ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಕರನ್ನು ದುಡಿಮೆ ಹಚ್ಚಿದ ‘ಪುಬ್ಬ’ ಮಳೆ

Last Updated 11 ಸೆಪ್ಟೆಂಬರ್ 2017, 9:11 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಕೆಲವು ದಿನಗಳಿಂದ ತಾಲ್ಲೂಕಿನಾದ್ಯಂತ ಮಳೆಯಾಗುತ್ತಿದೆ. ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ‘ಪುಬ್ಬ’ ಮಳೆ ಕೃಷಿಗೆ ಪೂರಕ ವಾತಾವರಣ ಸೃಷ್ಟಿಸಿದೆ. ರೈತರ ಮುಖದಲ್ಲಿ ಕಳೆ ತಂದಿದೆ.

ಬಿತ್ತನೆ, ಅಂತರ ಬೇಸಾಯ ಮಾಡಲು, ರಸಗೊಬ್ಬರ ಹಾಕಲು ಸಹಕಾರಿಯಾಗಿದೆ. ಕೆಲವು ಕಡೆ ಕೆರೆ ಕುಂಟೆಗಳಿಗೆ ಸ್ವಲ್ಪ ಮಟ್ಟಿಗೆ ನೀರು ಬಂದಿದೆ. ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಗರಿಗೆದರಿವೆ. ಕಾರ್ಮಿಕರ ಕೊರತೆ ಉಂಟಾಗಿದೆ. ಯಾವುದೇ ಗ್ರಾಮದಲ್ಲಿ ಪೂರ್ಣಾವಧಿ ಕೃಷಿ ಕೂಲಿಕಾರರು ಇಲ್ಲ. ತಮ್ಮ ಜಮೀನ ಕೃಷಿ ಚಟುವಟಿಕೆ ಮುಗಿದ ಮೇಲೆ ಮತ್ತೊಬ್ಬರ ಹೊಲಗಳಿಗೆ ಕೆಲಸಕ್ಕೆ ಹೋಗುವುದು ರೂಢಿ. ವರಾರಿ ನೆರವಿನಿಂದ ಮಹಿಳೆಯರು ಒತ್ತಾದ ಪೈರನ್ನು ತೆಳುಗೊಳಿಸುತ್ತಿದ್ದಾರೆ.

ತಾಲ್ಲೂಕಿನಾದ್ಯಂತ ಚೆದುರಿದಂತೆ ಮಳೆಯಾಗಿರುವುದರಿಂದ ರಸಗೊಬ್ಬರಕ್ಕೆ‌ ಬೇಡಿಕೆ ಬಂದಿದೆ. ರೈತರು ಪಟ್ಟಣದ ಗೊಬ್ಬರದ ಅಂಗಡಿಗಳಲ್ಲಿ ಗೊಬ್ಬರ ಖರೀದಿಸಿ ಬೈಕುಗಳಲ್ಲಿ ತೆಗೆದುಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿದೆ.

ಡಿಎಪಿ ಹಾಗೂ ಯೂರಿಯಾ ಖರೀದಿ ಹೆಚ್ಚಿದೆ. ತೇವಾಂಶ ಹೆಚ್ಚಿರುವ ಕಾರಣ ಮಾವಿನ ತೋಟಗಳ ಉಳುಮೆಗೆ ಅವಕಾಶವಾಗುತ್ತಿಲ್ಲ. ಅವರೆ, ತೊಗರಿ, ಅಲಸಂದೆ, ಜೋಳ, ಹುಚ್ಚೆಳ್ಳು ಹೊಲಗಳಲ್ಲೂ ಅಂತರ ಬೇಸಾಯ ಪ್ರಗತಿಯಲ್ಲಿದೆ. ಜಾನುವಾರು ಮೇವಿಗೆ ಗೋವಿನ ಜೋಳ ಬಿತ್ತುವ ಕಾರ್ಯವೂ ನಡೆದಿದೆ. ಈ ಹಿಂದೆ ಸುರಿದ ಮಳೆಗೆ ಬಿತ್ತಲಾದ ಜೋಳದ ಒಟ್ಟುಗಳಲ್ಲಿ ದಂಟು ಮನೆ ಮಂದಿಯನ್ನು ದುಡಿಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT