ್ತು ತತ್ವಪದಗಳ ಗಾಯನ ಪ್ರಸ್ತುತಪಡಿಸಿದರೆ, ಬೆಂಗಳೂರಿನ ಕಲಾ ಗಂಗೋತ್ರಿ ತಂಡವು ‘ಮುಖ್ಯಮಂತ್ರಿ’ ನಾಟಕ ನಡೆಸಿಕೊಡಲಿದೆ’ ಎಂದು ಮಾಹಿತಿ ನೀಡಿದರು.

‘ಇದೇ 14ರಂದು ಬೆಳಿಗ್ಗೆ 10.30ಕ್ಕೆ ‘ಕರ್ನಾಟಕದ ಜ್ವಲಂತ ಸಮಸ್ಯೆಗಳು: ನೀರು, ಬರ ನಿರ್ವಹಣೆ’ ಕುರಿತ ಗೋಷ್ಠಿ ಯನ್ನು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್‌ ಅಮೀನಮಟ್ಟು ಉದ್ಘಾಟಿಸುವರು. ಮಧ್ಯಾಹ್ನ 3ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ರಂಗ ಭೂಮಿ ಕಲಾವಿದೆ ಸುಭದ್ರಮ್ಮ ಮನ್ಸೂರ್‌ ಚಾಲನೆ ಕೊಡುವರು. ಬಸವ ರಾಜ ಶಿಗ್ಗಾಂವ ಮತ್ತು ತಂಡ ‘ತತ್ವಪದ ಗಳ ಹಾಡುಗಾರಿಕೆ’ ಮತ್ತು ಬೆಂಗಳೂರಿನ ಏಷಿಯನ್‌ ಥೇಟರ್‌ ‘ವರಾಹ ಪುರಾಣ ನಾಟಕ’ ಪ್ರಸ್ತುತಪಡಿಸಲಿದೆ’ ಎಂದು ಹೇಳಿದರು.

‘15ರಂದು ಬೆಳಿಗ್ಗೆ 10.30ಕ್ಕೆ ‘ಉನ್ನತ ಶಿಕ್ಷಣ: ಸಾಧ್ಯತೆ ಸವಾಲುಗಳು’ ಕುರಿತ ಗೋಷ್ಠಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ ಉದ್ಘಾಟಿಸುವರು. ಮಧ್ಯಾಹ್ನ 3ಕ್ಕೆ ಸಾಂಸ್ಕೃತಿಕ ಕಾರ್ಯ ಕ್ರಮಕ್ಕೆ ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ ಅಧ್ಯಕ್ಷ ಬೆಳಗಲ್ಲು ವೀರಣ್ಣ ಚಾಲನೆ ಕೊಡುವರು. ಕಾಸರಗೋಡಿನ ಸಿರಿಬಾಗಿಲು ವೆಂಕ ಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ತಾಳ ಮದ್ದಳೆ ಕಾರ್ಯಕ್ರಮ, ಹೊಸಪೇಟೆಯ ಭಾವೈಕ್ಯತಾ ವೇದಿಕೆಯು ‘ಧನ್ವಂತರಿ ಚಿಕಿತ್ಸೆ’ ನಾಟಕ ನಡೆಸಿಕೊಡಲಿದೆ’ ಎಂದರು.

‘16ರಂದು ಬೆಳಿಗ್ಗೆ 10.30ಕ್ಕೆ ‘ಕರ್ನಾಟಕದ ಅಭಿವೃದ್ಧಿ: ಸಾಧ್ಯತೆ ಸವಾಲುಗಳು’ ಕುರಿತ ಕಾರ್ಯಕ್ರಮವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾ ಪಕ ಎಂ. ಚಂದ್ರ ಪೂಜಾರಿ ಉದ್ಘಾಟಿಸು ವರು. ಮಧ್ಯಾಹ್ನ 3ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಿರಿಯ ಜಾನಪದ ವಿದ್ವಾಂಸ ಪ್ರೊ.ಹಿ.ಶಿ. ರಾಮಚಂದ್ರೇಗೌಡ ಚಾಲನೆ ಕೊಡುವರು.

ನವಲಗುಂದ ಇಮಾಮ್‌ ಸಾಬ್‌ ವಲ್ಲೆಪ್ಪನವರ್‌ ‘ಡೊಳ್ಳಿನ ಹಾಡು’, ಬೆಂಗಳೂರಿನ ಪ್ರಸಂಗ ತಂಡ ‘ಅನಭಿಜ್ಞ ಶಾಕುಂತಲ’ ನಾಟಕ ಪ್ರಸ್ತುತಪಡಿಸಲಿದೆ’ ಎಂದು ತಿಳಿಸಿದರು.
‘ಸಾಮಾಜಿಕ, ರಾಜಕೀಯ ಕರ್ನಾ ಟಕ: ವರ್ತಮಾನ ಮತ್ತು ಭವಿಷ್ಯ’ ಕುರಿತು ಇದೇ 17ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಗೋಷ್ಠಿಯನ್ನು ಹಿರಿಯ ಸಾಹಿತಿ ಕಮಲಾ ಹಂಪನಾ ಉದ್ಘಾಟಿಸುವರು. ಮಧ್ಯಾಹ್ನ 3ಕ್ಕೆ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ಕೊಡುವರು. ಮಳವಳ್ಳಿಯ ಮಹಾದೇವ ಸ್ವಾಮಿ ಮತ್ತು ತಂಡ ‘ಮಂಟೆಸ್ವಾಮಿ ಕಥಾಭಾಗ’, ಬಳ್ಳಾರಿ ಪತ್ರಕರ್ತರ ತಂಡವು ‘ಅಭಿಮನ್ಯು ಕಾಳಗ ದೊ ಡ್ಡಾಟ’ ಪ್ರಸ್ತುತಪಡಿಸಲಿದೆ’ ಎಂದರು.

