ಟ್ರೇಲರ್‌ ಬಿಡುಗಡೆ

ಇವರೇ ‘ಹಂಬಲ್‌ ಪೊಲಿಟಿಷಿಯನ್‌ ನಾಗರಾಜ್‌’

ಟೀಸರ್‌ನಲ್ಲಿಯೇ ಭಿನ್ನ ನಿರೂಪಣೆ, ಸಂಭಾಷಣೆಯಿಂದ ಗಮನ ಸೆಳೆದಿದ್ದ ‘ಹಂಬಲ್‌ ಪೊಲಿಟಿಷಿಯನ್‌ ನಾಗರಾಜ್‌’ ಚಿತ್ರದ ಟ್ರೇಲರ್‌ ಸೋಮವಾರ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

ಬೆಂಗಳೂರು: ಟೀಸರ್‌ನಲ್ಲಿಯೇ ಭಿನ್ನ ನಿರೂಪಣೆ, ಸಂಭಾಷಣೆಯಿಂದ ಗಮನ ಸೆಳೆದಿದ್ದ ‘ಹಂಬಲ್‌ ಪೊಲಿಟಿಷಿಯನ್‌ ನಾಗರಾಜ್‌’ ಚಿತ್ರದ ಟ್ರೇಲರ್‌ ಸೋಮವಾರ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

ರಾಜಕಾರಣಿ ನಾಗರಾಜ್ ಇಂಗ್ಲಿಷ್‌ ವ್ಯಾಮೋಹ ಮತ್ತು ಡೈಲಾಗ್‌ ನಗೆಯುಕ್ಕಿಸುತ್ತದೆ. ‘ಪಾಲಿಟಿಕ್ಸ್‌ ಈಸ್‌ ಡರ್ಟಿ.....ಈ ದೇಶಕ್ಕೋಸ್ಕರ ಐಮ್‌ ರೆಡಿ ಟು ಗೋ ಡೌನ್‌ ಆ್ಯಂಡ್ ಡರ್ಟಿ..’ ರಾಜಕಾರಣಿಗಳು ಆಡ ಬಹುದಾದ ಇಂಥ ಅನೇಕ ಸಂಭಾಷೆಗಳಿಗೆ ಹಾಸ್ಯದ ಲೇಪನವಿದೆ. ಚುನಾವಣೆಗೆ ಟಿಕೆಟ್‌ ಪಡೆಯಲು ಹಾಗೂ ಗೆಲುವು ಸಾಧಿಸಲು ರಾಜಕಾರಣಿ ತೊಡುವ ಭಿನ್ನ ವೇಷಗಳ ಅನಾವರಣವನ್ನು ಇಲ್ಲಿ ಕಾಣಬಹುದಾಗಿದೆ. ಟ್ರೇಲರ್‌ ಬಿಡುಗಡೆಯಾದ ದಿನವೇ 30 ಸಾವಿರಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ.

ಸಂಭಾಷಣೆಯಲ್ಲಿ ಕನ್ನಡದೊಂದಿಗೆ ಇಂಗ್ಲಿಷ್‌ ಕೂಡ ಸಮಪ್ರಮಾಣದಲ್ಲಿ ಬಳಕೆಯಾಗಿರುವಂತಿದೆ. ಕಂಗ್ಲಿಂಷ್‌ ಸಂಭಾಷಣೆಯನ್ನು ಒಳಗೊಂಡಿರುವ ಈ ಚಿತ್ರವನ್ನು ಸಾದ್‌ ಖಾನ್‌ ನಿರ್ದೇಶಿಸಿದ್ದಾರೆ. ನಾಯಕನಾಗಿ ನಿರೂಪಕ ಡ್ಯಾನಿಶ್‌ ಸೇಠ್‌ ಕಾಣಿಸಿಕೊಂಡಿದ್ದು, ರೋಜರ್‌ ನಾರಾಯಣ್, ಶೃತಿ ಹರಿಹರನ್‌, ವಿಜಯ್‌ ಚೆಂಡೂರ್, ಸುಮುಖಿ ಸುರೇಶ್‌ ಮುಂತಾದವರ ಅಭಿನಯವಿದೆ.

ಕಿರಿಕ್‌ ಪಾರ್ಟಿ ಖ್ಯಾತಿಯ ರಕ್ಷಿತ್‌ ಶೆಟ್ಟಿ, ಗೋಧಿ ಬಣ್ಣ ಸಾಧಾರಣ ಮೈಕಟ್ಟು ನಿರ್ದೇಶಕ ಹೇಮಂತ್‌ ಎಂ.ರಾವ್‌  ಹಾಗೂ ಪುಷ್ಕರ ಮಲ್ಲಿಕಾರ್ಜುನಯ್ಯ ಚಿತ್ರಕ್ಕೆ ಹಣ ಹೂಡಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಶ್ರಾವ್ಯ ನಾಯಕಾರಾಧನೆ!

ನಾವು ನೋಡಿದ ಸಿನಿಮಾ
ಶ್ರಾವ್ಯ ನಾಯಕಾರಾಧನೆ!

21 Apr, 2018

ಸಿನಿ ಸಂಕ್ಷಿಪ್ತ
‘ಬೆಂಗಳೂರ್‌ನಿಂದ ಕಾಶ್ಮೀರ್’ ಚಿತ್ರೀಕರಣ ಮುಕ್ತಾಯ

‘ಕೃಷ್ಣ ಗಾರ್ಮೆಂಟ್ಸ್` ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಹಾಸನದಲ್ಲಿ ಎಂಟು ದಿನ ಹಾಗೂ ಬೆಂಗಳೂರು ಸುತ್ತಮುತ್ತ ಹತ್ತು ದಿನಗಳ ಚಿತ್ರೀಕರಣ ನಡೆದಿದೆ.

20 Apr, 2018
ತೆರೆಯ ಮೇಲೆ ಮೌನೇಶ್ವರ ಮಹಾತ್ಮೆ

ಸಿನಿಮಾ
ತೆರೆಯ ಮೇಲೆ ಮೌನೇಶ್ವರ ಮಹಾತ್ಮೆ

20 Apr, 2018
ಎನಿ ಟೈಂ ಮನಿ ಅಲ್ಲ; ಅಟೆಂಪ್ಟ್‌ ಟು ಮರ್ಡರ್

ಎಟಿಎಂ
ಎನಿ ಟೈಂ ಮನಿ ಅಲ್ಲ; ಅಟೆಂಪ್ಟ್‌ ಟು ಮರ್ಡರ್

20 Apr, 2018
‘ಸಾಗುವ ದಾರಿಯಲ್ಲಿ’

ಈ ವಾರ ತೆರೆಗೆ
‘ಸಾಗುವ ದಾರಿಯಲ್ಲಿ’

20 Apr, 2018