‘ಇದೇ 18ರಂದು ಬೆಳಿಗ್ಗೆ 10.30ಕ್ಕೆ ‘ಕರ್ನಾಟಕದ ಸಾಂಸ್ಕೃತಿಕ ವಿದ್ಯಮಾನ ಗಳು’ ಕುರಿತ ಗೋಷ್ಠಿಯನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಕೆ. ಮರುಳಸಿದ್ದಪ್ಪ ಚಾಲನೆ ಕೊಡುವರು. ಮಧ್ಯಾಹ್ನ 3ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ವನ್ನು ಹಿರಿಯ ಸಾಹಿತಿ ಕಾಳೇಗೌಡ ನಾಗವಾರ ಉದ್ಘಾಟಿಸುವರು. ಹೊಸ ಪೇಟೆ ಕನ್ನಡ ಕಲಾ ಸಂಘದಿಂದ ರಂಗಗೀತೆಗಳ ಹಾಡುಗಾರಿಕೆ, ಜೇವ ರ್ಗಿಯ ವಿಶ್ವಜ್ಯೋತಿ ಪಂಚಾಕ್ಷರಿ ನಾಟ್ಯ ಸಂಘದಿಂದ ‘ಕುಂಟಕೋಣ ಮೂಕ ಜಾಣ’ ನಾಟಕ ಪ್ರದರ್ಶನ ನಡೆಯಲಿದೆ’ ಎಂದು ವಿವರಿಸಿದರು.

‘ಗೌರಿ ಲಂಕೇಶ್‌ ಸಾವು ನೋವು ತಂದಿದೆ’
‘ಪತ್ರಕರ್ತೆ ಗೌರಿ ಲಂಕೇಶ್‌ ಸಾವು ನೋವು ತಂದಿದೆ. ಬೆಳ್ಳಿಹಬ್ಬದ ಕುರಿತು ಗೌರಿಯೊಂದಿಗೆ ಮುಖತಃ ಮಾತನಾಡಿದ್ದೆ. ಬಿಡುವು ಮಾಡಿಕೊಂಡು ಕುಟುಂಬ ಸದಸ್ಯ ರೊಂದಿಗೆ ಬರುವುದಾಗಿ ಹೇಳಿದ್ದರು’ ಎಂದು ಪ್ರಶ್ನೆಗೆ ಮಲ್ಲಿಕಾ ಘಂಟಿ ಉತ್ತರಿಸಿದರು. ‘ವಿಶ್ವವಿದ್ಯಾ ಲಯಕ್ಕೆ ಅನುದಾನ ಬಿಡುಗಡೆಗೆ ಸಂಬಂಧಿಸಿ ದಂತೆ ಮುಖ್ಯಮಂತ್ರಿ ಯೊಂದಿಗೆ ಚರ್ಚಿಸುವುದಾಗಿ ಗೌರಿ ಹೇಳಿದ್ದರು. ಆಕೆಯ ಸಾವು ಇಡೀ ಸಾಂಸ್ಕೃತಿಕ ಲೋಕಕ್ಕೆ ದೊಡ್ಡ ಆಘಾತ ಉಂಟು ಮಾಡಿದೆ’ ಎಂದರು.

‘ಪುಸ್ತಕಗಳ ಮೇಲೆ ಶೇ 50 ರಿಯಾಯಿತಿ’
‘ಬೆಳ್ಳಿಹಬ್ಬದ ಅಂಗವಾಗಿ ಇದೇ 12ರಿಂದ 18ರ ವರೆಗೆ ವಿ.ವಿ. ಪ್ರಸಾರಾಂಗದ ಎಲ್ಲ ಪುಸ್ತಕಗಳನ್ನು ಶೇ. 50 ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು. ಪುಸ್ತಕ ಪ್ರಿಯರು ಇದರ ಪ್ರಯೋಜನ ಪಡೆಯಬೇಕು’ ಎಂದು ಕುಲಪತಿ ಪ್ರೊ. ಮಲ್ಲಿಕಾ ಎಸ್. ಘಂಟಿ ತಿಳಿಸಿದರು. ‘ವಿ.ವಿ.ಯಿಂದ ಇದುವರೆಗೆ 1,846 ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಬೇಡಿಕೆ ಇರುವ ಪುಸ್ತಕಗಳನ್ನು ಮರು ಮುದ್ರಣ ಮಾಡುವ ಯೋಜನೆ ಹಾಕಿಕೊಳ್ಳ ಲಾಗಿದೆ’ ಎಂದು ತಿಳಿಸಿದರು.

* * 

ಬೆಳ್ಳಿಹಬ್ಬದ ಕೊನೆ ಹಂತದ ಸಿದ್ಧತಾ ಕೆಲಸ ನಡೆದಿದೆ. ಸುಮಾರು ಐದು ಸಾವಿರ ಜನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ
ಪ್ರೊ.ಮಲ್ಲಿಕಾ ಎಸ್‌. ಘಂಟಿ
ಕುಲಪತಿ ಹಂಪಿ ಕನ್ನಡ ವಿ.ವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT